ಕೃಷಿ ವಸ್ತು ಪ್ರದರ್ಶನ 16ರಿಂದ

7
ಸೊಲ್ಲಾಪುರದ ಸಿದ್ಧೇಶ್ವರ ಜಾತ್ರಾ ಮಹೋತ್ಸವ

ಕೃಷಿ ವಸ್ತು ಪ್ರದರ್ಶನ 16ರಿಂದ

Published:
Updated:
Prajavani

ಸೊಲ್ಲಾಪುರ: ನಗರದ ಆರಾಧ್ಯದೈವ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಲ್ಲಿನ ಹೋಮ ಮೈದಾನದಲ್ಲಿ ಇದೇ 16ರಿಂದ 20ರವರೆಗೆ ಸಿದ್ಧೇಶ್ವರ ಕೃಷಿ ವಸ್ತು ಪ್ರದರ್ಶನ ನಡೆಯಲಿದೆ ಎಂದು ದೇವಸ್ಥಾನದ ಪಂಚ ಕಮಿಟಿಯ ಅಧ್ಯಕ್ಷ ಧರ್ಮರಾಜ ಕಾಡಾದಿ, ಸಿದ್ಧೇಶ್ವರ ಕೃಷಿ ಪ್ರದರ್ಶನ ಸಮಿತಿಯ ಅಧ್ಯಕ್ಷ ನೀಲಕಂಟಪ್ಪ ಕೋನಾಪುರೆ ತಿಳಿಸಿದರು.

ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಪ್ರತಿ ವರ್ಷ ಕೃಷಿ ವಸ್ತು ಪ್ರದರ್ಶನ ಆಯೋಜಿಸಲಾಗುತ್ತಿದೆ. ಸಾಮಾಜಿಕ ಜಾಲತಾಣ, ಪೋಸ್ಟರ್, ಬ್ಯಾನರ್, ಹೋರ್ಡಿಂಗ್‌ಗಳ ಮೂಲಕ ಈಗಾಗಲೇ ವ್ಯಾಪಕ ಪ್ರಚಾರ ಮಾಡಲಾಗಿದೆ. 5ರಿಂದ 6ಲಕ್ಷ ಜನ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಶುಕ್ರವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರದರ್ಶನದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಕೃಷಿ ಯಂತ್ರೋಪಕರಣ, ಕೃಷಿ ಸಾಹಿತ್ಯ ಪ್ರದರ್ಶನ, ರೈತರಿಗೆ ಕಾರ್ಯಾಗಾರ, ಚರ್ಚಾಗೋಷ್ಠಿ ನಡೆಯಲಿವೆ ಎಂದು ಮಾಹಿತಿ ನೀಡಿದರು.

ಬೀಜ, ಸಸಿ ನೆಡುವ ಸಾಮಗ್ರಿ, ಗೊಬ್ಬರ, ಕೀಟನಾಶಕ, ಪುಷ್ಪ, ರೇಷ್ಮೆ, ಹಸಿರು ಮನೆ, ಪಾಲಿಹೌಸ್, ನೀರಾವರಿ ಉಪಕರಣ, ನೀರಿನ ನಿರ್ವಹಣೆ, ಕೃಷಿ ಯಂತ್ರೋಪಕರಣ, ಹೈನುಗಾರಿಕೆ, ಪಶು ಸಂಗೋಪನೆ, ಕೋಳಿ ಸಾಕಣೆ, ನೀರಿನ ನಿರ್ವಹಣೆ, ಸೌರಶಕ್ತಿ ಸಲಕರಣೆ, ಕೃಷಿ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಮೊದಲಾದವುಗಳಿಗೆ ಸಂಬಂಧಿಸಿದ ಪ್ರದರ್ಶನಗಳಿಗೆ ಅವಕಾಶವಿದೆ ಎಂದು ಹೇಳಿದರು.

ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವವನ್ನು ಅತ್ಯಂತ ವೈಭವದಿಂದ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆಯ ಅಸಂಖ್ಯಾತ ಭಕ್ತರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಸಿದ್ಧೇಶ್ವರ ಕೃಷಿ ಪ್ರದರ್ಶನ ಸಮಿತಿಯ ಸದಸ್ಯರಾದ ಎಂ.ಬಿ.ಚಾಕೋತೆ, ಬಾಳಾಸಾಹೇಬ್ ಬೋಗಡೆ, ಎಂ.ಜಿ.ಕಳಕೆ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !