ಮಹಾಲಿಂಗಪುರ: ‘ಹಾಲಿನ ಗುಣಮಟ್ಟವನ್ನು ಕಾಪಾಡಲು ಹಳ್ಳಿಗಳ ಮಟ್ಟದಲ್ಲೇ ಹಾಲನ್ನು ಶೈತ್ಯೀಕರಿಸುವ ಬಿಎಂಸಿ (ಬಲ್ಕ್ ಮಿಲ್ಕ್ ಕೂಲರ್) ಘಟಕಗಳನ್ನು ಸ್ಥಾಪಿಸಲಾಗಿದೆ. ಹಾಲನ್ನು ಕರೆದ ತಕ್ಷಣ ಶೈತ್ಯೀಕರಣ ಮಾಡುವುದರಿಂದ ಅದರಲ್ಲಿನ ಸೂಕ್ಷ್ಮಾಣುಜೀವಿಗಳ ಬೆಳವಣಿಗೆಯನ್ನು ತಡೆಗಟ್ಟಬಹುದು’ ಎಂದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.

ಸಮೀಪದ ಮಾರಾಪುರ ಗ್ರಾಮದಲ್ಲಿ ಮಾರಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರೈತರಿಗೆ ಬೋನಸ್ ಹಾಗೂ ಹಾಲು ಸಂಗ್ರಹಿಸಲು ಸ್ಟೀಲ್ ಕ್ಯಾನ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಒಕ್ಕೂಟವು ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ನಾಗ್ಪುರಗಳಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದೆ. ನಾಗ್ಪುರಕ್ಕೆ ಪ್ರತಿದಿನ 15,000 ಲೀಟರ್ ಹಾಲು ಸರಬರಾಜು ಮಾಡಲಾಗುತ್ತಿದೆ. ಸೊಲ್ಲಾಪುರದಲ್ಲಿ ಕೇವಲ ಎರಡೇ ತಿಂಗಳಲ್ಲಿ ಹಾಲಿನ ಮಾರಾಟವನ್ನು 1,500 ಲೀಟರ್ನಿಂದ 7,000 ಲೀಟರ್ಗೆ ಹೆಚ್ಚಿಸುವ ಮೂಲಕ ಪ್ರಗತಿ ಸಾಧಿಸಲಾಗಿದೆ’ ಎಂದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ.ಶಿವಶಂಕರಸ್ವಾಮಿ ಮಾತನಾಡಿ, ‘ಪ್ರಸ್ತುತ ಬೇಸಿಗೆಯ ಕಾಲದಲ್ಲಿ ಪ್ರತಿದಿನ ಸರಾಸರಿ 1,35,000 ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಹಾಲಿನ ಲಭ್ಯತೆ ಹೆಚ್ಚಿರುವ ಸುಗ್ಗಿ ಕಾಲದಲ್ಲಿ ಈ ಪ್ರಮಾಣವು ಸುಮಾರು 1,60,000 ಲೀಟರ್ವರೆಗೆ ತಲುಪುತ್ತದೆ. 'ನಂದಿನಿ' ಬ್ರ್ಯಾಂಡ್ ತನ್ನ ಗುಣಮಟ್ಟಕ್ಕೆ ವಿಶ್ವದಾದ್ಯಂತ ಹೆಸರಾಗಿದ್ದು, ಅದನ್ನು ಕಾಯ್ದುಕೊಳ್ಳಲು ಒಕ್ಕೂಟವು ಹೆಚ್ಚಿನ ಆದ್ಯತೆ ನೀಡುತ್ತಿದೆ’ ಎಂದರು.

ಮಾರಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ.ಮಾರಾಪುರ ಅಧ್ಯಕ್ಷತೆ ವಹಿಸಿದ್ದರು. ಈರಪ್ಪ ಕೊಪ್ಪದ, ಚಂದ್ರಶೇಖರ ಆದಬಸಪ್ಪಗೋಳ, ಧರೆಪ್ಪ ಸಾಂಗಲಿಕರ, ಎಸ್.ಎಸ್.ಅಥಣಿ, ಅನಿತಾ ಬೀಸನಕೊಪ್ಪ, ನಿಂಗಪ್ಪ ಬಾಳಿಕಾಯಿ, ಜುಬೀನಾ ಲಾಡಖಾನ, ಶ್ರೀಪಾದ ಕುಲಕರ್ಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-19-1640185143

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.