ನಾಲ್ಕು ದಿನದ ಕೃಷಿ ಪ್ರದರ್ಶನಕ್ಕೆ ಚಾಲನೆ

7

ನಾಲ್ಕು ದಿನದ ಕೃಷಿ ಪ್ರದರ್ಶನಕ್ಕೆ ಚಾಲನೆ

Published:
Updated:
Prajavani

ಸೊಲ್ಲಾಪುರ: ‘ಹೊಸ ತಂತ್ರಜ್ಞಾನ, ಬಗೆ ಬಗೆಯ ಬೆಳೆಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಲು, ಈ ಕೃಷಿ ಪ್ರದರ್ಶನ ರೈತರಿಗೆ ನೆರವಾಗಲಿದೆ’ ಎಂದು ಸಿದ್ರಾಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಧರ್ಮರಾಜ ಕಾಡಾದಿ ಹೇಳಿದರು.

ನಗರದ ಹೋಮ ಮೈದಾನದಲ್ಲಿ ಸಿದ್ರಾಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ 41ನೇ ಕೃಷಿ ಪ್ರದರ್ಶನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ‘ರೈತರು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಬೆಳೆಗಳನ್ನು ಮಾತ್ರ ಬೆಳೆಯುತ್ತಾರೆ. ಹೊಸ ವಿಧದ ಬೆಳೆಗಳ ಕುರಿತು ಮಾಹಿತಿ ಪಡೆದುಕೊಳ್ಳಲು ಈ ಕೃಷಿ ಪ್ರದರ್ಶನ ಅನುಕೂಲ’ ಎಂದರು.

ಕೃಷಿ ಸಮಿತಿಯ ಎಂ.ಎನ್.ಕೋನಾಪುರೆ ಮಾತನಾಡಿ, ‘ಕೃಷಿ ಪ್ರದರ್ಶನದಲ್ಲಿ ತೆರೆಯಲಾಗಿರುವ 42 ಮಳಿಗೆಗಳಲ್ಲಿ ರೈತರಿಗೆ ಪ್ರಯೋಜನವಾಗುವ ಕೃಷಿ ಸಲಕರಣೆ, ಔಷಧ, ಸಾವಯವ ಕೃಷಿ ಪದ್ಧತಿ, ವಿವಿಧ ತಳಿಗಳ ಬೀಜ, ಹೂವು, ಹಣ್ಣು, ಕಾಯಿಪಲ್ಲೆ, ಧಾನ್ಯ, ಹಲವು ತಂತ್ರಜ್ಞಾನಗಳ ಕುರಿತು ಸಾಕಷ್ಟು ಮಾಹಿತಿ ದೊರೆಯಲಿದ್ದು, ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ನೀಲಕಂಠ ಕೋನಾಪುರೆ, ಕಾಶಿನಾಥ ದರ್ಗೇ ಪಾಟೀಲ, ಸಿದ್ದೇಶ್ವರ ಬಮಣೆ, ವಿಶ್ವನಾಥ ಲಬ್ಬಾ, ಬಸವರಾಜ ಅಷ್ಟಗಿ, ಗುರು ಮಾಳಗೆ, ಪ್ರೊ.ಯಳೇಕರ, ಸುರೇಶ ಕುಂಬಾರ, ಶಶಿಕಾಂತ ತಳೆ, ರಾಜೇಂದ್ರ ಮಾಯನಾಳೆ, ಸಿದ್ಧೇಶ್ವರ ಸಾಸ್ತುರ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು, ರೈತರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !