ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ಶುಕ್ರವಾರ ನಡೆಯುವ ದನಗಳ ಸಂತೆ, ರೈತರ ಹಾಗೂ ಹೈನೋದ್ಯಮದಲ್ಲಿ ತೊಡಗಿರುವವರ ಪ್ರಮುಖ ವ್ಯಾಪಾರ ಕೇಂದ್ರವಾಗಿ ರೂಪುಗೊಂಡಿದೆ.

ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳು ಮತ್ತು ನೆರೆಯ ರಾಜ್ಯಗಳಿಂದ ಸಾವಿರಾರು ರೈತರು ಇಲ್ಲಿಗೆ ಬಂದು, ದನ, ಎಮ್ಮೆ, ಕೋಣ ಹಾಗೂ ಎತ್ತುಗಳ ಖರೀದಿ ಮತ್ತು ಮಾರಾಟ ನಡೆಸುವುದು ಹತ್ತಾರು ದಶಕಗಳಿಂದ ನಡೆದುಕೊಂಡು ಬಂದಿದೆ.

‘ಈ ಸಂತೆಗಳಲ್ಲಿ ಸಾವಿರಾರು ದನಕರುಗಳ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ಪ್ರತಿ ಜಾನುವಾರಿಗೂ ಅದರ ಗುಣಮಟ್ಟ, ಆರೋಗ್ಯ ಮತ್ತು ಉತ್ಪಾದನಾ ಸಾಮರ್ಥ್ಯದ ಆಧಾರದ ಮೇಲೆ ದರ ನಿಗದಿಯಾಗುತ್ತದೆ. ವಿಶೇಷವಾಗಿ ಹಸು ಹಾಗೂ ಎಮ್ಮೆಗಳಿಗೆ, ಅವು ಎಷ್ಟು ಕರುಗಳನ್ನು ನೀಡಿವೆ? ದಿನಕ್ಕೆ ಎಷ್ಟು ಹಾಲು ಕೊಡುತ್ತವೆ ಎಂಬ ಅಂಶಗಳನ್ನು ಪರಿಗಣಿಸಿ ಬೆಲೆ ನಿಗದಿ ಮಾಡಲಾಗುತ್ತದೆ’ ಎಂದು ಗಂಡಸಿ ಹೋಬಳಿಯ ಹೆಗ್ಗಟ್ಟ ಗ್ರಾಮದ ರೈತ ಚಂದ್ರಣ್ಣ ತಿಳಿಸಿದರು.

ಸಂತೆಯಲ್ಲಿ ಎಮ್ಮೆಗಳಿಗೆ ₹60 ಸಾವಿರದಿಂದ ₹1 ಲಕ್ಷದವರೆಗೆ, ಹಸುಗಳಿಗೆ ₹45 ಸಾವಿರದಿಂದ ₹1.50 ಲಕ್ಷದವರೆಗೆ ಬೆಲೆ ದೊರೆಯುತ್ತದೆ. ಕರುಗಳಿಗೂ ಬೇಡಿಕೆ ಇದ್ದು, ಅವುಗಳ ಗಾತ್ರ ಮತ್ತು ತಳಿಯನ್ನು ಅವಲಂಬಿಸಿ ₹2 ಸಾವಿರದಿಂದ ₹15 ಸಾವಿರದವರೆಗೆ ಮಾರಾಟವಾಗುತ್ತವೆ.

ಹತ್ತಿರದ ಗ್ರಾಮಗಳಿಂದ ರೈತರು ತಮ್ಮ ದನಗಳನ್ನು ನಡೆದುಕೊಂಡೇ ಮಾರುಕಟ್ಟೆಗೆ ತರುತ್ತಾರೆ. ದೂರದ ಊರುಗಳಿಂದ ಮಿನಿ ಲಾರಿಗಳಲ್ಲಿ ಸಾಗಿಸಿ ಮಾರಾಟ ಮಾಡುವುದೂ ಸಾಮಾನ್ಯವಾಗಿದೆ. ಖರೀದಿದಾರರು ಕೂಡ ದನಗಳನ್ನು ತಮ್ಮ ಊರಿಗೆ ಲಾರಿಗಳ ಮೂಲಕ ಸಾಗಿಸುತ್ತಾರೆ.

ಕೆಲ ರೈತರು ತಮಗೆ ನಿರೀಕ್ಷಿತ ಬೆಲೆ ಸಿಗದಿದ್ದರಿಂದ ಮಾರಾಟವನ್ನು ಮುಂದೂಡುತ್ತಾರೆ. ‘ನಾನು ಸಾಕಿದ ಹಸುವಿಗೆ ತಕ್ಕ ದರ ಸಿಗಲಿಲ್ಲ. ಹೀಗಾಗಿ ಮುಂದಿನ ವಾರ ಮತ್ತೆ ತರಲು ನಿರ್ಧರಿಸಿದ್ದೇನೆ’ ಎಂದು ಅರಸೀಕೆರೆ ತಾಲ್ಲೂಕಿನ ಬಾಣಾವರದ ಶಿವು ತಿಳಿಸಿದರು.

ಚನ್ನರಾಯಪಟ್ಟಣದ ಈ ದನಸಂತೆಗೆ ಬೆಂಗಳೂರು, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ರೈತರು ಹಾಗೂ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಿಂದಲೂ ರೈತರು ಬರುತ್ತಾರೆ. ಇದು ಪ್ರಾದೇಶಿಕ ಮಟ್ಟದಲ್ಲಿ ಪ್ರಮುಖ ಪಶು ಮಾರುಕಟ್ಟೆಯಾಗಿ ಮಾರ್ಪಾಡಾಗಿದೆ.

ಪ್ರತಿ ಶುಕ್ರವಾರದ ಸಂತೆ ಮಾತ್ರವಲ್ಲದೇ, ವರ್ಷಾಂತ್ಯದಲ್ಲಿ ದನಗಳ ಬೃಹತ್ ಜಾತ್ರೆಯೂ ನಡೆಯುತ್ತದೆ. ಈ ವೇಳೆ ಉತ್ತಮವಾಗಿ ಸಾಕಿದ ಎತ್ತುಗಳಿಗೆ ಬಹುಮಾನ ವಿತರಿಸಲಾಗುತ್ತದೆ. ಜಾತ್ರಾ ಸಮಿತಿ ಇದರ ವ್ಯವಸ್ಥೆ ನೋಡಿಕೊಳ್ಳುತ್ತಿದ್ದು, ಎಪಿಎಂಸಿ ಸಹಕಾರ ನೀಡುತ್ತಿದೆ.

ಹಾಸನ ಜಿಲ್ಲೆಯಲ್ಲಿ ಹೈನೋದ್ಯಮಕ್ಕೆ ಪೂರಕವಾದ ವಾತಾವರಣವಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ರೈತರು ಹಾಲನ್ನು ಮಾರಾಟ ಮಾಡುತ್ತಿದ್ದಾರೆ. ಈ ಹಾಲು ಸ್ಥಳೀಯ ಹಾಸನ ಹಾಲು ಒಕ್ಕೂಟಕ್ಕೆ ಪೂರೈಕೆಯಾಗುತ್ತಿದ್ದು, ರೈತರ ಆದಾಯಕ್ಕೆ ಹೆಚ್ಚುವರಿ ನೆರವಾಗುತ್ತಿದೆ. ಕೃಷಿ ಚಟುವಟಿಕೆಗಳ ಜೊತೆಗೆ ಹೈನೋದ್ಯಮವನ್ನು ಅವಲಂಬಿಸುವುದು ರೈತರ ಆರ್ಥಿಕ ಸ್ಥಿರತೆಗೆ ಸಹಕಾರಿ ಆಗುತ್ತಿರುವುದರಿಂದ, ದನ ಸಾಕಾಣಿಕೆ ಚಟುವಟಿಕೆ ಚನ್ನರಾಯಪಟ್ಟಣ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹೆಚ್ಚು ಪ್ರಚಲಿತವಾಗುತ್ತಿದೆ ಎಂದು ರೈತರು ಹೇಳುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-36-2120135483

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.