ಕೂಡ್ಲಿಗಿ: ಕನಿಷ್ಠ ಸಾಕಾಣಿಕೆ ದರವನ್ನು ಸರ್ಕಾರ ನಿಗದಿ ಮಾಡಿರುವುದು ಕೋಳಿ ಸಾಕಾಣಿಕೆ ರೈತರ ಹೋರಾಟಕ್ಕೆ ಸಿಕ್ಕ ಜಯ’ ಎಂದು ರಾಜ್ಯ ಕೋಳಿ ಸಾಕಾಣಿಕ ರೈತರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ ಸಿಡೇಗಲ್ಲು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ತಾಲ್ಲೂಕು ಕೋಳಿ ಸಾಕಾಣಿಕೆದಾರರ ಸಭೆಯಲ್ಲಿ ಮಾತನಾಡಿದ ಅವರು, ‘ಕೋಳಿ ಸಾಕಾಣಿಗೆ ಪ್ರತಿ ಕೆಜಿಗೆ ಕನಿಷ್ಟ ₹20 ದರ ನಿಗದಿ ಮಾಡುವಂತೆ ಸಂಘ ಹೋರಾಟ ನಡೆಸಿ, ಮುಖ್ಯಮಂತ್ರಿ ಹಾಗೂ ಪಶುಸಂಗೋಪನೆ ಸಚಿವರಿಗೆ ಅವರಿಗೆ ಮನವಿ ಕೂಡ ಸಲ್ಲಿಸಲಾಗಿತ್ತು. ಜೊತೆಗೆ ಶಾಸಕ ಡಾ.ಶ್ರೀನಿವಾಸ್ ಎನ್.ಟಿ. ಹಾಗೂ ರೂಪಕಲಾ ಶಶಿಧರ ಅವರು ಸದನದಲ್ಲಿ ಧ್ವನಿ ಎತ್ತುವ ಮೂಲಕ ಸರ್ಕಾರದ ಗಮನ ಸೆಳೆದಿದ್ದರು. ಇದನ್ನು ಪರಿಗಣಿಸಿದ ಸರ್ಕಾರ ಈಗ ಸಾಕಾಣಿಗೆ ದರವನ್ನು ಕನಿಷ್ಟ ₹10 ನಿಗದಿ ಮಾಡಿ ಅದೇಶ ಹೊರಡಿಸಿದೆ’ ಎಂದು ತಿಳಿಸಿದರು.

ರಾಘವೇಂದ್ರ, ಕೆ.ಮುನೀರ್ ಅಹ್ಮದ್, ವಿನೋದ್ ಕಲಾಲ್, ಕೆ.ಇರಬಸಪ್ಪ, ಶಮ್ರು ಸಾಹೇಬ್, ದುರಗಪ್ಪ, ಫಿರೋಜ್ ಅಲ್ಲಮ್, ಪಿ. ರಹೆಮತ್, ಟಿ.ಹನುಮಂತಪ್ಪ, ಮಲ್ಲಿಕಾರ್ಜುನ, ಎರಿಬಸಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-25-1948231233

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.