ಕೆರೂರ: ಮುಂಬರುವ ಬಕ್ರೀದ್ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಮಂಗಳವಾರ ನಡೆದ ಸಂತೆಯಲ್ಲಿ ಕುರಿ ಮತ್ತು ಟಗರು ವ್ಯಾಪರ ಜೋರಾಗಿತ್ತು.

ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಡೆಯುವ ಜಾನುವಾರು ಸಂತೆಯಲ್ಲಿ ಕಳೆದ ಎರಡು- ಮೂರು ವಾರಕ್ಕಿಂತ ಈ ವಾರದ ಸಂತೆಯಲ್ಲಿ ಖರೀದಿದಾರರು ಹಾಗೂ ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿರುವ ದೃಶ್ಯ ಕಂಡು ಬಂದಿತು.

ತಮಿಳುನಾಡು, ಆಂಧ್ರ ಪ್ರದೇಶದ, ಬೆಂಗಳೂರ, ದಾವಣಗೆರೆ ಹೀಗೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಮಾರಾಟಗಾರರು ಆಗಮಿಸಿದ್ದರು. ಖರೀದಿದಾರರು ರಸ್ತೆ ಮಧ್ಯದಲ್ಲಿ ಗಾಡಿ ಇಟ್ಟು ತಮ್ಮ ಇಚ್ಚೆಯ ಕುರಿ ಹಾಗೂ ಟಗರು ಖರೀದಿಸಿದರು.

ಬರುವ ಮೇ 28 ರಂದು ಬಕ್ರೀದ್ ಹಬ್ಬವಿದ್ದು, ಮುಸ್ಲಿಂ ಸಮುದಾಯದವರು ವ್ಯಾಪಾರಿಗಳೊಂದಿಗೆ ಚರ್ಚಸಿ, ಬೆಲೆಯನ್ನು ಚೌಕಾಶಿ ಮಾಡಿ ತಮ್ಮ ಇಷ್ಟದ ಕುರಿ ಮತ್ತು ಟಗರುಗಳನ್ನು ಪಡೆದುಕೊಂಡರು.

ಹಬ್ಬದ ಹಿನ್ನೆಲೆಯಲ್ಲಿ ಸಂತೆಯಲ್ಲಿ ವ್ಯಾಪಾರ ಜೋರಾಗಿತ್ತು, ಕಳೆದ ಎರಡು ವಾರಗಳಿಂದ ಅಲ್ಪ ಕುಸಿತ ಕಂಡಿದ್ದ ಟಗರು ಮತ್ತು ಕುರಿ ವ್ಯಾಪಾರದಲ್ಲಿ ಈ ವಾರದ ಸಂತೆಯಲ್ಲಿ ಬೆಲೆ ಏರಿಕೆ ಖಂಡಿದೆ. ಉತ್ತಮ ಬೆಲೆಗೆ ಮರಿಗಳು ಮಾರಾಟವಾದರೆ ರೈತರು ಕೂಡಾ ಸಂತೋಷವಾಗಿರುತ್ತಾರೆ ಎಂದು ದಾವಣಗೆರೆಯಿಂದ ಬಂದ ಕುರಿ ವ್ಯಾಪಾರಿಯೊಬ್ಬರು ಪ್ರಜಾವಾಣಿಗೆ ತಿಳಿಸಿದರು.

ಸಣ್ಣ ಪ್ರಮಾಣದ ಕುರಿ ಮತ್ತು ಟಗರು ಮರಿಗಳು ಸುಮಾರು ₹ 5 ಸಾವಿರದಿಂದ ₹ 10 ಸಾವಿರದವರೆಗೆ ಮಾರಾಟವಾದವು. ಇನ್ನೂ ದೊಡ್ಡ ಕುರಿಗಳು ಒಂದಕ್ಕೆ ಕನಿಷ್ಠ ₹ 35 ಸಾವಿರದಿಂದ ಗರಿಷ್ಠ ₹ 70 ಸಾವಿರದವರೆಗೆ ಮಾರಾಟವಾಗಿದ್ದು ಖಂಡು ಬಂದಿತು.

ಬಕ್ರೀದ್ ಹಬ್ಬಕ್ಕೆ ಇನ್ನೂ ಒಂದು ವಾರವಿದೆ. ಈ ವಾರ ಗರಿಷ್ಠ ₹ 70 ಸಾವಿರ ಇರುವ ಬೆಲೆ ಮುಂದಿನ ವಾರದ ಸಂತೆಯಲ್ಲಿ ಇನ್ನೂ ಬೆಲೆ ಏರಿಕೆಯಾಗಬಹುದು ಎಂಬ ಉತ್ಸಾಹದಲ್ಲಿದ್ದೇವೆ ಎನ್ನುತ್ತಾರೆ ಕುರಿಗಾಹಿಗಳು.

ಎರಡೂ ವರ್ಷಗಳಿಂದ ಚೆನ್ನಾಗಿ ಸಾಕಿ ಬೆಳೆಸಿದ ಟಗರುಗಳನ್ನು ಇಂದು ಕೆರೂರ ಸಂತೆಯಲ್ಲಿ ಮಾರಾಟಕ್ಕೆ ತಂದಿದ್ದೆ, ಒಂದಕ್ಕೆ ₹ 60 ಸಾವಿರವರೆಗೆ ಬೆಲೆ ಹೇಳಿದ್ದೆ, ಜೋಡಿಗೆ ₹ 1.10 ಲಕ್ಷಕ್ಕೆ ಮಾರಾಟವಾಗಿದೆ’ ಎಂದು ಹೆರಕಲ್ ಗ್ರಾಮದ ಕುರಿಗಾಹಿ ಬಸಪ್ಪ ಮಾದರ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-19-1881397343

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.