ಕೊಯಿಲ (ಉಪ್ಪಿನಂಗಡಿ): ರೈತರ ಆರ್ಥಿಕ ಅಭಿವೃದ್ಧಿ ಹಾಗೂ ಸರ್ವತೋಮುಖ ಬೆಳವಣಿಗೆಗಾಗಿ ಸುಧಾರಿತ ಕೋಳಿ ಸಾಕಾಣಿಕೆ ಅತ್ಯವಶ್ಯವಾಗಿದ್ದು, ರೈತರ ಆದಾಯ ದ್ವಿಗುಣವಾಗಲು ಇದು ಉತ್ತಮ ಉಪಕಸುಬು ಎಂದು ಬೀದರ್ನ ಕರ್ನಾಟಕ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಹೇಳಿದರು.

ಕೊಯಿಲ ಪಶು ವೈದ್ಯಕೀಯ ಕಾಲೇಜು, ಎಐಪಿಆರ್ಪಿ ಕುಕ್ಕುಟ ಸಂವರ್ಧನೆ, ಕುಕ್ಕುಟ ವಿಜ್ಞಾನ ವಿಭಾಗ ಪಶು ವೈದ್ಯಕೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ಎಸ್ಸಿಎಸ್ಡಿ ಯೋಜನೆಯಡಿಯಲ್ಲಿ ‘ಸುಧಾರಿತ ಕೋಳಿ ಸಾಕಾಣಿಕೆ ತರಬೇತಿ’ ಸಮಾರೋಪದಲ್ಲಿ ಅವರು ಮಾತನಾಡಿದರು.

ಕೊಯಿಲ ಪಶು ವೈದ್ಯಕೀಯ ಮಹಾ ವಿದ್ಯಾಲಯದ ಡೀನ್ ಡಾ.ಶಿವಕುಮಾರ್ ಅಧ್ಯಕ್ಷತೆ ವಹಿಸಿ, ಕೋಳಿ ಸಾಕಾಣಿಕೆಯು ಕಡಿಮೆ ಸಮಯದಲ್ಲಿ ಶ್ರಮದಾಯವಲ್ಲದ ನಿವ್ವಳ ಲಾಭ ಪಡೆಯುವಂತಹ ಕಸುಬಾಗಿದೆ, ರೈತರು ಕೃಷಿಯ ಜೊತೆಗೆ ಕೋಳಿ ಸಾಕಾಣಿಕೆಯನ್ನು ಮಾಡುವುದರಿಂದ ನಿರಂತರ ಆದಾಯ ಪಡೆಯಬಹುದು ಎಂದರು.

ಕಾಲೇಜಿನ ಪ್ರಾಧ್ಯಾಪಕ ಡಾ.ಮಂಜುನಾಥ ಪಾಟೀಲ್, ಸಹ ಪ್ರಾಧ್ಯಾಪಕರಾದ ಡಾ.ಅರುಣ್ ಸೋಮಗೊಂಡ, ಡಾ.ರಶ್ಮಿ, ಡಾ.ಹರಿಣಿ, ಡಾ.ಧರಣೇಶ್, ಡಾ.ರಜತ್ ಸಾಗರ್ ಅವರು ತರಬೇತಿ ನೀಡಿದರು.

ಕಡಬ ತಾಲ್ಲೂಕಿನ ಕೊಯಿಲ, ರಾಮಕುಂಜ, ಹಳೆನೇರೆಂಕಿ ಗ್ರಾಮದ 35 ರೈತರು, ರೈತ ಮಹಿಳೆಯರು ಹಾಗೂ ಗ್ರಾಮೀಣ ಯುವಕರು ತರಬೇತಿ ಪಡೆದರು. ತರಬೇತಿ ಪಡೆದ ಫಲಾನುಭವಿಗಳಿಗೆ ಕೋಳಿ ಮರಿಗಳ ಜೊತೆಗೆ ಅವುಗಳಿಗೆ ಆಹಾರ ನೀಡುವ ಪಾತ್ರೆ, ನೀರುಣಿಕೆ, ಕೋಳಿಗಳ ತಿಂಡಿ ಮಿಶ್ರಣವನ್ನು ವಿತರಿಸಲಾಯಿತು. ಡಾ.ತೇಜಸ್ವಿನಿ ಸ್ವಾಗತಿಸಿ, ಡಾ.ಸಾಗರ್ ಆರ್.ಎಸ್. ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-29-571118710

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.