ಕಕ್ಕೇರಾ: ಪರಿಸರ ದಿನಾಚರಣೆ ಪ್ರಯುಕ್ತ ಪರಿಸರ ಜಾಗೃತಿ ಮೂಡಿಸಿ, ಪರಿಸರ ಉಳಿಸಿ, ಬೆಳೆಸುವಂತೆ ಕುರಿಗಾಹಿ, ಜಾನುವಾರು ಕಾಯುವರಿಗೆ, ಜಾನುವಾರು ಮಾಲೀಕರಿಗೆ ವಿಶೇಷವಾಗಿ ಸನ್ಮಾನಿಸಿದ ಪ್ರಸಂಗ ಜರುಗಿತು.

ಪಟ್ಟಣದ ಸಮೀಪದ ಹುಣಸಿಹೊಳೆ ಗ್ರಾಮದೇವತೆ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಪರಿಸರ ಜಾಗೃತಿ ಪ್ರಯುಕ್ತ, ಸನ್ಮಾನ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಕ್ಷೇಮಾಭಿವೃದ್ಧಿ ದಿನಗೂಲಿ ನೌಕರ ಮಾನಪ್ಪ ಬೂದಗುಂಪಿ ಮಾತನಾಡಿ, ‘ಪರಿಸರ ಪ್ರತಿಯೊಬ್ಬರಿಗೂ ಅವಶ್ಯವಾಗಿದ್ದು, ಉತ್ತಮ ಗಾಳಿ, ಮಳೆ, ಬೆಳೆಗಾಗಿ ನಾವುಗಳು ಗಿಡಮರಗಳನ್ನು ನಾಶ ಮಾಡದೇ, ನಮ್ಮ ಜಾನುವಾರು ಹೇಗೆ ಬೆಳೆಸುತ್ತಿದ್ದೀರಿ, ಹಾಗೆ ನಮ್ಮ ಸುತ್ತಮುತ್ತಲಿನ ಗಿಡಮರಗಳನ್ನು ಬೆಳಿಸಿ ಉಳಿಸಿ’ ಎಂದರು.

ನಂತರ ನಿವೃತ್ತ ಶಿಕ್ಷಕ ಭೀಮರಾಯ ನಾಗರಾಳ ಮಾತನಾಡಿ, ‘ಅರಣ್ಯ ಇಲಾಖೆ ನೌಕರ ಮಾನಪ್ಪ ಬೂದಗುಂಪಿ ಅಪ್ಪಟ ಪರಿಸರ ಪ್ರೇಮಿಯಾಗಿದ್ದು, ಸುಮಾರು 38 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ಅವರ ಪರಿಸರ ಉಳಿಸಲು ವಿಶೇಷವಾಗಿ 15 ಜನ ಕುರಿಗಾಹಿಯರಿಗೆ ಸನ್ಮಾನಿಸಿದ ಕ್ಷಣ ಮರೆಯಲಾಗದು, ಪ್ರತಿಯೊಬ್ಬರೂ ಪರಿಸರ ಉಳಿಸಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಶೋಕ ಬಡಿಗೇರ, ಮಲ್ಲಿಕಾರ್ಜುನ ವಂದಲಿ, ಮಾನಪ್ಪ ಗ್ವಾನಟಲ್, ದೌಲಫ್, ಪರಮಣ್ಣ ಜೋಗಾರ, ಮರಳಪ್ಪ, ಬಸಪ್ಪ, ಮಲ್ಲಣ್ಣ ಜೋಗಾರ, ಬುಡ್ಡಪ್ಪ , ಪರಮಣ್ಣ, ಯಂಕಪ್ಪ, ಹಣಮಂತ ನಾಟೇಕರ್, ಕೊಟ್ರಪ್ಪ, ಭೀಮರಾಯ ವಗ್ಗರ್ ಸೇರಿದಂತೆ ಅನೇಕರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-30-1507708962

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.