ಹೊಳೆನರಸೀಪುರ: ಬೇಸಾಯಕ್ಕೆ ಕೆಲಸ ಮಾಡಲು ಜನರು ಸಿಗದ ಈ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಸಾವಿರಾರು ಕುಟುಂಬಗಳು ಹೈನುಗಾರಿಕೆಯಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ಸೋಮವಾರ ತಾಲ್ಲೂಕಿನ ಬೆಟ್ಟದ ಸಾತೇನಹಳ್ಳಿಯಲ್ಲಿ ಕೆಎಂಎಫ್ ಹಾಲು ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ‘ಕೆಎಂಎಫ್ ಹೈನುಗಾರಿಕೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಒಂದು ಲೀಟರ್ ಹಾಲಿಗೆ ₹7 ಬೆಂಬಲ ಬೆಲೆ ನೀಡುತ್ತಿದೆ. ಬೇಸಾಯ ಸಾಧ್ಯ ಇಲ್ಲದವರು ಹೈನುಗಾರಿಕೆಗೆ ತೊಡಗಿಸಿ ಕೊಳ್ಳಿ’ ಎಂದು ಸಲಹೆ ನೀಡಿದರು.

‘ಯಾರಾದರೂ ಹಸುಗಳನ್ನು ಖರೀದಿಸಿ ಬದುಕು ರೂಪಿಸಿಕೊಳ್ಳಬಯಸಿದರೆ ವಾರ್ಷಿಕ 7ರ ಬಡ್ಡಿಯಲ್ಲಿ 2 ಹಸುಗಳಿಗೆ ₹1 ಲಕ್ಷ ಸಾಲ ನೀಡುತ್ತೇವೆ. ನಿಮ್ಮೂರಿನಲ್ಲಿ ಪ್ರಾರಂಭಿಸಿರುವ ಡೇರಿಗೆ ನೀವು ಹಾಲನ್ನು ಹಾಕಿ ಹಣ ಗಳಿಸಬಹುದು’ ಎಂದರು.

ಕೆ.ಎಂ.ಎಫ್ನ ವಿಸ್ತರಣಾಧಿಕಾರಿಗಳಾದ ಪುರುಷೋತ್ತಮ್, ಪ್ರಕಾಶ್, ಗ್ರಾಮದ ಮುಖಂಡರಾದ ಎಲ್.ಐ.ಸಿ ಬಸಪ್ಪ, ಖರೀದಿ ಕೇಂದ್ರದ ಮೋಹನ್ರಾಜು, ನ್ಯಾಯಬೆಲೆ ಅಂಗಡಿ ಚಂದ್ರಣ್ಣ, ನಿವೃತ್ತ ಶಿಕ್ಷಕ ಬಿ.ಚಂದ್ರಪ್ಪ, ಮೋಹನ, ಸುರೇಶ್, ಮಹೇಶ, ಹೇಮಾ ಲೋಕೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-36-206467731

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.