ಹಂಪಾಪುರ: ನಿಗದಿತ ಸಮಯಕ್ಕೆ ಮಳೆಯಾಗದೆ ಕಳೆಗುಂದಿದ್ದ ನಾಗರಹೊಳೆ ಅರಣ್ಯವೀಗ ಜೀವಕಳೆಯೊಂದಿಗೆ ಹಸಿರ ಸಿರಿಯಲ್ಲಿ ಕಂಗೊಳಿಸುತ್ತಿದೆ. ಎಲ್ಲಿ ಸಂಚರಿಸಿದರೂ ಹಸಿರು ಕಣ್ಣಿಗೆ ರಾಚುತ್ತಿದೆ.

ಕಳೆದ ವರ್ಷಕ್ಕಿಂತಲೂ ಅಧಿಕ ಹಸಿರು ಈಗ ನಾಗರಹೊಳೆಯಲ್ಲಿದೆ. ಕಳೆದ ವರ್ಷ ಏಪ್ರಿಲ್ನಲ್ಲೇ ಮಳೆಯಾಗಿತ್ತಾದರೂ ಹೆಚ್ಚಿನ ಮಳೆ ಬಂದಿರಲಿಲ್ಲ. ಹಾಗಾಗಿ, ಹಸಿರಿಲ್ಲದ ನಾಗರಹೊಳೆಯಲ್ಲಿ ಕಾಳ್ಗಿಚ್ಚಿನ ಆತಂಕ ಇತ್ತು. ಈ ಬಾರಿಯೂ ಮೇ ಮೊದಲ ವಾರದವರೆಗೂ ಮಳೆ ಇಲ್ಲದೇ ಆತಂಕವೇ ಇತ್ತು.

ಮಳೆಗಾಗಿ ಕಾಡಿನ ಜೀವ ಸಂಕುಲವೆಲ್ಲ ಚಾತಕ ಪಕ್ಷಿಗಳಂತೆ ಕಾದಿದ್ದವು. ಆದರೆ ವಾರ ಕಳೆಯುವುದರೊಳಗಾಗಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ವಾರದಿಂದ ಸುರಿದ ಮಳೆಯಿಂದಾಗಿ ಎಲ್ಲೆಲ್ಲೂ ಹಸಿರ ರಾಶಿಯನ್ನೇ ಅರಣ್ಯ ಹೊದ್ದುಕೊಂಡಂತೆ ಭಾಸವಾಗುತ್ತಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಉದ್ಬೂರಿನಲ್ಲಿರುವ ಅರಣ್ಯ ತಪಾಸಣಾ ಗೇಟ್ನಿಂದ ನಾಗರಹೊಳೆ ಅರಣ್ಯದೊಳಗಿನ ರಸ್ತೆಯಲ್ಲಿ ಬಳ್ಳೆ, ಮಚ್ಚೂರು ಮಾರ್ಗವಾಗಿ ಬಾವಲಿಗೆ ತೆರಳಿದರೆ ಹಸಿರ ಲೋಕದಲ್ಲಿ ವಿಹರಿಸಿದ ಅನುಭವವಾಗುತ್ತಿದೆ. ಬೇಸಿಗೆಯಾದ್ದರಿಂದ ಎಲ್ಲವೂ ಒಣಗಿದ ಸ್ಥಿತಿಯಲ್ಲಿರುತ್ತಿದ್ದ ಅರಣ್ಯದಲ್ಲಿ ಈಚೆಗೆ ಸುರಿದ ಮಳೆಯಿಂದ ಚಿಗುರೊಡೆದಿವೆ. ಈ ಮಾರ್ಗದ ಪ್ರಯಾಣಿಕರ ಚಿತ್ತವನ್ನು ಸೆಳೆಯುತ್ತಿವೆ.

ಖಾಸಗಿ ವಾಹನಗಳಲ್ಲಿ ಮತ್ತು ಕೆಎಸ್ಆರ್ಟಿಸಿ ಬಸ್ನಲ್ಲಿ ಈ ಹಸಿರ ಅಂದವನ್ನು ಕಣ್ಣುಂಬಿಕೊಳ್ಳುವ ಅವಕಾಶ ಇದೆ. ಅರಣ್ಯದ ಇಕ್ಕೆಲಗಳಲ್ಲೂ ಹಸಿರ ಹಾಸಿಗೆ ಹಾಸಿದಂತೆ ಹುಲ್ಲು ಬೆಳೆದಿದೆ. ಜಿಂಕೆಗಳು ಈ ಹುಲ್ಲನ್ನು ಮೆಲ್ಲುತ್ತಿರುವ ನೋಟ ಆಕರ್ಷಕವಾಗಿವೆ. ಅಲ್ಲಲ್ಲಿ ಕಾಡಾನೆಗಳ ಹಿಂಡು ಸಹ ಗೋಚರಿಸುತ್ತವೆ. ಅಪರೂಪದ ಪಕ್ಷಿಗಳು, ಮಂಗಗಳು, ಜಿಂಕೆ, ಕಾಡಾನೆಗಳು, ಕರಡಿಗಳು, ಸಾರಂಗಗಳೆಲ್ಲವೂ ಹಸಿರ ಮಧ್ಯದಲ್ಲಿ ಕಣ್ಣಿಗೆ ಬೀಳುತ್ತಿವೆ. ಹಸಿರುಮಯ ವಾತಾವರಣ ಪರಿಸರ ಪ್ರೇಮಿಗಳ ನೆಚ್ಚಿನ ಪ್ರದೇಶವಾಗಿ ಬದಲಾಗುತ್ತಿದೆ.

ಎಚ್.ಡಿ. ಕೋಟೆ ತಾಲ್ಲೂಕಿನ ಮೇಟಿಕುಪ್ಪೆ ಯಿಂದ ಕುಟ್ಟ, ಗೋಣಿಕೊಪ್ಪ ಮತ್ತು ಬಾಳೆಲೆವರೆಗೂ ಎರಡೂ ಬದಿಗಳಲ್ಲಿ ಹುಲ್ಲು ಹಸಿರೊಡೆದಿದೆ. ಅನೇಕ ಪ್ರಾಣಿಗಳು ಗೋಚರಿಸುತ್ತಿದ್ದು ಖಾಸಗಿ ವಾಹನಗಳ ಪ್ರವೇಶವಿಲ್ಲ.

ಕೆಎಸ್ಆರ್ಟಿಸಿ ಬಸ್ನಲ್ಲಿ ಈ ಹಸಿರ ಅಂದವನ್ನು ಕಣ್ಣುಂಬಿಕೊಳ್ಳುವ ಅವಕಾಶ ಇದೆ. ಬತ್ತಿ ಹೋಗಿದ್ದ ಹಳ್ಳ ಕೊಳ್ಳಗಳು ಮತ್ತು ಕೆರೆ ಕಟ್ಟೆಗಳು ಒಂದು ವಾರದಿಂದ ಸುರಿದ ಮಳೆಗೆ ತುಂಬಿ ಪ್ರಾಣಿಗಳಿಗೆ ದಾಹ ಇಂಗಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.