ಪೊಲೀಸರ ಮಧ್ಯಸ್ಥಿಕೆ ನಿಲ್ಲಿಸಿ: ಡಿಸಿಎಂಗೆ ವಕೀಲರ ಮನವಿ

7

ಪೊಲೀಸರ ಮಧ್ಯಸ್ಥಿಕೆ ನಿಲ್ಲಿಸಿ: ಡಿಸಿಎಂಗೆ ವಕೀಲರ ಮನವಿ

Published:
Updated:

ಬೆಂಗಳೂರು: ‘ಠಾಣೆಗಳಿಗೆ ಬರುವ ಕ್ರಿಮಿನಲ್ ಪ್ರಕರಣಗಳನ್ನು ಪೊಲೀಸರೇ ಇತ್ಯರ್ಥಗೊಳಿಸಲು ಮುಂದಾಗುವುದನ್ನು ನಿಲ್ಲಿಸಬೇಕು’ ಎಂದು ಬೆಂಗಳೂರು ವಕೀಲರ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.

ಈ ಕುರಿತಂತೆ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಹಾಗೂ ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ, ‘ಠಾಣಾಧಿಕಾರಿಗಳು ಯಾವುದೇ ಕಾರಣಕ್ಕೂ ಕ್ರಿಮಿನಲ್ ಹಾಗೂ ಸಿವಿಲ್‌ ಪ್ರಕರಣಗಳಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ದೇಶಿಸಬೇಕು’ ಎಂದು ಕೋರಿದ್ದಾರೆ.

‘ರಾಜ್ಯದಾದ್ಯಂತ ಮ್ಯಾಜಿಸ್ಟ್ರೇಟ್ ಕೋರ್ಟ್‌ಗಳಿಗೆ ಹಾಜರಾಗುವ ಪೊಲೀಸರಲ್ಲಿ ಬಹುತೇಕರು ಸಮವಸ್ತ್ರ ಧರಿಸದೇ ಕಲಾಪಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ಆಕ್ಷೇಪಾರ್ಹ. ಕೋರ್ಟ್‌ಗೆ ಹಾಜರಾಗುವ ಪೊಲೀಸರನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸರದಿ ಆಧಾರದಲ್ಲಿ ನಿಯೋಜಿಸಬೇಕು’ ಎಂದು ಮನವಿ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !