ಧಾರವಾಡ: ‘ಪಶ್ಚಿಮ ಘಟ್ಟಗಳ ಮಹತ್ವವನ್ನು ತಿಳಿಸಲು ಶುಕ್ರವಾರ (ಮೇ 15) ಕೃಷಿ ವಿಶ್ವವಿದ್ಯಾಲಯದ ಸಮುದಾಯ ವಿಜ್ಞಾನ ವಿಭಾಗದ ಸಭಾಂಗಣದಲ್ಲಿ ‘ಕೃಷಿ ಮತ್ತು ಆರ್ಥಿಕತೆಯ ಮೇಲೆ ಪಶ್ಚಿಮಘಟ್ಟಗಳ ಪ್ರಭಾವ’ ಕುರಿತು ಪರಿಸರ ತಜ್ಞರ ಸಮಾವೇಶ ನಡೆಯಲಿದೆ’ ಎಂದು ಇಕೋ ವಾಚ್ ಸಂಸ್ಥೆಯ ಅಧ್ಯಕ್ಷ ಸುರೇಶ್ ಹೆಬ್ಳೀಕರ್ ತಿಳಿಸಿದರು.

‘ಗುಜರಾತ್ನಿಂದ ಕನ್ಯಾಕುಮಾರಿಯವರೆಗೆ ಪಶ್ಚಿಮ ಘಟ್ಟ ವ್ಯಾಪಿಸಿದೆ. ಬಹಳಷ್ಟು ಜನರಿಗೆ ಪಶ್ಚಿಮಘಟ್ಟದ ಮಾಹಿತಿ ತಿಳಿದಿಲ್ಲ. ಪಶ್ಚಿಮ ಘಟ್ಟದ ಜೀವ ವೈವಿಧ್ಯ, ಕಾಡು, ಅವುಗಳ ಪ್ರಯೋಜನ ಇತ್ಯಾದಿ ಕುರಿತು ಪರಿಣಿತರು ಈ ಸಮಾವೇಶದಲ್ಲಿ ವಿವರಿಸುತ್ತಾರೆ. ಪುಣೆ, ಬೆಳಗಾವಿ, ಗೋವಾ ಇತರೆಡೆಗಳ ಪರಿಣಿತರು ಪಾಲ್ಗೊಳ್ಳುವರು’ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನದಿ, ಬೆಟ್ಟ, ಕಾಡು, ನಿಸರ್ಗ ಸಂಪನ್ಮೂಲಗಳನ್ನು ನಾಶ ಮಾಡಬಾರದು, ಪಶ್ಚಿಮ ಘಟ್ಟಗಳು ರೈತರು ಮತ್ತು ಮಾನವ ಸಮುದಾಯಕ್ಕೆ ಯಾವ ರೀತಿ ಆರ್ಥಿಕ ಸಾಮಾಜಿಕ ಭದ್ರತೆ ಒದಗಿಸುತ್ತಿವೆ ಎಂಬ ವಿಷಯಗಳ ಕುರಿತು ಚರ್ಚಿಸುವರು’ ಎಂದರು.

ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶ್ರೀಪಾದ ಕುಲಕರ್ಣಿ ಮಾತನಾಡಿ, ಶಿರಸಿ ಅರಣ್ಯ ಕಾಲೇಜು ಸಹಿತ ವಿವಿಧೆಡೆಗಳ ವಿದ್ಯಾರ್ಥಿಗಳು, ಬೋಧಕರು, ಉತ್ತರ ಕನ್ನಡ, ಧಾರವಾಡ, ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸುವರು. ಸಮಾವೇಶದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ‘ಪಶ್ಚಿಮಘಟ್ಟ ಸಂಸ್ಥೆ’ ಸ್ಥಾಪಿಸಬೇಕು. ಈ ಸಂಸ್ಥೆಯಲ್ಲಿ ಪಶ್ಚಿಮ ಘಟ್ಟದ ಕುರಿತು ಅಧ್ಯಯನ, ಸಂಶೋಧನೆ ನಡೆಸಬೇಕು’ ಎಂದರು.

ಇಕೋ ವಾಚ್ ನಿರ್ದೇಶಕ ಅಕ್ಷಯ್ ಹೆಬ್ಳೀಕರ್ ಮಾತನಾಡಿ, ‘15ರಂದು ಬೆಳಿಗ್ಗೆ 10 ಗಂಟೆಗೆ ಸಮಾವೇಶದ ಉದ್ಘಾಟನೆ ನಡೆಯಲಿದೆ. ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಲು ಉದ್ಘಾಟಿಸುವರು’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-24-1611243599

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.