ಕೋಲಾರ: ಮನುಷ್ಯ ಮತ್ತು ಪರಿಸರದ ನಡುವೆ ಮುಖಾಮುಖಿ ಇರಬೇಕು. ಆಗ ಮಾತ್ರ ಪರಿಣಾಮದ ಬಗ್ಗೆ ಅರಿವು ಉಂಟಾಗಿ ನಿಸರ್ಗವನ್ನು ರಕ್ಷಣೆ ಮಾಡಲು ಸಾಧ್ಯ ಎಂದು ಚಿಂತಕ ಹಾಗೂ ಪ್ರಾಂಶುಪಾಲ ನಾಗೇಂದ್ರ ಕುಮಾರ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಓದುಗ ಕೇಳುಗ ನಮ್ಮ ನಡೆ 61ನೇ ತಿಂಗಳ ಕಾರ್ಯಕ್ರಮದಲ್ಲಿ ಎಚ್.ಎ.ಪುರುಷೋತ್ತಮ್ ರಾವ್ ರಚಿತ ‘ಪೆದ್ದನ್ನನ ಇಕಾಲಜಿ ಮತ್ತು ಪರಿಸರ ಲೇಖನಗಳು’ ಕೃತಿ ಕುರಿತು ಮಾತನಾಡಿದರು.

ಸಾಹಿತ್ಯೇತರರು ರಚಿಸಿರುವ ಲೇಖನಗಳು ಪರಿಸರದೊಂದಿಗೆ ಒಡನಾಟ ಇಟ್ಟುಕೊಂಡಂತಿದೆ. ಜೂನ್ 5ರಂದು ವಿಶ್ವ ಪರಿಸರ ದಿನ ಆಚರಿಸುತ್ತಿದ್ದು, ಪೆದ್ದನ್ನನ ಇಕಾಲಜಿ ಕೃತಿ ಪ್ರಸ್ತುತವಾಗಿದೆ. ಈ ಪುಸ್ತಕವು ಪರಿಸರ ಜಾಗೃತಿ ಕುರಿತು ಎಚ್ಚರಿಸುತ್ತದೆ ಎಂದರು.

ಪರಿಸರದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಅಳವಡಿಕೆ, ಪಾಲನೆ ಆಗುತ್ತಿದೆಯೇ ಎಂಬುದರ ಬಗ್ಗೆ ಅವಲೋಕನವಾಗಬೇಕು. ಬೇಟೆ, ಸಾಂಸ್ಕೃತಿಕ, ಕೃಷಿ, ಕೈಗಾರಿಕೆ ಹಂತ ಬಿಟ್ಟು, ಇದೀಗ ಕೃತಕ ಬುದ್ಧಿಮಾಂದ್ಯ (ಎಐ) ಹಂತಕ್ಕೆ ಬಂದು ತಲುಪಿದ್ದು, ಹಾನಿಪಡಿಸುವ ಹಂತದಲ್ಲಿದ್ದೇವೆ. ಬೆರಳ ತುದಿಯಲ್ಲಿ ತಂತ್ರಜ್ಞಾನ ಲಭ್ಯವಾಗಿದೆ ಎಂಬ ಅಮಲಿನಲ್ಲಿ ಬದುಕುತ್ತಿದ್ದೇವೆ. ಪೆದ್ದನ್ನನ ಇಕಾಲಜಿ ಕೃತಿಯನ್ನು ಪಠ್ಯದ ಭಾಗವಾಗಿ ಓದಿದರೆ ಅರಿವು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಪರಿಸರದೊಂದಿಗೆ ಮುಖಾ ಮುಖಿಯಾದರೆ ನಿಸರ್ಗ ಅರಿವು ಸಿಗುತ್ತದೆ. ಪ್ರಾಣಿಗಳು ಮನುಷ್ಯನ ತಂಟೆಗೆ ಬರಲ್ಲ, ಅಂತಹ ಸಂದರ್ಭದಲ್ಲಿ ಮನುಷ್ಯ ಏಕೆ ವಿಕೃತ ಮೆರೆಯಲು ಮುಂದಾಗುತ್ತಾನೆ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಪೆದ್ದನ್ನ ಅವರನ್ನು ಸನ್ಮಾನಿಸಲಾಯಿತು. ಎಚ್.ಎ.ಪುರುಷೋತ್ತಮ್, ಹ.ಮಾ.ರಾಮಚಂದ್ರ ಪ್ರೊ.ವಿ.ಚಂದ್ರಶೇಖರ್ ನಂಗಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-18-1618237574

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.