ಮಡಿಕೇರಿ: ಈ ವರ್ಷ ಜಾಗತಿಕವಾಗಿ ಮೇ 9 ಮತ್ತು ಅಕ್ಟೋಬರ್ 10 ಅನ್ನು ವಿಶ್ವ ವಲಸೆ ಹಕ್ಕಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ಈ ದಿನವನ್ನು ಆಚರಿಸುವ ಮೂಲಕ ವಲಸೆ ಹಕ್ಕಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ.

ರಾಜ್ಯದ ಬೇರೆ ಬೇರೆ ಭಾಗಗಳಿಗೆ ವಲಸೆ ಬರುವಂತೆ ಕೊಡಗಿಗೂ ಸಾವಿರಾರು ಮೈಲುಗಳಿಂದ ಹಕ್ಕಿಗಳು ವಲಸೆ ಬರುತ್ತವೆ. ಇಲ್ಲಿ ಕೆಲ ತಿಂಗಳು ಕಳೆದು ವಾಪಸ್ ತಮ್ಮ ತವರಿಗೆ ಮರಳುತ್ತವೆ. ಈ ಪಕ್ಷಿಗಳು ಇಲ್ಲಿ ಗೂಡು ಕಟ್ಟಿ ಮರಿ ಮಾಡುವುದಿಲ್ಲ.

ಕಳೆದ ಹಲವು ದಶಕಗಳಿಂದ ನಿಯಮಿತವಾಗಿ ಪಕ್ಷಿ ವೀಕ್ಷಣೆ ಮತ್ತು ಪಕ್ಷಿಗಳ ದಾಖಲೀಕರಣ ಕಾರ್ಯದಲ್ಲಿ ತೊಡಗಿರುವ ವಿರಾಜಪೇಟೆಯ ಪಕ್ಷಿ ತಜ್ಞ ಡಾ.ಎಸ್.ವಿ.ನರಸಿಂಹನ್ ಅವರನ್ನು ಈ ಕುರಿತು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು , ‘ಕೊಡಗಿನಲ್ಲಿ ಒಟ್ಟು 324 ಜಾತಿಯ ಪಕ್ಷಿಗಳಿವೆ. ಅವುಗಳಲ್ಲಿ 48 ಪ್ರಬೇಧದ ಪಕ್ಷಿಗಳು ವಲಸಿಗ ಪಕ್ಷಿಗಳಾಗಿವೆ’ ಎಂದು ಹೇಳಿದರು.

ಸುಮಾರು ಎರಡರಿಂದ ಎರಡೂವರೆ ಸಾವಿರ ಕಿ.ಮೀಗಳಿಂದ ನಿಯಮಿತವಾಗಿ ಮತ್ತು ನಿರ್ದಿಷ್ಟವಾಗಿ ವಲಸೆ ಹಕ್ಕಿಗಳು ಪ್ರತಿ ವರ್ಷವೂ ಕೊಡಗಿಗೆ ಆಗಮಿಸುತ್ತವೆ. ಸಾಮಾನ್ಯವಾಗಿ ಸೆಪ್ಟೆಂಬರ್ ಅಂತ್ಯದಿಂದ ಈ ವಲಸೆ ಆರಂಭವಾಗುತ್ತದೆ. ಆಗ ಉತ್ತರದಲ್ಲಿ ತೀವ್ರ ಚಳಿಗಾಲವಿದ್ದು, ಹಗಲಿನ ಸಮಯ ಕಡಿಮೆಯಾಗಿ ರಾತ್ರಿ ಸಮಯ ಹೆಚ್ಚಿರುತ್ತದೆ. ಹಿಮದಿಂದ ಆಹಾರದ ಕೊರತೆ ಪಕ್ಷಿಗಳಿಗೆ ಉಂಟಾಗುತ್ತವೆ. ಹಾಗಾಗಿ, ಹಲವು ಪಕ್ಷಿಗಳು ಉತ್ತರದಿಂದ ದಕ್ಷಿಣಕ್ಕೆ ಹಾರಿ ಬರುತ್ತವೆ’ ಎಂದು ಅವರು ವಿವರಿಸಿದರು.

ಆ ಪೈಕಿ ಕೊಡಗಿಗೆ 48 ಪ್ರಬೇಧದ ಪಕ್ಷಿಗಳು ವಲಸೆ ಬರುವುದು ವಿಶೇಷ. ಕೊಡಗಿನಲ್ಲಿರುವ 7 ಜಾತಿಯ ಬಾಲಾಡಿ ಹಕ್ಕಿಗಳಲ್ಲಿ 6 ಹೊರಗಡೆಯಿಂದ ಬಂದು ಹೋಗುವಂತವೇ ಆಗಿವೆ. ಅವು ಉತ್ತರದ ಹಿಮಾಲಯದ ಆಚೆಯಿಂದ ಬರುತ್ತವೆ. ಇಲ್ಲಿ ತೊರೆ, ನದಿ ದಡೆಗಳ ಮೇಲಿರುತ್ತವೆ ಎಂದರು.

ಇದೇ ರೀತಿ ಪಟ್ಟೆ ತಲೆಯ ಹೆಬ್ಬಾತು ಸಹ ಉತ್ತರದಿಂದ ಬಂದು ಇಲ್ಲಿ ನೀರಿರುವ ಕಡೆಗೆ ಬರುತ್ತವೆ. ಹೆಚ್ಚಾಗಿ ಕೆರೆಗಳ ಸಮೀಪ ತಂಗುತ್ತವೆ. ಕುಶಾಲನಗರ ವ್ಯಾಪ್ತಿ, ಪಕ್ಕದ ಪಿರಿಯಾಪಟ್ಟಣ ತಾಲ್ಲೂಕಿನ ಕೆರೆಗಳಲ್ಲಿ ಹೆಚ್ಚಾಗಿ ಇವು ಕಂಡು ಬರುತ್ತವೆ ಎಂದು ಹೇಳಿದರು.

ಡೇಗೆ, ಫಾಲ್ಕನ್ಸ್, ನೊಣೆ ಹಿಡುಕ ಪಕ್ಷಿಗಳು ಸೇರಿದಂತೆ 48 ಜಾತಿ ಪಕ್ಷಿಗಳು ಬರುತ್ತವೆ. ಅವುಗಳನ್ನು ನೋಡಲು ಕಣ್ಣಿದ್ದರೆ ಸಾಲದು ಮನಸ್ಸೂ ಇರಬೇಕು. ಆಗ ಮಾತ್ರ ಸಾವಿರಾರು ಕಿ.ಮೀಗಳಿಂದ ಬರುವ ಅತಿಥಿಗಳನ್ನು ಕಣ್ತುಂಬಿಕೊಳ್ಳಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-1618143513

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.