ಏರೋ ಶೋ: ವಿಮಾನ ಹಾರಾಟದಲ್ಲಿ ವ್ಯತ್ಯಯ

7

ಏರೋ ಶೋ: ವಿಮಾನ ಹಾರಾಟದಲ್ಲಿ ವ್ಯತ್ಯಯ

Published:
Updated:

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ‘ಏರೋ ಶೋ’ಗೆ ತಯಾರಿ ಶುರುವಾಗಿದೆ. ವೈಮಾನಿಕ ಪ್ರದರ್ಶನ ನಡೆಯುವ ವೇಳೆಯಲ್ಲಿ ರನ್‌ವೇ ಬಂದ್ ಮಾಡುವುದಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ತಿಳಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ನಿಲ್ದಾಣದ ಪ್ರತಿನಿಧಿ, ‘ಏರೋ ಶೋಗಾಗಿ ಪೈಲಟ್‌ಗಳು ತರಬೇತಿ ನಡೆಸಲಿದ್ದಾರೆ. ಶೋ ವೇಳೆಯಲ್ಲೂ ವಿಮಾನಗಳು ನಿಲ್ದಾಣದ ಅಕ್ಕ–ಪಕ್ಕದಲ್ಲೇ ಹಾರಾಟ ನಡೆಸಬಹುದು. ಅದೇ ವೇಳೆ ನಿಲ್ದಾಣದಿಂದಲೂ ವಿಮಾನಗಳು ಹಾರಾಟ ನಡೆಸಿದರೆ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ರದರ್ಶನ ನಡೆಯುವ ವೇಳೆಯಲ್ಲಿ ರನ್‌ವೇಯನ್ನು  ಬಂದ್‌ ಮಾಡಲು ತೀರ್ಮಾನಿಸಿದ್ದೇವೆ’ ಎಂದಿದ್ದಾರೆ.

‘ರಾತ್ರಿ ಹಾಗೂ ನಸುಕಿನ ವೇಳೆಯಲ್ಲಿ ವಿಮಾನಗಳ ಹಾರಾಟ ಹೆಚ್ಚಿರುತ್ತದೆ. ರನ್‌ವೇ ಬಂದ್‌ ಮಾಡುವುದರಿಂದ ವಿಮಾನಗಳ ಹಾರಾಟದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಪರ್ಯಾಯ ಸಮಯದಲ್ಲಿ ವಿಮಾನಗಳ ಟೇಕಾಫ್ ಹಾಗೂ ಲ್ಯಾಂಡಿಂಗ್‌ ಇರಲಿದೆ’ ಎಂದು ತಿಳಿಸಿದ್ದಾರೆ.

ರನ್‌ವೇ ಬಂದ್‌ ಮಾಡಲಿರುವ ದಿನಾಂಕ, ಸಮಯ

ದಿನಾಂಕ ರನ್‌ವೇ ಬಂದ್ ಸಮಯ ಕಾರಣ
ಫೆ. 14–17 ಮ. 1.30ರಿಂದ 4.30 ತರಬೇತಿ
ಫೆ. 18–19 ಬೆಳಿಗ್ಗೆ 10ರಿಂದ 12, ಮಧ್ಯಾಹ್ನ 2ರಿಂದ 5 ತರಬೇತಿ
ಫೆ.20 ಬೆಳಿಗ್ಗೆ 9 ರಿಂದ 12, ಮಧ್ಯಾಹ್ನ 2ರಿಂದ 5 ಉದ್ಘಾಟನೆ ಹಾಗೂ ಏರೋ ಶೋ
ಫೆ. 21–24 ಬೆಳಿಗ್ಗೆ 10ರಿಂದ 12, ಮಧ್ಯಾಹ್ನ 2ರಿಂದ 5 ಏರೋ ಶೋ

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !