ಯಳಂದೂರು: ‘ಬಿಳಿಗಿರಿರಂಗನ ಬೆಟ್ಟದಲ್ಲಿ ನಾಲ್ಕು ಬಗೆಯ ಜೇನು ಪ್ರಭೇದಗಳಿದ್ದು, ಅವುಗಳಲ್ಲಿ ಬಹು ಔಷಧೀಯ ಮೌಲ್ಯಗಳ ಬಂಡಾರವಾದ ನುಸರಿ ಜೇನು ತುಪ್ಪಕ್ಕೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಾಗಿದೆ’ ಎಂದು ಬುಡಕಟ್ಟು ಸಂಘದ ಜಿಲ್ಲಾ ಅಧ್ಯಕ್ಷ ಸಿ.ಮಾದೇಗೌಡ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಅಡವಿ ಸಂಸ್ಥೆಯಲ್ಲಿ ಏಟ್ರಿ ಸಂಸ್ಥೆ, ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೊ ಹಾಗೂ ರಾಷ್ಟ್ರೀಯ ಜೇನುನೊಣ ಮಂಡಳಿ ಸಹಯೋಗದಲ್ಲಿ ಶುಕ್ರವಾರ ಸೋಲಿಗರಿಗೆ ಆಯೋಜಿಸಿದ್ದ ಒಂದು ದಿನದ ‘ನುಸರಿ (ನೆಸರಿ) ಜೇನು ಸಾಕಾಣಿಕೆ’ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಿಆರ್ಟಿ ಅರಣ್ಯ ಪ್ರದೇಶದಲ್ಲಿ ಹೆಜ್ಜೇನು, ಕಡ್ಡಿಜೇನು, ತುಡುವೆ ಜೇನು ಕಂಡುಬರುತ್ತಿವೆ. ಇದರ ಜೊತೆಗೆ ಮರದ ಪೊಟರೆ ಮತ್ತು ಕಟ್ಟಡದ ಸಂದುಗಳಲ್ಲಿ ವಾಸಿಸುವ ನುಸರಿ (ಟ್ರಿಗೋನಾ) ಸಂತತಿ ಜೇನುಗಳನ್ನು ಕೃತಕ ಪರಿಸರದಲ್ಲಿ ಬೆಳೆಸಲು ತರಬೇತಿ ನೀಡಲಾಗುತ್ತದೆ. ಇದರಿಂದ ಸೋಲಿಗ ಸಮುದಾಯ ಆರ್ಥಿಕವಾಗಿ ಸಬಲತೆ ಹೊಂದಬಹುದು. ಜೇನು ಕುಟುಂಬ ಈಚಿನ ದಿನಗಳಲ್ಲಿ ಅಪಾಯಕ್ಕೆ ಸಿಲುಕಿದ್ದು, ವಿವಿಧ ಕಾರಣಗಳಿಂದ ವಲಸೆ ಹೋಗುವುದನ್ನು ತಪ್ಪಿಸಲು ಸಾಧ್ಯ ಆಗಲಿದೆ ಎಂದರು.

ಪರಾಗಸ್ಪರ್ಶ ಮಾಡುವ ಮೂಲಕ ಕೃಷಿ ಇಳುವರಿ ಹೆಚ್ಚಳಕ್ಕೆ ಜೇನುಹುಳು ನೆರವಾದರೆ, ಬೆಟ್ಟಗುಡ್ಡಗಳಲ್ಲಿ ಜೀವಿಸುವ ಜೇನು ನೊಣಗಳು ವನ ವೈವಿಧ್ಯದ ಉಳಿವಿಗೆ ಶ್ರಮಿಸುತ್ತವೆ. ನೈಸರ್ಗಿಕ ನೆಲೆಯ ಬಂಡೆ, ಹೆಮ್ಮರಗಳಲ್ಲಿ ಜೀವಿಸುವ ಹೆಜ್ಜೇನು ಸಸ್ಯ ಸಮೃದ್ಧತೆಗೆ ಕಾರಣವಾದರೆ, ನುಸರಿ ಜೇನು ಭೂ ಮೇಲ್ಪದರದ ಸಣ್ಣಸಣ್ಣ ಹೂ ಬಿಡುವ ಸಸ್ಯ ಕ್ಷೇತ್ರವನ್ನು ಅರಳಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಕೀಟ ವಿಜ್ಞಾನಿ ಡಾ.ಅಮಲಾ ಉದಯಕುಮಾರ್ ಮಾತನಾಡಿ, ‘ಜೇನ್ನೊಣಗಳು ಇರುವೆ ಮತ್ತು ಕಣಜಗಳ ವರ್ಗಕ್ಕೆ ಸೇರಿದ ಕೀಟಗಳಾಗಿವೆ. ವಿವಿಧ ಹೂಗಳಿಂದ ಮಕರಂದ ಹೀರಿಕೊಳ್ಳಲು ನೆರವಾಗುವಂತೆ ಜೇನಿನ ನಾಲಿಗೆ ಕಾಲಾಂತರದಲ್ಲಿ ವಿಕಾಸವಾಗಿವೆ. ಹಾಗಾಗಿ, ಸಣ್ಣ ಗಾತ್ರದ ನುಸರಿ ತುಪ್ಪದ ಉತ್ಪಾದಕತೆಯಿಂದ ಗಿರಿವಾಸಿಗಳು ಹೆಚ್ಚಿನ ವರಮಾನ ಪಡೆಯಬಹುದು. 1 ಕೆಜಿ ನುಸರಿ ತುಪ್ಪಕ್ಕೆ ಮಾರುಕಟ್ಟೆ ಧಾರಣೆ ₹1500 ರಿಂದ ₹2500 ದರ ಇದ್ದು, ಪ್ರಾತ್ಯಕ್ಷಿಕೆ ಮೂಲಕ ನುಸರಿ ನೊಣಗಳ ಸಾಕಣೆ ಬಗ್ಗೆ ಮಾಹಿತಿ ನೀಡಿ, 45ಕ್ಕೂ ಹೆಚ್ಚು ಜನರಿಗೆ ಪೆಟ್ಟಿಗೆ ನೀಡಲಾಗುತ್ತದೆ ಎಂದು ಹೇಳಿದರು.

ಜೇನಿಗೆ ಎರಡು ಹೊಟ್ಟೆಗಳಿದ್ದು, ಪುಷ್ಪಗಳಿಂದ ಸಂಗ್ರಹಿಸಿದ ಮಕರಂದವನ್ನು ಗೂಡಿಗೆ ಹಿಂದುರಿಗಿದ ನಂತರ ಕೆಲಸಗಾರ ಜೇನು ಹೊರ ತೆಗೆಯುತ್ತವೆ. ಗೂಡಿನ ಚಿಕ್ಕ ಷಟ್ಕೋನದ ರಂಧ್ರಗಳಲ್ಲಿ ಶರ್ಕರ ಸಂಕೀರ್ಣಗಳಿಂದ ತುಂಬಿದ ಮಧುವನ್ನು ಶೇಖರಿಸುತ್ತವೆ. ಇಲ್ಲಿ ನೀರು ಆವಿಯಾಗಿ ಶುದ್ಧ ಜೇನು ಉಳಿಯುತ್ತದೆ. ಇವುಗಳನ್ನು ವೈಜ್ಞಾನಿಕವಾಗಿ ವಿಂಗಡಿಸುವ ಕಲೆ ಕರಗತವಾದಾಗ ಜೇನು ಸಂತತಿ ಹೆಚ್ಚಾಗುತ್ತದೆ ಎಂದು ವಿವರಿಸಿದರು.

ಸಂಶೋಧಕ ವೇಣು, ‘ಜೇನು 1 ಚಮಚ ತುಪ್ಪ ತಯಾರಿಸಲು 2 ಸಾವಿರ ಹೂಗಳ ಮಕರಂದ ಹೀರುತ್ತವೆ. ಆಯಾ ನಿಸರ್ಗದ ಫಲ ಪುಷ್ಪದ ಸಮೃದ್ಧತೆ ಜೇನಿನ ಮೇಲೆ ಅವಲಂಬಿತವಾಗಿದೆ. ಜೇನು ಉಪ ಉತ್ಪನ್ನ ರಟ್ಟು, ಮೇಣದ ಸಂಗ್ರಹ, ಮೊಟ್ಟೆ, ಲಾರ್ವ, ರಾಜದ್ರವ ಸಂಗ್ರಹಿಸುವ ಹುಳಗಳ ಜೈವಿಕ ಮಹತ್ವಗಳ ಬಗ್ಗೆ ಹೆಚ್ಚಿನ ಅರಿವು ಇರಬೇಕು’ ಎಂದರು.

ಗೇಮ್ ಸಂಸ್ಥೆಯ ಮಹದೇಶ್, ಅಡವಿ ಸಂಸ್ಕರಣ ಟ್ರಸ್ಟ್ ಅಧ್ಯಕ್ಷರಾದ ಮಾದಮ್ಮ ನಂಜೇಗೌಡ, ಸಿದ್ದೇಗೌಡ, ಕಲ್ಲಿಮಾದೇಗೌಡ, ಬಸವೇಗೌಡ, ಗಾಣಳ್ಳಿ ಮಾದೇಗೌಡ, ಕಾರನ ಕೇತೆಗೌಡ, ರಂಗಮ್ಮ, ಶಿವಮ್ಮ, ಬಸಮ್ಮ, ಸಣ್ಣರಂಗೇ ಗೌಡ, ಮಂಜುನಾಥ, ಮಾದೇಶ, ಮಹೇಶ, ಅನಿತಾ, ನಾಗರಾಜು ಶಿವಕುಮಾರ್, ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-37-1659430334

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.