ಹೊಸಕೋಟೆ: ಹಾಲು ಉತ್ಪಾದಕರ ಹಿತಕ್ಕಾಗಿ ಬಮುಲ್ ಸದಾ ಸಿದ್ಧವಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ವೆಚ್ಚದ ಪ್ರಮಾಣ ಹೆಚ್ಚಿಸಲಾಗುವುದು ಎಂದು ಬಮುಲ್ ನಿರ್ದೇಶಕ ಬಿ.ವಿ.ಸತೀಶ್ ಗೌಡ ತಿಳಿಸಿದರು.

ಬೆಂಡಿಗಾನಹಳ್ಳಿಯಲ್ಲಿ ಬಮುಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಸದಸ್ಯರಿಗೆ ವೈದ್ಯಕೀಯ ಮತ್ತು ಮರಣ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು. ಟ್ರಸ್ಟ್ 2025-26ನೇ ಸಾಲಿನಲ್ಲಿ ₹11.50 ಲಕ್ಷ ವೈದ್ಯಕೀಯ ಪರಿಹಾರ, ₹9.60ಲಕ್ಷ ಮರಣ ಪರಿಹಾರ, ₹15ಲಕ್ಷ ಸಾಮಾಜಿಕ ಕಾರ್ಯಗಳಿಗೆ ಮತ್ತು ₹11ಲಕ್ಷ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ನೀಡಿದೆ ಎಂದರು.

ಸದಸ್ಯರ ಪರಿಹಾರಕ್ಕಾಗಿ ಮೀಸಲಿಡುವ ಮೊತ್ತವನ್ನು ₹1 ಕೋಟಿಗೆ ಏರಿಸುವ ಭರವಸೆ ನೀಡಿದರು. ಸ್ಥಳೀಯರು ಹಾಲಿನ ದರ ಹೆಚ್ಚಿಸುವಂತೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ತಾಲ್ಲೂಕಿನ ವಾಬಸಂದ್ರ, ತಿಮ್ಮಪ್ಪನಹಳ್ಳಿ, ನೆಲವಾಗಿಲು, ಸೋಲೂರು, ಚಿಕ್ಕನಲ್ಲೂರಹಳ್ಳಿ, ಆಲಪ್ಪನಹಳ್ಳಿ, ಹೊಸಕೋಟೆ ಮೇಲಿನ ಪೇಟೆ, ಒಳಗೆರೆಪುರ, ಅತ್ತಿಬೆಲೆ, ಬೆಂಡಿಗಾನಹಳ್ಳಿ, ಬೊಮ್ಮನ ಬಂಡೆ ಸೇರಿ ಒಟ್ಟು 12 ಮಂದಿಗೆ ವೈದ್ಯಕೀಯ ಪರಿಹಾರ ಚೆಕ್ ಹಾಗೂ ಯಳಚಹಳ್ಳಿ, ಚಿಕ್ಕನಲ್ಲೂರಹಳ್ಳಿ, ಚಿಕ್ಕಗಟ್ಟಿಗನೆಬ್ಬೆ ಗ್ರಾಮಗಳ 3 ಜನ ಸಕ್ರಿಯ ಸದಸ್ಯರ ಮರಣ ಪರಿಹಾರ ಚೆಕ್ ವಿತರಿಸಲಾಯಿತು.

ಪರಿಹಾರ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಬೆಂಗಳೂರು ಡೇರಿ ಹೊಸಕೋಟೆ ವಿಭಾಗದ ಉಪವ್ಯವಸ್ಥಾಪಕ ಸಂತೋಷ್, ವಿಸ್ತಾರಣಾಧಿಕಾರಿ ವಿದ್ಯಾ, ಆನಂದ್, ರಮೇಶ್, ರಘನಾಥ್, ಪವಿತ್ರ, ವಿನಯ್, ಬಮೂಲ್ ಟ್ರಸ್ಟ್ ನವೀನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-15-1673873264

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.