ಹುಬ್ಬಳ್ಳಿ: ‘ಗೋವು ಆಧಾರಿತ ಗೊಬ್ಬರ ಬಳಕೆಯಿಂದ ಸಮೃದ್ಧ ಬೆಳೆ ಬೆಳೆಯಬಹುದು. ಇದರಿಂದ ರೈತನ ಆದಾಯ ದ್ವಿಗುಣವಾಗುತ್ತದೆ. ದೇಶದ ಆರ್ಥಿಕತೆಯ ವೃದ್ಧಿಯಾಗುತ್ತದೆ’ ಎಂದು ಗೋ ಸೇವಾ ಗತಿ ವಿಧಿ ಅಖಿಲ ಭಾರತೀಯ ಪ್ರಶಿಕ್ಷಣ ಪ್ರಮುಖ ಕೆ.ಇ.ಎನ್.ರಾಘವನ್ ತಿಳಿಸಿದರು.

ಇಲ್ಲಿನ ಗೋಕುಲ ರಸ್ತೆಯ ಮಾರುತಿ ನಗರದ ಆರ್ಎಸ್ಎಸ್ ಕಾರ್ಯಾಲಯವಾದ ಕೇಶವ ಕುಂಜದಲ್ಲಿ ಗೋ ಸೇವಾ ಗತಿವಿಧಿ ಕರ್ನಾಟಕ ಉತ್ತರ ಪ್ರಾಂತದಿಂದ ಬುಧವಾರ ಹಮ್ಮಿಕೊಂಡಿದ್ದ ‘ಗೋ ಮಹಿಮಾ ಸದ್ವಿಚಾರ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿಯೊಬ್ಬರೂ ಮನೆಯಲ್ಲಿ ಗೋ ಉತ್ಪನ್ನಗಳ ಬಳಕೆಗೆ ಹೆಚ್ಚು ಆದ್ಯತೆ ನೀಡಬೇಕು‘ ಎಂದರು.

ಅಮ್ಮಿನಬಾವಿಯ ಶಾಂತಲಿಂಗಸ್ವಾಮೀಜಿ, ‘ಗೋವು ಪೋಷಣೆ ಮಾಡುವುದರಿಂದ ಮನೆ ಹಾಗೂ ಮನದಲ್ಲಿ ಶಾಂತಿ, ನೆಮ್ಮದಿ ಹಾಗೂ ಆರೋಗ್ಯವೂ ದೊರೆಯುತ್ತದೆ’ ಎಂದರು.

‘ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಮನೆಯಲ್ಲಿ ದೇಸಿ ಗೋವು ಸಾಕಬೇಕು. ಇದರೊಂದಿಗೆ ಗೋವು ಸಂರಕ್ಷಣೆ ಮಾಡುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಗೋ ಸೇವಾ ಗತಿವಿಧಿಯ ಮಹಾ ಪೋಷಕ ಹಾಗೂ ಉದ್ಯಮಿ ವಿ.ಎಸ್.ವಿ ಪ್ರಸಾದ ಮಾತನಾಡಿದರು. ಧಾರವಾಡ ವಿಭಾಗದ ಸಂಘಚಾಲಕ ಗೋವಿಂದಪ್ಪ ಗೌಡಪ್ಪಗೋಳ, ಗೋ ಗತಿ ವಿಧಿಯ ಪ್ರಾಂತ ಸಂಯೋಜಕ ದತ್ತಾತ್ರೇಯ ಭಟ್ಟ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-24-2134166908

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.