ವಿಜಯಪುರ: ಗೋವುಗಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬ ರೈತನ ಕರ್ತವ್ಯ. ಕನಿಷ್ಠ ಒಂದು ಆಕಳನ್ನಾದರೂ ಸಾಕುವ ಕೆಲಸವಾಗಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ತಾಲ್ಲೂಕಿನ ಕಗ್ಗೋಡ ಗ್ರಾಮದಲ್ಲಿರುವ ಸಿದ್ಧೇಶ್ವರ ಸಂಸ್ಥೆಯ ರಾಮನಗೌಡ ಬಾ. ಪಾಟೀಲ (ಯತ್ನಾಳ್) ಗೋರಕ್ಷಾ ಕೇಂದ್ರದಲ್ಲಿ ಗೋ ಶಾಲೆ ಆಶ್ರಯದಲ್ಲಿ ಈಚೆಗೆ ನಡೆದ ಗೋ ಆಧಾರಿತ ಕೃಷಿಕರ ಚಿಂತನಾ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗೋವು ಕಾಮಧೇನು, ಕಲ್ಪವೃಕ್ಷ ಎಂಬ ಭಾವನೆಯಿಂದ ಸಾವಿರಾರು ವರ್ಷಗಳ ಹಿಂದಿನಿಂದಲೂ ನಮ್ಮ ಪೂರ್ವಜರು ಇಡೀ ಪ್ರಾಣಿಗಳಲ್ಲಿಯೇ ಗೋವಿಗೆ ಅತ್ಯುನ್ನತ ಮಹತ್ವ ಕೊಟ್ಟಿದ್ದಾರೆ. ನಾವು ಆಧುನಿಕತೆಯಲ್ಲಿ ಯಾಂತ್ರೀಕೃತ ಒಕ್ಕಲುತನಕ್ಕೆ ಒಳಗಾಗಿ, ಹಸುಗಳನ್ನು ಸಾಕುವುದು ಬಹಳ ಕಡಿಮೆ ಆಗಿದೆ. ಆದರೆ, ವಿದೇಶದಲ್ಲಿ ಬೆಳಿಗ್ಗೆ ಆಕಳುಗಳ ಮೇಲೆ ಕೈಯಾಡಿಸಿದರೆ ಬಿಪಿ ನಾರ್ಮಲ್ ಇರುತ್ತದೆ ಅಂತ ಹಸು ಸಾಕುತ್ತಿದ್ದಾರೆ’ ಎಂದು ತಿಳಿಸಿದರು.

ಕರ್ನಾಟಕ ಪಶು ವೈದ್ಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ಸಂಶೋಧನಾ ನಿರ್ದೇಶಕರಾದ ಡಾ.ಶಿವಪ್ರಕಾಶ ಬಿ.ವಿ. ಮಾತನಾಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ರಾಹುಲಕುಮಾರ್ ಭಾವಿದೊಡ್ಡಿ, ಪಶುಪಾಲನೆ ಇಲಾಖೆಯ ಉಪನಿರ್ದೇಶಕರಾದ ಡಾ.ಆರ್.ಎಸ್. ಪದರಾ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕರಾದ ಗಂಗಾಧರ ದೇಸಾಯಿ, ಸಿದ್ಧೇಶ್ವರ ಸಂಸ್ಥೆ ಪದಾಧಿಕಾರಿಗಳು, ಪ್ರಗತಿಪರ ರೈತರು, ಸಾವಯವ ಕೃಷಿ ಅವಲಂಬಿತ ಕೃಷಿಕರು ಇದ್ದರು.

ನಂತರ ನಡೆದ ಗೋಷ್ಠಿಗಳಲ್ಲಿ ಗೋ ಆಧಾರಿತ ಕೃಷಿ ಮತ್ತು ಆರ್ಥಿಕತೆ ಕುರಿತು ಗೋ ಆಧಾರಿತ ಕೃಷಿ ಚಿಂತಕರು ಹಾಗೂ ಸಲಹೆಗಾರರಾದ ಡಾ.ಪ್ರಾಣೇಶ ಜಹಾಗೀರದಾರ, ಗೋ ಉತ್ಪನ್ನಗಳ ತಯಾರಿಕೆ ಕುರಿತು ತಜ್ಞರಾದ ಡಾ.ಸುಧೀಂದ್ರ ದೇಶಪಾಂಡೆ ಹಾಗೂ ಸಾವಯವ ಕೃಷಿ ಕುರಿತು ಡಾ.ರವಿಂದ್ರ ಬೆಳ್ಳಿಯವರು ಮಾಹಿತಿ ನೀಡಿದರು. ಇದೇ ವೇಳೆ ರೈತರು ಗೋ ಶಾಲೆ, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರ, ಗೋ ಉತ್ಪನ್ನಗಳ ತಯಾರಿಕೆ ಘಟಕ ಮತ್ತು ಎರೆಹುಳು ಘಟಕಗಳಿಗೆ ಭೇಟಿ ನೀಡಿ ಮಾರ್ಗದರ್ಶನ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-26-423230782

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.