ಬೀದರ್: ‘ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಕಳೆದ ಏಳು ವರ್ಷಗಳಿಂದ ನೀಡುತ್ತಿದ್ದ ‘ನಾನ್ ಪ್ರ್ಯಾಕ್ಟಿಸಿಂಗ್ ಅಲೋವೆನ್ಸೆಸ್’ (ಎನ್ಪಿಎ) ದಿಢೀರನೆ ನಿಲ್ಲಿಸಬೇಕೆಂದು ಸರ್ಕಾರ ನೀಡಿರುವ ನಿರ್ದೇಶನ ಮಾರಕವಾಗಿದೆ’ ಎಂದು ವಿವಿ ಬೀದರ್ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚನ್ನಪ್ಪಗೌಡ ಬಿರಾದಾರ ತಿಳಿಸಿದರು.

ಸರ್ಕಾರದ ಆದೇಶವು ಪ್ರಾಧ್ಯಾಪಕರನ್ನು ಸಂಕಷ್ಟಕ್ಕೆ ದೂಡುತ್ತದೆ. ಇದು ಪ್ರಾಧ್ಯಾಪಕರ ಹಿತರಕ್ಷಣೆಗೆ ಹಾಗೂ ಚಾಲ್ತಿಯಲ್ಲಿರುವ ನೀತಿ ನಿಯಮಗಳಿಗೆ ವಿರುದ್ಧವಾದುದು ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪಶು ವೈದ್ಯಕೀಯ ವಿವಿ ಪ್ರಾಧ್ಯಾಪಕರು ಪಡೆಯುತ್ತಿರುವ ಎನ್ಪಿಎ ಭತ್ಯೆ ನಿಯಮಬಾಹಿರವಾಗಿಲ್ಲ. ಸಂಪೂರ್ಣ ಕಾನೂನುಬದ್ಧವಾಗಿದೆ. ಪಶು ಸಂಗೋಪನೆ ಅಭಿವೃದ್ಧಿಗೆ ಪೂರಕವಾಗಿದೆ. ಈ ವೇತನವನ್ನು ನಂಬಿಕೊಂಡು ಹಲವು ಶಿಕ್ಷಕರು ಗೃಹಸಾಲ, ಮಕ್ಕಳ ಶಿಕ್ಷಣದ ವೆಚ್ಚಗಳಂಥ ದೀರ್ಘಕಾಲದ ಆರ್ಥಿಕ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೋಧಕ ಸಮುದಾಯಕ್ಕೆ ಈ ನಿರ್ಧಾರ ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡುತ್ತದೆ ಎಂದು ತಿಳಿಸಿದರು.

ಪಶು ವಿವಿ ವ್ಯಾಪ್ತಿಯ ಕಾಲೇಜುಗಳು ರೈತರಿಗೆ ಉಚಿತ ಚಿಕಿತ್ಸೆ, ರೋಗಪತ್ತೆ ಸೇರಿದಂತೆ ಹಲವು ರೀತಿಯ ಸೇವೆ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡುತ್ತಿವೆ. ಹೀಗಾಗಿ ಭಾರತ ಸರ್ಕಾರದ 2016ರ ವಿಸಿಐ, ಐಸಿಎಆರ್ ಆದೇಶಗಳು ಪಶು ವೈದ್ಯಕೀಯ ಬೋಧಕ ಸಿಬ್ಬಂದಿ ಎನ್ಪಿಎ ಪಡೆಯಲು ಅರ್ಹರು ಎಂದು ಹೇಳುತ್ತವೆ. 2017ರಲ್ಲಿ ಭಾರತ ಸರ್ಕಾರದ ಹಣಕಾಸು ಸಚಿವಾಲಯ ಶೇ 20ರಷ್ಟು ಭತ್ಯೆ ನೀಡಬೇಕೆಂದು ಆದೇಶ ನೀಡಿದೆ. ಇದೀಗ ಹಠಾತ್ ವೇತನ ಕಡಿತಗೊಳಿಸಿದರೆ ಮೂಕ ಪ್ರಾಣಿಗಳ ಸೇವೆ ಮಾಡುವ ಪ್ರಾಧ್ಯಾಪಕರ ಮೂಕವೇದನೆ ಆಲಿಸುವವರು ಯಾರು? ಸರ್ಕಾರದ ಈ ನೀತಿ ಮಾನವ ಹಕ್ಕುಗಳಿಗೆ ವಿರುದ್ಧವಾದುದು ಎಂದು ತಿಳಿಸಿದರು.

7ನೇ ಕೇಂದ್ರ ವೇತನ ಆಯೋಗದ ಅಡಿಯಲ್ಲಿ ರಾಜ್ಯದ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ವೇತನ ಪರಿಷ್ಕರಣೆ ಜಾರಿಗೊಳಿಸುವಾಗ ಬೋಧಕರಿಗೆ ಎನ್ಪಿಎ ಘಟಕ ಸೇರಿಸುವ ಬಗ್ಗೆ ಪ್ರಸ್ತಾವ ಸಲ್ಲಿಸಲು ವಿವಿಗೆ ಸೂಚನೆ ನೀಡಿದೆ. ಅದರಂತೆ ಅಂತಿಮವಾಗಿ ಪಶು ವೈದ್ಯಕೀಯ ವಿವಿ ಆದೇಶ ಹೊರಡಿಸಿ 2019ರ ಏ. 1ರಂದು ವೇತನದಲ್ಲಿ ಎನ್ಪಿಎ ಸೇರಿಸುವುದು ವಿಶ್ವವಿದ್ಯಾಲಯದ ಏಕಪಕ್ಷೀಯ ನಿರ್ಧಾರವಾಗಿರಲಿಲ್ಲ. ಪಶಸಂಗೋಪನಾ ಮತ್ತು ಮೀನುಗಾರಿಕೆ ಇಲಾಖೆಯ ನಿರ್ದೇಶನದ ಮೇಲೆಯೇ ಆರಂಭಗೊಂಡಿದೆ. 2008ರ ಆಗಸ್ಟ್ 7ರ ಸರ್ಕಾರದ ಪತ್ರವೇ ಇದಕ್ಕೆ ಸ್ಪಷ್ಟ ನಿದರ್ಶನ ಎಂದು ಹೇಳಿದರು.

ಸಂಘದ ಸಂಘಟನಾ ಕಾರ್ಯದರ್ಶಿ ವಿದ್ಯಾಸಾಗರ, ಸಂಘದ ಕಲ್ಯಾಣ ಕರ್ನಾಟಕ ವಿಭಾಗದ ಉಪಾಧ್ಯಕ್ಷ ಶ್ರೀನಿವಾಸ ಶೆಟ್ಟಿ, ಮಹಿಳಾ ಘಟಕದ ಶಿಕ್ಷಕಿ ಮಾಲಾಶ್ರೀ, ಸಂಘದ ಎಸ್ಸಿ/ಎಸ್ಟಿ ವಿಭಾಗದ ಸಂಘಟನಾ ಕಾರ್ಯದರ್ಶಿ ಸಂಜೀವಕುಮಾರ ಟೋಪನ್, ವಿಜಯಲಕ್ಷ್ಮೀ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-33-628794481

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.