ಮಡಿಕೇರಿ: ಲಕ್ಕುಂಡಿಯಲ್ಲಿ ಉತ್ಖನನ ನಡೆಸಿ ಪ್ರಾಚ್ಯಾವಶೇಷಗಳನ್ನು ಪತ್ತೆ ಹಚ್ಚಲಾಯಿತು. ನೆಲದಲ್ಲಿ ಹುದುಗಿದ್ದ ಪ್ರಾಚೀನ ನಾಣ್ಯ, ಶಿಲೆ, ಅವಶೇಷಗಳು ಲಭ್ಯವಾದವು. ಇದೇ ಬಗೆಯಲ್ಲಿ ನೀರಿನಲ್ಲೂ ಶೋಧ ಕಾರ್ಯ ನಡೆಸಿದರೆ ಅಮೂಲ್ಯ ವಸ್ತುಗಳು ದೊರಕುವ ಸಾಧ್ಯತೆಗಳಿವೆ.

ಇಲ್ಲಿನ ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿರುವ ಪುರಾತನ ಕಾಲದ ಕೆಲವು ವಿಗ್ರಹಗಳು ಈ ಮಾತಿಗೆ ಪುಷ್ಟಿ ನೀಡುತ್ತಿವೆ. ಇಲ್ಲಿರುವ ಅಪರೂಪದ ನಾಟ್ಯ ಗಣೇಶ ಸೇರಿದಂತೆ ಕೆಲವಾರು ಮೂರ್ತಿಗಳು ನದಿಯಲ್ಲಿ ಸಿಕ್ಕವುಗಳೇ ಆಗಿವೆ.

ಭೇತ್ರಿ ಹೊಳೆಯಲ್ಲಿ ಬೇಸಿಗೆಯಲ್ಲಿ ನೀರು ಕಡಿಮೆಯಾದಾಗ ತುಸು ಭಿನ್ನಗೊಂಡಿದ್ದ ಮಹಾವಿಷ್ಣು ಮೂರ್ತಿಯೊಂದು ಕಾಣಿಸುತ್ತಿತ್ತು. ಅದನ್ನು ಮ್ಯೂಸಿಯಂಗೆ ತಂದು ಪರಿಶೀಲಿಸಿದಾಗ ಅದು 11–12ನೇ ಶತಮಾನಕ್ಕೆ ಸೇರಿದ್ದು ಎಂಬುದು ಗೊತ್ತಾಯಿತು.

ಭಾಗಮಂಡಲದ ಹೊಳೆಯಲ್ಲಿ 15–16ನೇ ಶತಮಾನಕ್ಕೆ ಸೇರಿದ ಮಹಾಲಕ್ಷ್ಮೀ ವಿಗ್ರಹ ಹಾಗೂ ಬಂಡಿಕಾಡು ಹೊಳೆಯ ದಡದಲ್ಲಿ ಮರಳಿನಲ್ಲಿ18–19ನೇ ಶತಮಾನಕ್ಕೆ ಸೇರಿದ ನಾಟ್ಯಗಣಪತಿ ವಿಗ್ರಹಗಳನ್ನು ಪೊಲೀಸರು ಇಲ್ಲಿನ ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ನೀಡಿದ್ದಾರೆ.

ವಿರಾಜಪೇಟೆ ಸಮೀಪದ ಮೈತಾಡಿ ಹೊಳೆಯಲ್ಲಿ ದೇಗುಲ ನವೀಕರಣದ ವೇಳೆ ಹಳೆಯ, ಮುರಿದ ವಿಗ್ರಹಗಳನ್ನು ಹಾಕಿರುವ ಕುರಿತು ದಿನಪತ್ರಿಕೆಯಲ್ಲಿ ಬಂದ ಸುದ್ದಿ ಆಧಾರಿಸಿ ಸ್ಥಳಕ್ಕೆ ಹೋಗಿ ಹುಡುಕಿದರೂ ಸಿಗಲಿಲ್ಲ ಎಂದು ಪುರಾತತ್ವ ಹಾಗೂ ಪ್ರಾಚ್ಯವಸ್ತು ಇಲಾಖೆಯ ಕ್ಯೂರೇಟರ್ ರೇಖಾ ಹೇಳುತ್ತಾರೆ.

ಹೀಗೆ, ಅನೇಕ ಕಡೆ ಹೊಳೆಗಳಲ್ಲಿ ಹಳೆಯ ವಿಗ್ರಹಗಳನ್ನು ಹಾಕುವ ಪರಿಪಾಠ ಇದೆ. ಈಗ ಬೇಸಿಗೆಯಲ್ಲಿ ಬಹುತೇಕ ಎಲ್ಲ ಹೊಳೆಯ ನೀರು ಕಡಿಮೆಯಾಗಿರುವುದರಿಂದ ಹುಡುಕಾಟ ನಡೆಸಲು ಸೂಕ್ತ ಸಮಯ. ನುರಿತ ಈಜುಗಾರರು, ಮುಳುಗು ತಜ್ಞರ ಸಹಾಯ ಪಡೆದು ಸಾಮಾನ್ಯವಾಗಿ ಎಲ್ಲೆಲ್ಲಿ ವಿಗ್ರಹಗಳನ್ನು ಹಾಕುತ್ತಾರೋ ಅಂತಹ ಹೊಳೆ, ಕೆರೆಗಳಲ್ಲಿ ಶೋಧಕಾರ್ಯ ನಡೆಸಿದರೆ ನಿಶ್ಚಿತವಾಗಿಯೂ ಅಮೂಲ್ಯ ಹಳೆಯ ವಿಗ್ರಹಗಳು ಸಿಗುತ್ತವೆ. ಇಂತಹ ಒಂದು ಕಾರ್ಯವನ್ನು ರಾಜ್ಯ ಪ್ರಾಚ್ಯ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಮಾಡಬೇಕು ಎಂಬುದು ಇತಿಹಾಸ ತಜ್ಞರ ಒತ್ತಾಯವಾಗಿದೆ.

ಕಲ್ಲಿನ ವಿಗ್ರಹಗಳಾದರೆ ನೀರಿಗೆ ಹಾಕುತ್ತಾರೆ. ಅದೇ ಲೋಹದ ವಿಗ್ರಹವಾಗಿದ್ದರೆ ಅದನ್ನು ಕರಗಿಸಿ ಹೊಸ ವಿಗ್ರಹಗಳನ್ನು ತಯಾರಿಸುತ್ತಾರೆ. ಹಳೆಯ ಲೋಹದ ವಿಗ್ರಹಕ್ಕೆ ಮೌಲ್ಯ ಕಟ್ಟಲಾಗದು. ಅದನ್ನು ಜೋಪಾನವಾಗಿ ದೇವಾಲಯದಲ್ಲೆ ರಕ್ಷಿಸಬಹುದು. ಒಂದು ವೇಳೆ ದೇಗುಲಕ್ಕೆ ಆ ಹಳೆಯ ಲೋಹದ ವಿಗ್ರಹಗಳು ಬೇಡ ಎಂದಾದರೆ ಅದನ್ನು ಮ್ಯೂಸಿಯಂಗೆ ಕೊಡಬಹುದು. ಇದರಿಂದ ಹಳೆಯ ವಿಗ್ರಹದ ರಚನಾ ಕುಶಲತೆ ಮುಂದಿನ ಪೀಳಿಗೆಗೂ ಉಳಿಯುತ್ತದೆ.

ಕೇವಲ ವಿಗ್ರಹಗಳನ್ನು ಮಾತ್ರವಲ್ಲ, ಹಳೆಯ ಕಾಲದ ಶಾಸನಗಳು, ನಾಣ್ಯಗಳು, ಹಸ್ತಪ್ರತಿಗಳನ್ನೂ ನದಿಗೆ ಹಾಕುವ ಪರಿಪಾಠ ಇದೆ. ಇದರಿಂದ ಅಮೂಲ್ಯ ಪ್ರಾಚ್ಯಸಂಪತ್ತು ನದಿ ಪಾಲಾಗುತ್ತಿದೆ. ಈ ಕುರಿತು ಹುಡುಕಾಟ ಮಾತ್ರವಲ್ಲ, ಅರಿವು ಮೂಡಿಸುವ ಜರೂರೂ ಇದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-51-1402031406

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.