ಮಾಗಡಿ: ರೈತರು ತಮ್ಮ ಸ್ವಂತ ಆರೋಗ್ಯದ ಕಡೆಗೆ ಗಮನ ಹರಿಸುವಷ್ಟೇ ಜಾಗರೂಕತೆಯಿಂದ ತಮ್ಮ ರಾಸುಗಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಕಾಲುಬಾಯಿ ರೋಗದಂತಹ ಮಾರಕ ಕಾಯಿಲೆ ತಡೆಗಟ್ಟಲು ಕಾಲ ಕಾಲಕ್ಕೆ ಲಸಿಕೆ ಹಾಕಿಸುವುದು ಅಗತ್ಯ ಎಂದು ಬನುಲ್ ನಿರ್ದೇಶಕ ಎಚ್.ಎನ್.ಅಶೋಕ್ ಹೇಳಿದರು.

ತಾಲ್ಲೂಕಿನ ತಟವಾಳು ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಆಯೋಜಿಸಿದ್ದ ಜಾನುವಾರು ಕಾಲುಬಾಯಿ ರೋಗ ತಡೆಗಟ್ಟುವ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಹೈನುಗಾರಿಕೆಯಿಂದ ಆರ್ಥಿಕ ಸಬಲೀಕರಣ ಸಾಧ್ಯ. ಗ್ರಾಮೀಣ ಭಾಗದ ಜನರು ಹಸು, ಎಮ್ಮೆ ಸೇರಿದಂತೆ ತಮ್ಮ ರಾಸುಗಳಿಗೆ ಪಶು ವೈದ್ಯರ ಸಲಹೆಯಂತೆ ಲಸಿಕೆ ಮತ್ತು ಚುಚ್ಚುಮದ್ದು ನೀಡಬೇಕು’ ಎಂದು ಅಭಿಪ್ರಾಯಪಟ್ಟರು.

ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ನಾಗಭೂಷಣ್ ಮಾತನಾಡಿದರು.

ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ್, ಮುಖಂಡರಾದ ಕಾಂತರಾಜು, ಸೀಗೆಕುಪ್ಪೆ ಲೋಕೇಶ್, ಮಂಜುನಾಥ್, ಡೇರಿ ಅಧ್ಯಕ್ಷ ಶೇಖರ್, ಶಿವು ಗೊಲ್ಲರಹಟ್ಟಿ, ಕಾರ್ಯದರ್ಶಿ ಗಂಗಾಧರ್, ಅಣ್ಣಪ್ಪ, ಚಿತ್ತಯ್ಯ, ಪಶು ವೈದ್ಯಾಧಿಕಾರಿಗಳಾದ ಜಯಶ್ರೀ, ಬಮೂಲ್ ಪಶು ವೈದ್ಯಾಧಿಕಾರಿ ರೂಪಾ ಹಾಗೂ ವಿಸ್ತರಣಾಧಿಕಾರಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-14-2128275051

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.