ಶಿವಮೊಗ್ಗ: ‘ಸನಾತನ ಧರ್ಮ ಸಂಸ್ಕೃತಿಯಲ್ಲಿ ಗೋಮಾತೆಗೆ, ಗೋಪೂಜೆಗೆ, ಗೋದಾನಕ್ಕೆ ವಿಶೇಷ ಸ್ಥಾನ ಮತ್ತು ಗೌರವವಿದೆ. ಗೋವಿನ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಟ್ರಸ್ಟಿ ಧರ್ಮಸ್ಥಳದ ಸುರೇಂದ್ರಕುಮಾರ್ ಹೇಳಿದರು.

ನಗರದ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿ ಗೋವರ್ಧನ ಟ್ರಸ್ಟ್ ವತಿಯಿಂದ ಗೋವುಗಳ ಸೇವೆಗೆ ವಿಶೇಷ ಆಂಬುಲೆನ್ಸ್ ಸಮರ್ಪಣೆ, ಗೋಶಾಲೆ, ಸಾವಯವ ಕೃಷಿಕರ ಟ್ರಸ್ಟ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

‘ನಾಲ್ಕು ತಿಂಗಳಲ್ಲಿ ಶಿವಮೊಗ್ಗದ ಗೋವರ್ಧನ ಸಂಸ್ಥೆ ವಿಶೇಷ ಕೆಲಸ ಮಾಡಿದೆ. ಇಲ್ಲಿನ ಮೂರು ಗೋಶಾಲೆಗಳಿಗೆ ಮೂಲ ಸೌಲಭ್ಯ, ಮೇವು ವಿತರಣೆ, ಆಂಬುಲೆನ್ಸ್ ಲೋಕಾರ್ಪಣೆ ಅಲ್ಲದೆ 5,000ಕ್ಕೂ ಹೆಚ್ಚು ಗೋ ಕಾರ್ಯಕರ್ತರನ್ನು ಸಂಘಟಿಸಿ ಮನೆ ಮನೆಯಿಂದ ಪ್ರತಿ ತಿಂಗಳು ಗೋವಿನ ಪಾಲನೆಗಾಗಿ ಹಣ ಸಂಗ್ರಹಿಸಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಈ ಪುಣ್ಯಕಾರ್ಯದಲ್ಲಿ ಸಹಕಾರ ನೀಡಿ’ ಎಂದರು.

‘ಗೋರಕ್ಷಣೆ ಪುಣ್ಯದ ಕಾರ್ಯ. ಧರ್ಮ ಮತ್ತು ಗೋವಿನ ವಿಚಾರದಲ್ಲಿ ಅನ್ಯಾಯ ಮಾಡಿದವರು ಅನುಭವಿಸುತ್ತಾರೆ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

‘ಗೋಮಾತೆ ಎಂದಾಕ್ಷಣ ನಮಗೆ ತಾಯಿಯ ನೆನಪಾಗುತ್ತದೆ. ಕೇವಲ ನಾಲ್ಕು ತಿಂಗಳಲ್ಲೇ ಗೋವರ್ಧನ ಬೃಹದಾಕಾರವಾಗಿ ಬೆಳೆದಿದೆ. ನಗರದ ಮೂರು ಗೋಶಾಲೆಗಳಿಗೆ ಮೇವು ನೀಡುವ ಹಾಗೂ ಮೂಲ ಸೌಲಭ್ಯಕ್ಕೆ ಮುಂದಾಗಿದೆ. ಅಪಘಾತದಲ್ಲಿ ಗಾಯಗೊಂಡ ಗೋವುಗಳ ರಕ್ಷಣೆಗೆ ₹ 25 ಲಕ್ಷ ವೆಚ್ಚದಲ್ಲಿ ಆಂಬುಲೆನ್ಸ್ ಕೂಡ ನೀಡಲಾಗುತ್ತಿದೆ’ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕೆ.ಈ. ಕಾಂತೇಶ್ ತಿಳಿಸಿದರು. ಪ್ರಮುಖರಾದ ಗುರುಗುಹ ನಾಗರಾಜ್, ಉಮೇಶ್ ಆರಾಧ್ಯ, ನಟರಾಜ್ ಭಾಗವತ್, ನವ್ಯಶ್ರೀ ನಾಗೇಶ್, ಗುರುಶೇಟ್, ಶೇಷಾಚಲ, ಶಿವಶಂಕರ್, ಮಹಾಲಿಂಗಶಾಸ್ತ್ರಿ, ಜಯಸ್ವಾಮಿ, ರಮೇಶ್ ಜಾಧವ್, ಶಾಂತಾ, ಉಮಾಮೂರ್ತಿ, ರಮೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-42-80781441

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.