ಕೋಲಾರ: ತಾಲ್ಲೂಕಿನ ಕಾಮದೇನಹಳ್ಳಿಯ ಸತ್ಯಮ್ಮ ದೇವಾಲಯದ ಆವರಣದಲ್ಲಿ ರೋಟರಿ ಸಂಸ್ಥೆಯಿಂದ ಮಹಿಳೆಯರಿಗೆ ಉಚಿತವಾಗಿ ಸೀಮೆಹಸುಗಳನ್ನು ವಿತರಿಸಲಾಯಿತು.

ದೇಶದಲ್ಲಿ ಮೊದಲ ಬಾರಿ ರೋಟರಿ ಸಂಸ್ಥೆಯಿಂದ ಮಹಿಳೆಯರಿಗೆ 150 ಸೀಮೆ ಹಸುಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ರೋಟರಿ ಸಂಸ್ಥೆಯ ಜಿಲ್ಲಾಪಾಲಕ ಡಿ.ಜಿ ಶ್ರೀಧರ್ ಹೇಳಿದರು.

ಗ್ರಾಮೀಣ ಪ್ರದೇಶದ ರೈತ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಸಂಸ್ಥೆಯ ಕಾಮಧೇನು ಯೋಜನೆಗೆ ಒತ್ತು ನೀಡಿ ಉಚಿತ ಹಸುಗಳನ್ನು ವಿತರಿಸಿದ್ದೇವೆ ಎಂದು ತಿಳಿಸಿದರು.

ರೋಟರಿ ಸಂಸ್ಥೆ ಸಹಯೋಗದಲ್ಲಿ ಮಹಿಳೆಯರಿಗೆ ಹಾಲಿನ ಕ್ಯಾನ್ ವಿತರಣೆ ಮಾಡಲಾಯಿತು.

ಜಿಲ್ಲಾ ಕಾರ್ಯದರ್ಶಿ ರವೀಂದ್ರನಾಥ್ ನಾರಾಯಣ, ರೋಟರಿ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಪ್ರಭಾಕರ್, ಕಾಮಧೇನು ಯೋಜನೆಯ ನಿರ್ದೇಶಕ ಸುಧಾಕರ್, ಉಪಾಧ್ಯಕ್ಷ ಕಾಮಧೇನಹಳ್ಳಿ ರವಿ, ಹಿರಿಯ ರೋಟರಿಯನ್ ರಾಮಚಂದ್ರಪ್ಪ, ನಾಗಾನಂದ ಕೆಂಪರಾಜ್, ಆರ್.ಅಶೋಕ್ ಕುಮಾರ್, ಚೆನ್ನಕೇಶವ್, ರಮೇಶ್ ಕುಮಾರ್, ರಾಜೇಂದ್ರ ಮೌನಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-18-1131264518

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.