ಕೊರಟಗೆರೆ: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಒಕ್ಕೂಟ, ಪಶುಪಾಲನ ಇಲಾಖೆಯಿಂದ ತಾಲ್ಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಆವರಣದಲ್ಲಿ ರೈತರಿಗಾಗಿ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಮಿಶ್ರ ತಳಿರಾಸುಗಳ ಹಾಲು ಕರೆಯುವ ಸ್ಪರ್ಧೆ ಹಾಗೂ ಮಿಶ್ರತಳಿ ಹೆಣ್ಣು ಕರು ಪ್ರದರ್ಶನ ರೈತರ ಶ್ರಮ, ಪಶುಸಂಗೋಪನೆ ಮಹತ್ವ ಸಾರುವ ವೇದಿಕೆಯಾಗಿ ಮಾರ್ಪಟ್ಟಿತ್ತು.

ರೈತರಿಗೆ ಸಂಜೆ ಹಾಗೂ ಬೆಳಿಗ್ಗೆ ಹಾಲು ಕರೆಯುವ ಸ್ಪರ್ಧೆ ನಡೆಸಲಾಯಿತು. 50ಕ್ಕೂ ಹೆಚ್ಚಿನ ರೈತರು ಹಸುಗಳೊಂದಿಗೆ ಪಾಲ್ಗೊಂಡಿದ್ದರು. ಹಾಲಿನ ಪ್ರಮಾಣ, ಗುಣಮಟ್ಟ (ಫ್ಯಾಟ್ ಅಂಶ) ಮತ್ತು ಹಸುಗಳ ಆರೋಗ್ಯವನ್ನು ಕೂಡ ತೀರ್ಪುಗಾರರು ಪರಿಗಣಿಸಿದರು. ಹಾಲು ಕರೆಯುವ ಕೌಶಲ ನೋಡಲು ಜನ ಮುಗಿಬಿದ್ದರು.

ಮೊದಲನೇ ಬಹುಮಾನ ಬೈಚೇನಹಳ್ಳಿ ಅನುಸೂಯಮ್ಮ ನಟರಾಜು ಅವರಿಗೆ ₹30ಸಾವಿರ, ಪಾರಿತೋಷಕ ಹಾಗೂ ಎರಡನೇ ಬಹುಮಾನ ಪಾತಗನಹಳ್ಳಿ ಗ್ರಾಮದ ರಾಮಕ್ಕ ರಂಗಸ್ವಾಮಿ ₹20 ಸಾವಿರ, ಪಾತಗಾನಹಳ್ಳಿ ರಾಜೇಶ್ವರಿ ಶಿವಕುಮಾರ್ ಅವರಿಗೆ ತೃತೀಯ ಬಹುಮಾನ ₹10 ಸಾವಿರ ನೀಡಲಾಯಿತು.

ಮಠದ ಪೀಠಾಧ್ಯಕ್ಷ ಹನುಮಂತನಾಥ ಸ್ವಾಮೀಜಿ, ತುಮಕೂರು ಹಾಲು ಒಕ್ಕೂಟದ ತಾಲ್ಲೂಕು ನಿರ್ದೇಶಕ ಸಿದ್ದಗಂಗಯ್ಯ, ಮಧುಗಿರಿ ನಾಗೇಶ್ ಬಾಬು, ಚಂದ್ರಶೇಖರ್ ರೆಡ್ಡಿ, ಕಾಮರಾಜು, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಸುಧಾಕರ್, ಶ್ರೀನಿವಾಸ್, ದೀಕ್ಷಿತ್, ಪುಷ್ಪಲತಾ, ಬಶೀರಾ, ವೈ.ವಿ ಚಂದ್ರಶೇಖರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-18-641621153

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.