ಕುಂದಾಪುರ: ಬಿಸಿಲ ಝಳದಿಂದ ಕೆಲ ಕಡೆಗಳಲ್ಲಿ ನೀರಿನ ಮೂಲಗಳು ಬರಿದಾಗುತ್ತಿದ್ದು, ಇದರಿಂದ ಜಾನುವಾರು, ಪ್ರಾಣಿ - ಪಕ್ಷಿಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿವೆ. ಈ ಸಮಸ್ಯೆ ಮನಗಂಡು ಆಲೂರಿನ ಸಮಾನ ಮನಸ್ಕ ತಂಡವೊಂದು ನೀರಿನ ತೊಟ್ಟಿಯೊಂದನ್ನು ನಿರ್ಮಿಸಿ, ಅದಕ್ಕೆ ನಿತ್ಯ ನೀರು ಹಾಕುವ ಕಾರ್ಯಕ್ಕೆ ಮುಂದಾಗಿದೆ.

ಆಲೂರಿನ ಸರಸ್ವತಿ ಹಿ.ಪ್ರಾ. ಶಾಲೆಯ 95-96ನೇ ಸಾಲಿನ 7ನೇ ತರಗತಿಯ ವಿದ್ಯಾರ್ಥಿಗಳ ತಂಡ ರಚಿಸಿರುವ ಟೀಂ ಆಸರೆ ಬಳಗವು ಜಾನುವಾರುಗಳು ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರನ್ನು ಒದಗಿಸಲು ಆಲೂರು ಗ್ರಾಮ ವ್ಯಾಪ್ತಿಯ ನೀರಿನ ಲಭ್ಯ ಇರುವ ಕೆಲವು ಕಡೆಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ, ಅದರಲ್ಲಿ ನೀರು ತುಂಬಿಸಿ ನಿರ್ವಹಣೆ ಮಾಡುವ ಸಮಾಜಮುಖಿ ಕಾರ್ಯ ಮಾಡುತ್ತಿದೆ.

ಆಲೂರು ರಾಮ ಭಜನಾ ಮಂದಿರ ಹತ್ತಿರ ಒಂದು ತೊಟ್ಟಿಯನ್ನು ತಂಡದ ಸದಸ್ಯೆ ಶಾರದಾ ಜೋಯಿಸ್ ನೇತೃತ್ವದಲ್ಲಿ ಇಡಲಾಯಿತು. ಈ ಸಂದರ್ಭದಲ್ಲಿ ಪ್ರಭಾಕರ್ ಶೆಟ್ಟಿ, ದಿನೇಶ್ ಆಚಾರ್ಯ, ರಾಘವೇಂದ್ರ ದೇವಾಡಿಗ, ಸಂತೋಷ್ ಪೂಜಾರಿ, ರಾಜೇಶ್ ದೇವಾಡಿಗ ಇದ್ದರು. ಯೋಜನೆಯ ಪ್ರಮುಖ ರೂವಾರಿ ಉಮೇಶ್ ಪ್ರಭು ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-28-314273086

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.