ಬೆಂಗಳೂರು: ನಗರದ ಸೆಂಟರ್ ಫಾರ್ ವೈಲ್ಡ್ಲೈಫ್ ಸ್ಟಡೀಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃತಿ ಕೆ. ಕಾರಂತ ಅವರಿಗೆ 2026 ನೇ ಸಾಲಿನ ರೋಲೆಕ್ಸ್ ನ್ಯಾಷನಲ್ ಜಿಯೋಗ್ರಾಫಿಕ್ ‘ಎಕ್ಸ್ಪೋಲರ್ ಆಫ್ ದಿ ಇಯರ್‘ ಪ್ರಶಸ್ತಿ ಲಭಿಸಿದೆ.

ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ಮತ್ತು ರೋಲೆಕ್ಸ್ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿ ವರ್ಷ ಪ್ರದಾನವಾಗುವ ಈ ಪ್ರಶಸ್ತಿಯು ಇದೇ ಮೊದಲ ಸಲ ದಕ್ಷಿಣ ಏಷ್ಯಾದ ಮಹಿಳಾ ಪರಿಸರ ಅನ್ವೇಷಕಿಯೊಬ್ಬರು ಪಡೆಯುತ್ತಿದ್ದಾರೆ ಎಂದು ಸೆಂಟರ್ ಫಾರ್ ವೈಲ್ಡ್ಲೈಫ್ ಪ್ರಕಟಣೆಯಲ್ಲಿ ತಿಳಿಸಿದೆ.

2011ರಲ್ಲಿ ಆರಂಭವಾದ ಪ್ರಶಸ್ತಿಯ ಗೌರವವು ವಿಶ್ವದಾದ್ಯಂತ ಕೇವಲ 15 ಮಂದಿ ವ್ಯಕ್ತಿಗಳು ಮತ್ತು ಎರಡು ತಂಡಗಳಿಗೆ ಮಾತ್ರ ಲಭಿಸಿದೆ. ಇತ್ತೀಚಿನ ಪ್ರಶಸ್ತಿ ವಿಜೇತರಲ್ಲಿ ಬರ್ಟೀ ಗ್ರೆಗರಿ ಮತ್ತು ಪೋಪಿ ಬೊರ್ಬೊ ರೋಗ್ಲು (2025), ಪೌಲಾ ಕಾಹುಂಬು (2021), ಜೋಯೆಲ್ ಸಾರ್ತೋರ್ (2018), ಲೀ ಬರ್ಗರ್ (2016) ಮತ್ತು ಜೇಮ್ಸ್ ಕ್ಯಾಮ್ರನ್ (2013) ಸೇರಿದ್ದಾರೆ.

ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆಯಲಿರುವ ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿಯ ವಾರ್ಷಿಕ ‘ಎಕ್ಸ್ಪೋಲರ್ಸ್ ಫೆಸ್ಟಿವಲ್‘ನಲ್ಲಿ ಈ ಪ್ರಶಸ್ತಿಯನ್ನುನೀಡಲಾಗುತ್ತದೆ. ಕೃತಿ ಅವರಿಗೆ ಈ ಹಿಂದೆ ರೋಲೆಕ್ಸ್ ಅವಾರ್ಡ್ ಫಾರ್ ಎಂಟರ್ಪ್ರೈಸ್ (2019), ಮೆಕ್ನಲ್ಟಿ ಪ್ರಶಸ್ತಿ (2025) ಮತ್ತು ರಾಯಲ್ ಜಿಯೋಗ್ರಾಫಿಕಲ್ ಸೊಸೈಟಿ ಪ್ರಶಸ್ತಿ (2026) ದೊರೆತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.