ಆಪ್ತಸಮಾಲೋಚನೆಯ ಲಾಭಗಳು

ಸೋಮವಾರ, ಮೇ 20, 2019
28 °C

ಆಪ್ತಸಮಾಲೋಚನೆಯ ಲಾಭಗಳು

Published:
Updated:
Prajavani

ಮದುವೆ ಸುಸ್ಥಿರವಾಗಬೇಕು. ಬಾಂಧವ್ಯ ಗಟ್ಟಿಯಾಗಿರಬೇಕು. ಯಾವುದೇ ತೊಂದರೆಗಳು ಬಂದರೂ ಸಂಗಾತಿಗಳ ನಡುವೆ ಬಿರುಕು ಮೂಡಬಾರದು, ಕಂದರ ಹುಟ್ಟಬಾರದು ಎಂಬ ಆಸೆಯಿಂದಲೇ ವ್ಯಕ್ತಿಗಳು ಸಮಾಲೋಚನೆಗೆ ಮುಂದಾಗುತ್ತಾರೆ. ಈ ಸಮಾಲೋಚನೆಯ ಸಂಪೂರ್ಣ ಲಾಭ  ಪಡೆಯುವ ಆಸ್ಥೆಯಿಂದಲೇ ಸಮಾಲೋಚನೆಯಲ್ಲಿ ಪಾಲ್ಗೊಳ್ಳುತ್ತಾರೆ. ವಿವಾಹ ಪೂರ್ವ ಸಮಾಲೋಚನೆಯ ಮೂಲ ಉದ್ದೇಶವೇ ಇದಾಗಿದೆ. ಪರಸ್ಪರ ಅಂಗೀಕರಿಸುವುದು, ಯಾವುದೇ ದೂರುಗಳಿದ್ದರೂ ಅವುಗಳ ನಿಭಾವಣೆಯೇ ಮೂಲ ಲಾಭವೆಂಬುದು ನಮಗೆ ತಿಳಿದಿದೆ. ಇದಲ್ಲದೆಯೂ ಈ ಆಪ್ತ ಸಮಾಲೋಚನೆಯಿಂದ ಹಲವಾರು ಲಾಭಗಳಾಗುತ್ತವೆ. ಅವುಗಳನ್ನಿಲ್ಲಿ ಚರ್ಚಿಸೋಣ.

ಪರಸ್ಪರ ಗುರಿ ಹಾಗೂ ಉದ್ದೇಶಗಳ ನಿರ್ವಹಣೆ: ಮದುವೆಯ ಬಗೆಗೆ ಹುಡುಗನಿಗೂ, ಹುಡುಗಿಗೂ ತಮ್ಮದೇ ಆದ ಪರಿಕಲ್ಪನೆಗಳಿರುತ್ತವೆ. ಆ ಚೌಕಟ್ಟಿನಲ್ಲಿ ಯಶಸ್ವಿ ಮದುವೆಯೆಂಬುದನ್ನು ಅವರಿಬ್ಬರೂ ಹೇಗೆ ಅರ್ಥೈಸುತ್ತಾರೆ ಎನ್ನುವುದರ ಬಗೆಯೂ ಚರ್ಚಿಸಲಾಗುತ್ತದೆ. ಈ ನಿಟ್ಟಿನಲ್ಲಿ ವ್ಯಕ್ತಿಗಳಿಬ್ಬರ ಆಲೋಚನೆ ವಿರುದ್ಧ ದಿಕ್ಕಿನಲ್ಲಿದ್ದರೆ ಮದುವೆಗೆ ಮುನ್ನವೇ ಆ ಸಂಬಂಧದ ಚೌಕಟ್ಟಿನಿಂದ ಹಿಂದೆ ಸರಿಯಬಹುದಾಗಿದೆ. ಇಲ್ಲದಿದ್ದಲ್ಲಿ ಇಬ್ಬರ ಗುರಿ, ಧ್ಯೇಯೋದ್ದೇಶ ಒಂದೇ ದಿಕ್ಕಿನಲ್ಲಿದ್ದರೆ ಅದಕ್ಕಾಗಿ ಬದ್ಧತೆಯಿಂದ ಮುಂದುವರಿಯಬಹುದಾಗಿದೆ. ಇಬ್ಬರ ನಂಬಿಕೆಯನ್ನು ಒಟ್ಟುಗೂಡಿ, ಹೆಜ್ಜೆ ಹಾಕುವುದು ಸುಲಭವಾಗುತ್ತದೆ.

ಪರಸ್ಪರ ಅರಿವು, ಹೊಂದಾಣಿಕೆ ಸಂವಹನ ಶೈಲಿಗಳು: ಓಹ್‌ ಇವೆಲ್ಲವೂ ಬರಿಯ ಪದಗಳು ಎಂದು ಮೇಲ್ನೋಟಕ್ಕೆ ಎನಿಸಬಹುದು. ಆದರೆ ನಿಮ್ಮ ಮತ್ತು ಸಂಗಾತಿಯ ದೌರ್ಬಲ್ಯ ಹಾಗೂ ಸಾಮರ್ಥ್ಯವನ್ನು ಅರಿಯುವುದು ಮುಖ್ಯವಾಗಿರುತ್ತದೆ. ಕೆಲವರು ಸೂಕ್ಷ್ಮ ಮನಸಿನವರಾಗಿರುತ್ತಾರೆ. ಪ್ರತಿಯೊಂದನ್ನೂ ತೀರ ವೈಯಕ್ತಿಕವಾಗಿ ಸ್ವೀಕರಿಸುತ್ತಾರೆ. ಅದನ್ನು ದೂರುಗಳೆಂದೋ, ಅವಮಾನಗಳೆಂದೋ ಪರಿಗಣಿಸುತ್ತಾರೆ.ಅಂಥ ಸಂದರ್ಭದಲ್ಲಿ ಬೇಡವೆಂದರೂ ಸಂಘರ್ಷದ ವಾತಾವರಣ ಮೂಡುತ್ತದೆ. ಈ ಸಣ್ಣಪುಟ್ಟ ಮನಸ್ತಾಪಗಳೇ ಬಿರುಕನ್ನು ತಂದೊಡ್ಡುತ್ತವೆ. ಒಬ್ಬರಿಗೆ ಆತ್ಮಗೌರವ ಎನಿಸಿದ್ದು, ಇನ್ನೊಬ್ಬರಿಗೆ ಅದು ಅಹಂಕಾರವೆನಿಸಬಹುದು. ಇಂಥ ವಿಷಯಗಳನ್ನೆಲ್ಲ ನಾಜೂಕಾಗಿ ನಿಭಾಯಿಸುವ ಬಗೆಯನ್ನು ಈ ಸಮಾಲೋಚನೆಯಲ್ಲಿ ಚರ್ಚಿಸಬಹುದು.

ಸಂಗಾತಿಯನ್ನು ಅರಿಯುವುದು, ಅವರ ಮಾತು, ಧಾಟಿ, ಧ್ವನಿ, ಅವುಗಳನ್ನು ಹೇಗೆ ಕೇಳಬೇಕು, ಅವಗಣನೆ ಮಾಡಬೇಕು, ಉದಾಸೀನ ಮಾಡಬೇಕು, ಎಲ್ಲಿ ಅಕ್ಕರೆಯಿಂದ ಕೇಳಬೇಕು, ಇನ್ನೆಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಇವೆಲ್ಲವೂ ಪರಸ್ಪರ ಸಂವಹನದ ವಿಧಾನವನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತದೆ.

ಮದುವೆಯ ಆತಂಕ ನಿವಾರಣೆ: ಕೆಲವೊಮ್ಮೆ ಪರಸ್ಪರ ಎಷ್ಟೇ ಮೆಚ್ಚುಗೆ, ಪ್ರೀತಿ ಇದ್ದರೂ ಮದುವೆಯೆಂಬುದು ಒಂದು ಸಣ್ಣ ಆತಂಕವನ್ನು ಹುಟ್ಟುಹಾಕುತ್ತದೆ. ಇದು ಜೀವನಪೂರ್ತಿ ನಿಭಾಯಿಸಬೇಕಾದ ಬಾಂಧವ್ಯ ಎಂಬುದೂ ಒಂದು ಬಗೆಯ ಆತಂಕವನ್ನು ಸೃಷ್ಟಿಸಿರುತ್ತದೆ. ಈ ಬಾಂಧವ್ಯದಲ್ಲಿ ಸಂತೋಷ ಸ್ಥಿರವಾಗಿರುತ್ತದೆಯೇ? ಪರಸ್ಪರ ಖುಷಿಯಿಂದ ಇರಬಲ್ಲೆವೆ? ಇಡಬಲ್ಲೆವೆ ಇಂಥ ಪ್ರಶ್ನೆಗಳು ಎಲ್ಲರಲ್ಲಿಯೂ ಒಂದು ಬಗೆಯ ಆತಂಕವನ್ನು ಹುಟ್ಟಿಸಿರುತ್ತವೆ. ವಿವಾಹ ಪೂರ್ವ ಸಮಾಲೋಚನೆಯಲ್ಲಿ ಈ ಆತಂಕವನ್ನು ಕೊನೆಗೊಳಿಸಿ, ಆತ್ಮವಿಶ್ವಾಸದಿಂದ ಮುಂದುವರಿಯುವಂತೆ ಮಾಡುತ್ತದೆ. ಬಾಂಧವ್ಯದ ಮುಂದಿನ ಹಂತವನ್ನು ಆತ್ಮವಿಶ್ವಾಸದಿಂದ ಆರಂಭಗೊಳಿಸಲು ಈ ಆಪ್ತಸಮಾಲೋಚನೆ ಸೂಕ್ತ ವೇದಿಕೆಯಾಗಿದೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !