ಶಿಗ್ಗಾವಿ: ‘ಇತ್ತೀಚೆಗೆ ಹುಲ್ಲುಗಾವಲು ಪ್ರದೇಶಗಳು ಕಡಿಮೆಯಾಗಿದ್ದು, ರೈತರು ಹೊಲಗದ್ದೆಗಳ ಬದಿಯಲ್ಲಿ ಮೇವು ಬೀಜ ಬಿತ್ತನೆ ಮಾಡುವುದರ ಮೂಲಕ ಜಾನುವಾರುಗಳ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳಲು ಸಾಧ್ಯವಿದೆ’ ಎಂದು ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಹೇಳಿದರು.

ಪಟ್ಟಣದಲ್ಲಿ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಉಪವಿಭಾಗೀಯ ಕಚೇರಿಯಲ್ಲಿ ಮೇವು ಬೀಜ ಪಾಕೀಟಗಳನ್ನು ಶನಿವಾರ ರೈತರಿಗೆ ಉಚಿತವಾಗಿ ವಿತರಿಸಿ ಮಾತನಾಡಿದ ಅವರು, ‘ಮೇವು ಬೀಜ ಬಿತ್ತನೆಯಿಂದ ಜಾನುವಾರುಗಳ ಆಹಾರಕ್ಕೆ ಅನುಕೂಲವಾಗಲಿದೆ. ಇದರಿಂದ ಹೈನುಗಾರಿಕೆ ಮೂಲಕ ಉತ್ತಮ ಆದಾಯ ಗಳಿಸಬಹುದು’ ಎಂದರು.

ಸರ್ಕಾರ ಉಚಿತವಾಗಿ ಮೇವು ಬೀಜ ವಿತರಿಸುತ್ತಿದ್ದು, ರೈತರು ಪ್ರಯೋಜನ ಪಡೆಯಲು ಮುಂದಾಗಬೇಕು. ಮುಂಗಾರಿನಲ್ಲಿ ಹಸಿರು ಮೇವಿನ ಉತ್ಪಾದನೆಗಾಗಿ ಎನ್.ಎಲ್.ಎಂ ಯೋಜನೆಯಡಿ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಕ್ಕೆ 300 ಕ್ವಿಂಟಲ್ ಗೋವಿನ ಜೋಳ ಬೀಜಗಳನ್ನು ಹಂಚಿಕೆ ಮಾಡಲಾಗಿದ್ದು, ಹಾಲಿನ ಪ್ರಮಾಣದ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತಿದೆ’ ಎಂದರು.

ಈ ವೇಳೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ತಿಪ್ಪಣ್ಣ ಸಾತಣ್ಣವರ, ಶಂಕರಗೌಡ ಪಾಟೀಲ, ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣನವರ, ಪುರಸಭೆ ಸದಸ್ಯರಾದ ಗೌಸಖಾನ್ ಮುನಸಿ, ವಸಂತಾ ಬಾಗೂರು, ಮುಖಂಡರಾದ ಹನುಮರಡ್ಡಿ ನಡುವಿನಮನಿ, ಬಾಬರ ಬೋವಾಜಿ, ಈರಣ್ಣ ಸಮಗೊಂಡ, ಚಂದ್ರು ಕೊಡ್ಲಿವಾಡ, ಬಸಲಿಂಗಪ್ಪ ನರಗುಂದ, ಮಂಜುನಾಥ ಹಾವೇರಿ, ಆನಂದ ಕೆಳಗಿನಮನಿ, ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಗುಡ್ಡಪ್ಪ ಜಲದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-22-1070814228

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.