ನವಲಗುಂದ: ಕೃಷಿಯ ಜೊತೆ ಉಪ ಕಸುಬಾಗಿ ಕುರಿ, ಕೋಳಿ, ಹೈನುಗಾರಿಕೆ ಹಾಗೂ ಮೀನು ಸಾಕಣೆ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಬಹುದು ಎಂದು ಮೊರಬ ಕೃಷಿ ಸಮೃದ್ಧಿ ರೈತ ಉತ್ಪಾದಕರ ಕಂಪನಿ ಹಾಗೂ ದಾನೇಶ್ವರಿ ಫಾರ್ಮ್ ಹೌಸ್ನ ಮಾಲೀಕ ಮಂಜುನಾಥ್ ಕಾಲವಾಡ ಹೇಳಿದರು.

ಮೊರಬ ಗ್ರಾಮದಲ್ಲಿ ಕೃಷಿ ಸಮೃದ್ಧಿ ರೈತ ಉತ್ಪಾದಕರ ಕಂಪನಿ ಲಿಮಿಟೆಡ್, ದಾನೇಶ್ವರಿ ಫಾರ್ಮ್ ಹೌಸ್ ಮೊರಬ ಹಾಗೂ ರುಡ್ಸೆಟ್ ಸಹಯೋಗದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತ ಬೆಳೆದ ಧಾನ್ಯಗಳು ಮೌಲ್ಯವರ್ಧನೆ ಆಗಬೇಕು. ಆ ದಿಸೆಯಲ್ಲಿ ನಮ್ಮ ಕಂಪನಿ ಸೋಲಾರ್ ಡ್ರೈಯರ್, ದಾಲ್ ಮಿಲ್, ಎಣ್ಣೆ ಗಾಣ, ಹಾಗೂ ಖಾರಾ ಚಟ್ನಿ ಮುಂತಾದ ಉಪ ಉತ್ಪನ್ನ ಮಾಡುವುದರೊಂದಿಗೆ ಆದಾಯ ದ್ವಿಗುಣಗೊಳಿಸುವಲ್ಲಿ ಹೆಜ್ಜೆ ಇಟ್ಟಿದೆ ಎಂದರು.

ಕಂಪನಿ ಸಿಇಒ ಯೋಗಪ್ಪ ಧಾರವಾಡ, ಕಾನೂನು ಸಲಹೆಗಾರ ಚಿದಾನಂದ ಪಿ ಮನ್ಸೂರ್, ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ನಿರ್ದೇಶಕರ ಬಸವರಾಜ ಕುಂದಗೋಳಮಠ, ರುಡ್ಸೆಟ್ ಸಂಸ್ಥೆಯ ಡೈರೆಕ್ಟರ್ ಪೃಥ್ವಿರಾಜ್ ಜಿ.ಪಿ ಕೆನರಾ ಬ್ಯಾಂಕ್, ಪುಣೆ ವೃತ್ತದ ಹಿರಿಯ ಪ್ರಬಂಧಕರಾದ ಮಂಜೀತ್ ಸಿಂಗ್ ಯಾದವ್, ರುಡ್ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಜಗದೀಶ ಪೂಜಾರ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-24-1419296609

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.