ಔರಾದ್: ತಾಲ್ಲೂಕಿನ ಚಿಂತಾಕಿ ಗ್ರಾಮದಲ್ಲಿ 12 ಕುರಿಗಳು ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಮೃತಪಟ್ಟಿವೆ.

ಕುರಿಗಾಹಿ ಕೃಷ್ಣಪ್ಪ ಕೋಳಿ ಎಂಬುವರ ಮನೆಯಲ್ಲಿನ 7 ಹಾಗೂ ಹೊಲದಲ್ಲಿನ 5 ಕುರಿಗಳು ಸಾವನ್ನಪ್ಪಿವೆ.

ಕೃಷ್ಣಪ್ಪ ಕುಟುಂಬ ಕುರಿ ಸಾಕಿ ಜೀವಸಾಗಿಸುತ್ತಿದೆ. ಒಂದೊಂದು ಕುರಿ ₹20 ಸಾವಿರದಿಂದ ದಿಂದ ₹25 ಸಾವಿರಕ್ಕೆ ಮಾರಾಟವಾಗುತ್ತದೆ. ಇವರ ಬಳಿ ಇರುವ 25 ಕುರಿಗಳ ಪೈಕಿ 12 ಕುರಿಗಳು ಏಕಕಾಲಕ್ಕೆ ಮೃತಪಟ್ಟಿದ್ದು ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು ಎಂದು ಚಿಂತಾಕಿಯ ಚೇತನ ಫುಲಾರಿ ಆಗ್ರಾಹಿಸಿದ್ದಾರೆ.

ಚಿಂತಾಕಿಯ ಕೃಷ್ಣಪ್ಪ ಎಂಬುವರ ಕುರಿಗಳಿಗೆ ಮೈಕೋಪ್ಲಾಸ್ಮಾ ಸೋಂಕು ಕಾಣಿಸಿಕೊಂಡಿದೆ. ಇದು ಸಾಮಾನ್ಯಾಗಿ ಕಲುಷಿತ ನೀರು ಸೇವನೆಯಿಂದ ಬರುತ್ತದೆ. ಮಾಹಿತಿ ತಿಳದ ಕೂಡಲೇ ನಮ್ಮ ವೈದ್ಯರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಏಳು ಕುರಿಗಳು ಸತ್ತಿವೆ ಎಂದು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಫಯೀಮ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-33-849148108

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.