ಹೊಸದುರ್ಗ: ಕುರಿ ಸಾಕಾಣಿಕೆ ಗ್ರಾಮೀಣ ಪ್ರದೇಶದ ಜನರ ಪಾಲಿಗೆ ಅತ್ಯಂತ ಲಾಭದಾಯಕ ಉದ್ಯಮವಾಗಿದೆ. ಕುರಿ, ಅವುಗಳ ಮಾಂಸ, ಉಣ್ಣೆ, ಗೊಬ್ಬರ ಮಾರಾಟದಿಂದ ರೈತರು ವರ್ಷಪೂರ್ತಿ ಸ್ಥಿರ ಆದಾಯ ಗಳಿಸಬಹುದು. ಆದ್ದರಿಂದ ಈಚೆಗೆ ಕುರಿ ಸಾಕಾಣಿಕೆ ಮಾಡುವವರ ಸಂಖ್ಯೆ ಅಧಿಕವಾಗಿದ್ದು, ಕುರಿ ಮರಿಗಳಿಗೆ ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಮರಿ ಖರೀದಿಸುವವರ ಸಂಖ್ಯೆ ಅಧಿಕವಾಗಿದೆ.

ಹೊಸದುರ್ಗದ ಎಪಿಎಂಸಿ ಆವರಣದ ಮಾರುಕಟ್ಟೆಯಲ್ಲಿ 3 ತಿಂಗಳ ಮರಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಒಂದು ಮರಿಗೆ ₹ 7,000 ದಿಂದ ₹ 8,000 ದರ ಇದೆ. 6 ತಿಂಗಳ ಮರಿಗಳಿಗೆ ₹ 10,000 ರಿಂದ ₹ 12,000 ಇದೆ. ಇಲ್ಲಿ ಮರಿಗಳಿಗೆ ಬೇಡಿಕೆ ಹೆಚ್ಚಿರುವ ಕಾರಣ ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು, ತರೀಕೆರೆ, ಚನ್ನಗಿರಿ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಯಿಂದ ಮರಿಗಳನ್ನು ಮಾರಲು ಜನ ಬರುತ್ತಿದ್ದಾರೆ.

ಶೆಡ್ ಇರುವವರು ಬೃಹತ್ ಮಟ್ಟದಲ್ಲಿ ಕುರಿ ಸಾಕಾಣಿಕೆ ಮಾಡಿದರೆ, ಇನ್ನೂ ಕೆಲ ರೈತರು ಮನೆಯಲ್ಲಿಯೇ 3 ರಿಂದ 4 ಮರಿಗಳನ್ನು ಸಾಕುತ್ತಾರೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮರಿಗಳ ದರ ಹೆಚ್ಚಿರಲಿದೆ.

‘ಮರಿಗಳನ್ನು 3 ತಿಂಗಳು ಸಾಕಿದರೆ ಸಾಕು. ₹ 7,000 ರಿಂದ ₹ 8,000 ಲಾಭ ಗಳಿಸಬಹುದು. ಇನ್ನೇನು ಮುಂಗಾರು ಆರಂಭವಾಗುವುದರಿಂದ ಮೇವಿನ ಸಮಸ್ಯೆ ಕಾಡುವುದಿಲ್ಲ. ಹಾಗಾಗಿ ಈಗ ಕುರಿ ಮರಿಗಳನ್ನು ಖರೀದಿಸಿದರೆ ಸಾಕಲು ಅನುಕೂಲವಾಗುತ್ತದೆ. ಕುರಿಗಳ ಹಿಕ್ಕೆಗಳು ಅತ್ಯುತ್ತಮ ಸಾವಯವ ಗೊಬ್ಬರವಾಗಿದ್ದು, ಕೃಷಿ ಭೂಮಿಗೆ ಬಳಸಿದರೆ ಅಧಿಕ ಇಳುವರಿ ಪಡೆಯಬಹುದು. ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡು, ದಷ್ಟ ಪುಷ್ಟವಾಗಿ ಬೆಳೆಯುವ ಉತ್ತಮ ಮರಿಗಳ ಆಯ್ಕೆ ಮಾಡಿದರೆ ಒಳ್ಳೆಯದು’ ಎಂದು ತಾಳಿಕಟ್ಟೆ ರೈತ ಕರಿಯಪ್ಪ ಅಭಿಪ್ರಾಯಪಟ್ಟರು.

ಮೂಲಸೌಕರ್ಯಗಳ ಕೊರತೆ: ‘ಎಪಿಎಂಸಿ ಆವರಣದ ಕುರಿ ಮಾರುಕಟ್ಟೆಗೆ ನೂರಾರು ವ್ಯಾಪಾರಿಗಳು ಹಾಗೂ ಖರೀದಿದಾರರು ಬರುತ್ತಾರೆ. ಆದರೆ, ಇಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳಿಲ್ಲ. ವ್ಯಾಪಾರಿಗಳ ಬಳಿ ಒಂದು ಕುರಿಗೆ ₹ 10 ಪಡೆಯುತ್ತಾರೆ. ಅದೇ ಹಣದಲ್ಲಿ ಮೂಲ ಸೌಕರ್ಯ ಕಲ್ಪಿಸಬಹುದು. ಬೆಳಿಗ್ಗೆ 6 ಗಂಟೆಗೆ ಬಂದರೆ ಮಧ್ಯಾಹ್ನ 1 ಗಂಟೆಯವರೆಗೂ ಮಾರುಕಟ್ಟೆಯಲ್ಲೇ ಇರುತ್ತೇವೆ. ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ’ ಎಂದು ಕುರಿ ವ್ಯಾಪಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

‘ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ವಿವಿಧೆಡೆಯಿಂದ ಬರುವ ರೈತರ ವಾಹನಗಳನ್ನು ಹಿರಿಯೂರು ವೃತ್ತ, ಪಂಪ್ ಹೌಸ್ ಬಳಿ, ವೀರಭದ್ರೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಹೀಗೆ ಎಲ್ಲೆಂದರಲ್ಲಿ ಅಡ್ಡಗಟ್ಟಿ ಬಲವಂತದಿಂದ ವ್ಯಾಪಾರ ಮಾಡಲಾಗುತ್ತಿದೆ. ಹೊಸದಾಗಿ ಮಾರುಕಟ್ಟೆಗೆ ಬರುವ ರೈತರನ್ನು ಮೋಸ ಮಾಡಲಾಗುತ್ತಿದೆ’ ಎಂದು ಕುರಿಗಾಹಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-44-1307578902

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.