ಮಾಗಡಿ: ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಬಗ್ಗೆ ಮಾಹಿತಿ ನೀಡಲು ಮಾಗಡಿ ತಾಲ್ಲೂಕಿನ ಆಯ್ದ 55 ರೈತರನ್ನು ತುಮಕೂರು ಜಿಲ್ಲೆಯ ತಿಪಟೂರಿಗೆ ಈಚೆಗೆ ಒಂದು ದಿನದ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು.

ತಾಲ್ಲೂಕಿನ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ರೈತರಿಗೆ ಪ್ರವಾಸ ಆಯೋಜಿಸಿದ್ದವು.

ಪ್ರವಾಸದ ಮೊದಲ ಭಾಗವಾಗಿ ಎಂ.ಎಸ್. ಪಾಳ್ಯ ಗ್ರಾಮದ ಪ್ರಗತಿಪರ ರೈತ ಸಿದ್ದಲಿಂಗಸ್ವಾಮಿ ಅವರ ಡೇರಿ ಫಾರ್ಮ್ಗೆ ಭೇಟಿ ನೀಡಲಾಯಿತು. 2019 ರಿಂದ ಸ್ವತಂತ್ರವಾಗಿ ಡೈರಿ ನಿರ್ವಹಿಸುತ್ತಿರುವ ಅವರು ಅಳವಡಿಸಿಕೊಂಡಿರುವ ಫ್ರೀ ಲಿವಿಂಗ್ ಪದ್ಧತಿ ರೈತರ ಗಮನ ಸೆಳೆಯಿತು.

ಸಿದ್ದಲಿಂಗಸ್ವಾಮಿ ಅವರನ್ನು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಬಮೂಲ್ ವತಿಯಿಂದ ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-17-1476915786

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.