ಹಾರೋಹಳ್ಳಿ: ತಿರುಮಲ ತಿರುಪತಿ ದೇವಸ್ಥಾನದಿಂದ(ಟಿಟಿಡಿ) ಎರಡು ಲಕ್ಷ ಲೀಟರ್ ತುಪ್ಪ ಪೂರೈಸುವಂತೆ ಬಮುಲ್ ಬೇಡಿಕೆ ಸಲ್ಲಿಸಿದ್ದಾರೆ ಎಂದು ಹಾರೋಹಳ್ಳಿ ತಾಲ್ಲೂಕು ಬಮುಲ್ ನಿರ್ದೇಶಕ ಹೆಚ್.ಎಸ್.ಹರೀಶ್ ಕುಮಾರ್ ಹೇಳಿದ್ದಾರೆ.

ಹಾರೋಹಳ್ಳಿ ತಾಲ್ಲೂಕಿನ ಕೀರಣಗೆರೆ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಕಾಲುಬಾಯಿ ಲಸಿಕೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಿರುಪತಿ ಲಡ್ಡು ತಯಾರಿಕೆಗೆ ಬಮುಲ್ ತುಪ್ಪ ಬಳಕೆಯಾಗಲಿದೆ. ಬಮುಲ್ ಕ್ಷೀರ ಉತ್ಪನ್ನಗಳ ಗುಣಮಟ್ಟಕ್ಕೆ ಸಾಟಿ ಇಲ್ಲ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದರು.

ರಾಸುಗಳಿಗೆ ಜಿಪಿಎಸ್ ಮಾದರಿಯ ಚಿಪ್ ಅಳವಡಿಸಲು ಚಿಂತನೆ ನಡೆದಿದೆ. ಅದನ್ನು ಅಳವಡಿಸಿದರೆ ಹಸು ಕಳ್ಳತನವಾದರೆ ಸುಲಭವಾಗಿ ಪತ್ತೆ ಹಚ್ಚಬಹುದು ಎಂದರು.

ರೈತರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಬೇಕು. ಅಕಸ್ಮಾತ್ ಮರಣ ಹೊಂದಿದರೆ ಬಮುಲ್ನಿಂದ ಸಹಾಯಧನ ದೊರೆಯಲಿದೆ. ಈ ಬಾರಿ ವಿಮೆ ಸಹಾಯಧನದ ಮೊತ್ತವನ್ನು ₹1ಲಕ್ಷದಿಂದ ₹1.20 ಲಕ್ಷಕ್ಕೆ ಏರಿಸಲಾಗಿದೆ. ಮಸಲ್ ಸ್ಕ್ಯಾನಿಂಗ್ ಮೂಲಕ ವಿಮೆ ಮಾಡಲಾಗುತ್ತಿದೆ. ಮುಂದೆ ಹೈನುಗಾರಿಕಾ ಕ್ಷೇತ್ರಕ್ಕೆ ಬೇಡಿಕೆ ಬರಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ರೈತರು ಹಸುಗಳನ್ನು ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು.

ಗ್ಯಾರಂಟಿ ಸಮಿತಿಯ ತಾಲ್ಲೂಕು ಅಧ್ಯಕ್ಷ ಅಶೋಕ್, ಕೀಜರ್ ಪಾಶಾ, ಪಶು ಇಲಾಖೆಯ ಕುಮಾರ್, ಬಮೂಲ್ನ ರಾಕೇಶ್ ಅಗಡಿ, ವಿಸ್ತರಣಾಧಿಕಾರಿ ಪ್ರವೀಣ್, ಕೀರಣಗೆರೆ ಗ್ರಾಮದ ಹೊಂಬಾಳೆಗೌಡ, ನವೀನ್ ಕುಮಾರ್, ಮುಖ್ಯ ಕಾರ್ಯ ನಿರ್ವಾಹಕರಾದ ಕೃಷ್ಣೇಗೌಡ, ಹೊನ್ನಗಿರಿಗೌಡ, ಪ್ರಕಾಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-14-392533629

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.