ಯಲಬುರ್ಗಾ: ‘ವಿವಿಧ ಜಾನುವಾರುಗಳನ್ನು ಹೊಂದಿರುವ ರೈತರು ಕಾಲು ಬಾಯಿ ಬೇನೆಯ ಲಸಿಕೆ ಹಾಕಿಸಿ ದನಕರುಗಳ ಆರೋಗ್ಯ ಕಾಪಾಡಲು ಮುಂದಾಗಬೇಕು’ ಎಂದು ಯಲಬುರ್ಗಾ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಕಾಶ ಚೂರಿ ಹೇಳಿದರು.

‘ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಪಶುಪಾಲನಾ ಇಲಾಖೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯವರು ಆಯೋಜಿಸಿದ್ದ ಉಚಿತ ಕಾಲುಬಾಯಿ ರೋಗ ನಿರೋಧಕ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಉದಾಸೀನ ತೋರದೇ ಗ್ರಾಮಕ್ಕೆ ಭೇಟಿ ನೀಡುವ ವೈದ್ಯ ತಂಡ ನೀಡುವ ಲಸಿಕೆ ಹಾಕಿಸಿ ಆರೋಗ್ಯದ ಬಗ್ಗೆ ಕಾಳಜಿ ತೋರಬೇಕು’ ಎಂದು ಹೇಳಿದರು.

ದೇಶದ ಕೃಷಿ ಪ್ರಗತಿಯಲ್ಲಿ ಮಹತ್ವದ ಸ್ಥಾನ ಪಡೆದ ಜಾನುವಾರುಗಳನ್ನು ಮಾನವರಿಗೆ ತೋರುವ ರೀತಿಯಲ್ಲಿಯೇ ಕಾಳಜಿ ವಹಿಸುವುದು ಅವಶ್ಯಕ. ಜಾನುವಾರುಗಳಿಗೆ ಮಾರಕವಾಗಬಹುದಾದ ಕಾಲುಬಾಯಿ ರೋಗದ ಬಗ್ಗೆ ನಿರ್ಲಕ್ಷ್ಯ ತೋರದೇ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ತಾಲ್ಲೂಕಿನಾದ್ಯಂತ 14 ಲಸಿಕಾ ತಂಡಗಳನ್ನ ರಚಿಸಿಲಾಗಿದೆ.

ಒಟ್ಟು 29ಸಾವಿರಕ್ಕೂ ಹೆಚ್ಚು ಜಾನುವಾರುಗಳನ್ನು ಗುರುತಿಸಲಾಗಿದೆ. ರೋಗ ಪೀಡಿತ ಜಾನುವಾರುಗಳಿಗೆ ವಿಪರೀತ ಜ್ವರ, ಬಾಯಲ್ಲಿ ಹುಣ್ಣು, ಜೊಲ್ಲು ಸೋರುವಿಕೆ ಮತ್ತು ಕಾಲುಗಳಲ್ಲಿ ಹುಣ್ಣಾಗುತ್ತದೆ. ಇದರಿಂದ ಹಾಲು ಉತ್ಪಾದನೆ ಕಡಿಮೆಯಾಗುತ್ತದೆ. ಅವುಗಳು ಶಕ್ತಿಹೀನವಾಗುತ್ತವೆ. ಇವು ರೋಗದ ಲಕ್ಷಣವಾಗಿವೆ. ರೋಗ ಬರದಂತೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸುವುದು ಕೂಡಾ ಅಷ್ಟೇ ಅವಶ್ಯಕ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-35-1927593800

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.