ಚಿಕ್ಕೋಡಿ: ಗೋಶಾಲೆ ಸ್ಥಾಪಿಸುವ ಮೂಲಕ ದೇಸಿ ಹಸುಗಳ ರಕ್ಷಣೆ ಮಾಡಬೇಕಾದ ಗುರುತರ ಜವಾಬ್ದಾರಿ ರೈತರದ್ದಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.

ತಾಲ್ಲೂಕಿನ ಬಸವನಾಳಗಡ್ಡೆಯಲ್ಲಿ ವೇದಾಮೃತ ಗೋಶಾಲಾ ಚಾರಿಟೆಬಲ್ ಟ್ರಸ್ಟ್ನಿಂದ ತೆರೆಯಲಾದ ಗೋಶಾಲೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವರಾಜ ಮಗದುಮ್ಮ ಅವರು ತೆರೆದಿರುವ ಗೋಶಾಲೆಯಲ್ಲಿ ಮುಂಬರುವ ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಹಸುಗಳಿಗೆ ಆಶ್ರಯ ದೊರೆಯುವಂತಾಗಲಿ’ ಎಂದು ಆಶಿಸಿದರು.

ಬೆಂಗಳೂರಿನ ಡಿವೈಎಸ್ಪಿ ಬಸವರಾಜ ಮಗದುಮ್ಮ ಮಾತನಾಡಿ, ‘ದೇಸಿ ಹಸುಗಳ ಸಾಕಣೆಯಿಂದ ಕೃಷಿ ಹಾಗೂ ಕೃಷಿಕ ಉಳಿಯಲು ಸಾಧ್ಯ. ಜವಾರಿ ಆಕಳುಗಳನ್ನು ಸಾಕುವ ಮೂಲಕ ರೈತರು ಕೃಷಿಯನ್ನು ಶ್ರೀಮಂತಗೊಳಿಸಬೇಕು. ನಶಿಸಿ ಹೋಗುತ್ತಿರುವ ದೇಸಿ ತಳಿಯನ್ನು ಉಳಿಸುವುದೇ ಗೋಶಾಲೆ ಸ್ಥಾಪನೆಯ ಉದ್ದೇಶವಾಗಿದೆ’ ಎಂದರು.

ಬೆಂಗಳೂರಿನ ಉದ್ಯಮಿ ಎಂ. ನವೀನಕುಮಾರ ಮಾತನಾಡಿ, ‘ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಮಣ್ಣಿನ ಋಣ ತೀರಿಸಬೇಕಿದೆ. ಗೋಶಾಲೆಯೇ ಎಲ್ಲಕ್ಕಿಂತ ದೊಡ್ಡ ದೇವಾಲಯ’ ಎಂದರು.

ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ನಿಪ್ಪಾಣಿಯ ಪ್ರಾಣಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಾಮೃತ ಗೋಶಾಲಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚನ್ನಪ್ಪ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಆಶಿಷ್ ಜೈನ್, ಶಿವಾನಿ ಮಗದುಮ್ಮ, ಬೆಂಗಳೂರಿನ ಡಿವೈಎಸ್ಪಿ ಪುಟ್ಟು ಓಬಳರೆಡ್ಡಿ, ಶಿಲ್ಪಾ ನವೀನಕುಮಾರ, ರಾಮಾ ಮಾನೆ, ಶಿವಮೂರ್ತಿ ಪಡಲಾಳೆ, ವಿಜಯ ಮಾಂಜರೇಕರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-21-269055859

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.