ಯಳಂದೂರು:ಒಣಹವೆಯಲ್ಲಿ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಚರ್ಮಗಂಟು ರೋಗ ತಡೆಯುವ ನಿಟ್ಟಿನಲ್ಲಿ ಲಸಿಕಾ ಅಭಿಯಾನ ಆರಂಭಿಸಲಾಗಿದೆ ಎಂದು ಪಶು ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಶಿವರಾಜು ಹೇಳಿದರು.

ತಾಲ್ಲೂಕಿನ ಕಟ್ನವಾಡಿ ಗ್ರಾಮದಲ್ಲಿ ಸೋಮವಾರ ಹಸುಗಳಿಗೆ ಚರ್ಮಗಂಟು ಸೋಂಕು ತಡೆ ಚುಚ್ಚುಮದ್ದು ನೀಡಿ ಅವರು ಮಾತನಾಡಿದರು. ತಾಲ್ಲೂಕಿನ 28 ಗ್ರಾಮಗಳ ಜಾನುವಾರುಗಳಿಗೆ ಬೆಳಗಿನ ಸಮಯದಲ್ಲಿ ಲಸಿಕೆ ನೀಡಲಾಗುತ್ತದೆ. ತಾಲ್ಲೂಕನ್ನು 4 ಬ್ಲಾಕ್ ಆಗಿ ವಿಭಾಗಿಸಿಕೊಂಡು ಪಶು ವೈದ್ಯರು ಮನೆ ಮನೆಗಳ ಬಳಿ ತೆರಳಿ ಮಾಹಿತಿ ನೀಡುತ್ತಾರೆ. ಬಹುತೇಕ ಬೆಳಗಿನ ಸಮಯ ದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ರಾಸುಗಳಿಗೆ ಜ್ವರ ಬಂದ ನಂತರ ಗಂಟು ಕಾಣಿಸಿಕೊಂಡರೆ, ಕೀಲುಗಳಲ್ಲಿ ಊತ ಮತ್ತು ಬಾವು ಕಾಡುತ್ತದೆ. ಇದರಿಂದ ಹಸುಗಳಿಗೆ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಸಾಕಣೆದಾರರು ಎಚ್ಚರ ವಹಿಸದಿದ್ದರೆ ದನ ಕರುಗಳಿಗೆ ಸೋಂಕು ಹರಡುವ ಸಧ್ಯತೆ ಇದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸಾಕಣೆದಾರರು ಕೊಟ್ಟಿಗೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸೊಳ್ಳೆ, ನೊಣ ಕಚ್ಚದಂತೆ ನೋಡಿಕೊಳ್ಳಬೇಕು. ಇದರಿಂದ ಹೈನುಗಾರರ ಸಂಕಷ್ಟವನ್ನು ದೂರ ಮಾಡಬಹುದು ಎಂದು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-37-1605706964

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.