ಆನೇಕಲ್: ಬಮೂಲ್, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ಹಮ್ಮಿಕೊಂಡಿರುವ ಕಾಲು ಬಾಯಿ ರೋಗ ತಡೆ ಲಸಿಕೆ ಅಭಿಯಾನಕ್ಕೆ ತಾಲ್ಲೂಕಿನ ಕಾಚನಾಯಕನಹಳ್ಳಿಯಲ್ಲಿ ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್ ಚಾಲನೆ ನೀಡಿದರು.

ವಿಶ್ವ ಪಶುವೈದ್ಯಕೀಯ ದಿನದ ಪ್ರಯುಕ್ತ 2026-27ನೇ ಸಾಲಿನ ರಾಸು ವಿಮೆಗೆ ಕಾರ್ಯಕ್ರಮವದಲ್ಲಿ ಚಾಲನೆ ನೀಡಲಾಯಿತು.

ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್ ಮಾತನಾಡಿ, ಜಾನುವಾರು ರೋಗ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮದಡಿ ಪ್ರತಿ 6 ತಿಂಗಳಿಗೊಮ್ಮೆ ಕಾಲು ಬಾಯಿ ರೋಗದ ಲಸಿಕೆ ಹಾಕಿಸುವುದು ಕಡ್ಡಾಯ. ಜಾನುವಾರು ಆರೋಗ್ಯ ಕಾಪಾಡಬೇಕಾದುದ್ದು ಪಶುಪಾಲನ ಇಲಾಖೆಯ ಜವಾಬ್ದಾರಿಯಾಗಿದೆ. ರಾಸುಗಳನ್ನೇ ನಂಬಿರುವ ರೈತರಿಗೆ ಆರ್ಥಿಕ ಸಂಕಷ್ಟಗಳನ್ನು ತಡೆಯಲು ಈ ಲಸಿಕೆ ಅವಶ್ಯಕವಾಗಿದೆ ಎಂದು ತಿಳಿಸಿದರು.

ವೈರಾಣುವಿನಿಂದ ಬರುವ ಸಾಂಕ್ರಾಮಿಕ ರೋಗ ತಡೆಗೆ ಲಸಿಕೆ ಉಪಯುಕ್ತವಾಗಿದೆ. ಹಾಗಾಗಿ ರೈತರು ನಿರ್ಲಕ್ಷ್ಯ ವಹಿಸದೇ ಕಡ್ಡಾಯವಾಗಿ ಈ ಲಸಿಕೆ ಹಾಕಿಸಬೇಕು. ತಾಲ್ಲೂಕಿನಲ್ಲಿ 25 ಸಾವಿರ ರಾಸು ಇದ್ದು, ಪ್ರತಿಯೊಂದು ರಾಸಿಗೂ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದರು.

ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕರು ಶಿವರಾಮ ಪಾಟೀಲ್, ಪಶುವೈದ್ಯಾಧಿಕಾರಿ ಡಾ.ಧನಂಜಯ, ಬಮೂಲ್ ಶಿಥಲ ಕಚೇರಿಯ ಉಪವ್ಯವಸ್ಥಾಪಕ ಡಾ.ಸಿ.ಜಿ.ಸುರೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-15-1022857737

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.