ಭೂಮಿ ಮೇಲೆ ಮಾತ್ರವಲ್ಲ ನೀರಿನ ಆಳದಲ್ಲಿಯೂ ಜೀವ ವೈವಿಧ್ಯ ಪ್ರಪಂಚ ಅಡಗಿದೆ. ಸಮುದ್ರದ ಒಡಲಲ್ಲಿನ ಅಸಂಖ್ಯ ಜೀವ ಪ್ರಭೇದಗಳು ಪರಿಸರ ಸಮತೋಲನಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಅವುಗಳಲ್ಲಿ ಕಡಲಾಮೆಗಳ ಪಾತ್ರ ಮಹತ್ವದ್ದು. ನೀರಿನಲ್ಲೇ ಜೀವನ ಕಳೆಯುವ, ಮೊಟ್ಟೆ ಇಡಲಷ್ಟೆ ನೆಲದ ಮೇಲೆ ಕಾಲಿರಿಸುವ ಕಡಲಾಮೆಗಳ ಜೀವನವೇ ಸೋಜಿಗ.

ಆಮೆಗಳ ಸಂರಕ್ಷಣೆಗೆ ಪ್ರತಿ ವರ್ಷ ಮೇ 23 ರಂದು ವಿಶ್ವ ಆಮೆಗಳ ದಿನವೆಂದು ಆಚರಿಸಲಾಗುತ್ತದೆ. ಈ ದಿಸೆಯಲ್ಲಿ ಬೆಂಗಳೂರಿನ ಆನೇಕಲ್ನ ಪ್ರಾಣಿಶಾಸ್ತ್ರ ಸಂಶೋಧಕಿ ಯಶಸ್ವಿನಿ ಎಂ. ಅವರು ‘ಪ್ರಜಾವಾಣಿ ಡಿಜಿಟಲ್’ ಜತೆ ಮಾತನಾಡಿದ್ದಾರೆ.

ಸಮುದ್ರ ಆಮೆಗಳ ಪೈಕಿ ಕರ್ನಾಟಕದಲ್ಲಿ ಕಾಣಸಿಗುವುದು ಆಲಿವ್ ರಿಡ್ಲೆ ಆಮೆಗಳು ಮಾತ್ರ. ಇವು ಮೊಟ್ಟೆ ಇಡಲು ಕರ್ನಾಟಕದ ಸಮುದ್ರ ತೀರಗಳನ್ನೇ ಆಯ್ದುಕೊಳ್ಳುತ್ತವೆ. ಬೇರೆ ಪ್ರಭೇದದ ಆಮೆಗಳು ಅಂದರೆ ಹಾಕ್ಸ್ ಬಿಲ್, ಗ್ರೀನ್ ಸೀ ಆಮೆಗಳು ಕಂಡುಬರುತ್ತವೆ, ಇವು ಕೇವಲ ಆಹಾರಗಳನ್ನು ಅರಸಿ ಬರುತ್ತವೆ. ಮೊಟ್ಟೆಗಳನ್ನು ಬೇರೆ ಜಾಗದಲ್ಲಿ ಇಡುತ್ತವೆ.

ನಮ್ಮ ರಾಜ್ಯದಲ್ಲಿ ಮುರುಡೇಶ್ವರ ಬಳಿ ಬಂಡೆ ಕಲ್ಲುಗಳು ಹೆಚ್ಚು. ಹೀಗಾಗಿ ಗ್ರೀನ್ ಸೀ ಆಮೆಗಳು ಆಹಾರ ಅರಸಿ ಬರುತ್ತವೆ. ಗ್ರೀನ್ ಸೀ ಆಮೆಗಳು ಕಂಡು ಬಂದಿವೆ ಎಂದರೆ ಅಲ್ಲಿ ಆಮೆಗಳಿಗೆ ಬೇಕಾದ ಆಹಾರ ಉತ್ತಮವಾಗಿದೆ ಎಂದರ್ಥ. ಅಲ್ಲದೆ ಮೀನುಗಳ ಸಂತತಿಯೂ ಉತ್ತಮವಾಗಿದೆ ಎಂದು ಅರಿತುಕೊಳ್ಳಬಹುದು. ಏಕೆಂದರೆ ಪಾಚಿಯನ್ನು ತಿಂದು ಮೀನು ಮೊಟ್ಟೆ ಇಡಲು ಸಹಾಯ ಮಾಡಿ ಮೀನಿನ ಸಂತತಿ ಬೆಳೆಯಲೂ ಆಮೆಗಳು ಸಹಾಯ ಮಾಡುತ್ತವೆ. ಹಾಕ್ಸ್ಬಿಲ್ ಆಮೆಗಳು ಕೆಲವು ಹವಳದಿಬ್ಬಗಳನ್ನು ಮತ್ತು ಸಸ್ಯಗಳನ್ನು ತಿನ್ನುತ್ತವೆ. ಹೀಗಾಗಿ ಹಾಕ್ಸ್ಬಿಲ್ಲ ಕಂಡುಬಂದಲ್ಲಿ ಆಳಕ್ಕೆ ಹೋಗಿ ನೋಡಿದರೆ ಹವಳದ ದಿಬ್ಬಗಳು ಇವೆ ಎಂದೇ ಹೇಳಬಹುದು.

ಆಲಿವ್ ರಿಡ್ಲೆ ಕರ್ನಾಟಕದ ಕಡಲ ತೀರವನ್ನೇ ಆಯ್ಕೆ ಮಾಡುವುದೇಕೆ?

ಕರ್ನಾಟಕದ ಸಮುದ್ರ ತೀರಗಳಲ್ಲಿ ಮರಳು ಹೆಚ್ಚಿರುತ್ತದೆ, ಬೇರೆ ಪ್ರದೇಶದ ಸಮುದ್ರ ತೀರಗಳಲ್ಲಿ ಕಲ್ಲುಗಳು ಹೆಚ್ಚಿರುತ್ತವೆ. ಹೀಗಾಗಿ ಮರಳನ್ನು ಅಗೆದು ಮೊಟ್ಟೆ ಇಟ್ಟು, ಅದರ ಮೇಲೆ ಮತ್ತೆ ಮರಳನ್ನು ಮುಚ್ಚಿ ಸರಿಯಾದ ಪ್ರಮಾಣದಲ್ಲಿ ಉಷ್ಣತೆ ದೊರಕುವಂತೆ ಮಾಡುತ್ತದೆ.

ಆಮೆಗಳ ಜನನ

ಆಮೆಗಳು ಹೆಣ್ಣಾಗಿ ಹುಟ್ಟುತ್ತವೋ ಅಥವಾ ಗಂಡಾಗಿ ಹುಟ್ಟುತ್ತವೋ ಎನ್ನುವುದು ತಾಪಮಾನದ ಮೇಲೆ ನಿರ್ಧಾರವಾಗುತ್ತದೆ. ತಾಪಮಾನ ಹೆಚ್ಚಿದ್ದರೆ ಮೊಟ್ಟೆಯೊಳಗೇ ಆಮೆಗಳು ಹೆಣ್ಣಾಗಿ ಬದಲಾಗಿ ಹುಟ್ಟುವುದು ಹೆಚ್ಚು. ತಾಪಮಾನ ಕಡಿಮೆ ಇದ್ದರೆ ಗಂಡು ಆಮೆಗಳಾಗಿ ಹುಟ್ಟುತ್ತವೆ. ಒಂದು ವೇಳೆ ಅತಿಯಾದ ತಾಪಮಾನದಿಂದ ಹೆಣ್ಣು ಆಮೆಗಳೇ ಹೆಚ್ಚು ಜನಿಸಿದರೆ, ಮುಂದಿನ ಪೀಳಿಗೆಗೆ ಗಂಡು ಆಮೆಗಳೇ ದೊರಕುವುದಿಲ್ಲ.
.ವಿಡಿಯೊ ಸ್ಟೋರಿ: ನೀರಿನಾಳದ ಕೌತುಕ ಈ ಕಡಲಾಮೆ...ಸಂಗತ: ಗದ್ದಲದ ಜಗ, ಮೌನ, ನಿಧಾನ ಮತ್ತು ಆಮೆ!.
ಮಾಲಿನ್ಯದಿಂದ ಸಮಸ್ಯೆ

ಆಮೆಗಳು ಸಾಮಾನ್ಯವಾಗಿ ತಾನು ಹುಟ್ಟಿರುವ ಜಾಗವನ್ನೇ ಹುಡುಕಿ ಬಂದು ಮೊಟ್ಟೆ ಇಡುತ್ತವೆ. ಏಕೆಂದರೆ ತಾನು ಹುಟ್ಟಿ ಸುರಕ್ಷಿತವಾಗಿ ಸಮುದ್ರಕ್ಕೆ ಸೇರಿದ್ದೇನೆ. ತನ್ನ ಮೊಟ್ಟೆಗಳೂ ಅಷ್ಟೇ ಸುರಕ್ಷಿತವಾಗಿದ್ದು, ಮರಿಗಳಾಗಿ ಸಮುದ್ರ ಸೇರಲಿ ಎನ್ನುವುದು ತಾಯಿಗರುಳಿನ ಆಸೆ.

ಆದರೆ ಈಗ ಆಗುತ್ತಿರುವ ಸಮುದ್ರ ಮಾಲಿನ್ಯದ ಪರಿಣಾಮ ಕಡಲಾಮೆ ಮೊಟ್ಟೆ ಇಡಲು ಹೊಸ ಜಾಗಗಳನ್ನು ಹುಡುಕುತ್ತಿವೆ. ಹಾಗೊಂದು ವೇಳೆ ಸುರಕ್ಷಿತ ಜಾಗವೆಂದುಕೊಂಡು ಮೊಟ್ಟೆ ಇಟ್ಟರೂ ನಾಯಿಗಳ ಕಾಟ, ಮನುಷ್ಯರ ಕುತೂಹಲಕ್ಕೆ ಇನ್ನೂ ಕಣ್ಣು ಬಿಡದ ಆಮೆಮರಿಗಳು ಬಲಿಯಾಗುತ್ತಿವೆ.

ಪ್ರಮುಖವಾಗಿ ಮೀನುಗಾರರು ಬಳಸುವ ಬಲೆಗಳು ಹಾಳಾದ ನಂತರ ಅವುಗಳನ್ನು ಸುಡುವ ಅಥವಾ ಸರಿಯಾಗಿ ನಿರ್ವಹಣೆ ಮಾಡದೆ ಸಮುದ್ರಕ್ಕೆ ಎಸೆಯುತ್ತಾರೆ. ಇದರಿಂದಾಗಿ ಕಡಲಾಮೆ ಮಾತ್ರವಲ್ಲದೆ ಕಡಲ ಪಕ್ಷಿಗಳು, ಡಾಲ್ಫಿನ್ಗಳ ಜೀವಕ್ಕೆ ಕುತ್ತು.

ಸಾಮಾನ್ಯವಾಗಿ ಕಡಲಾಮೆಗೆ ಜೆಲ್ಲಿ ಮೀನುಗಳು ಇಷ್ಟದ ಆಹಾರ. ಮನುಷ್ಯರು ಸಮುದ್ರಕ್ಕೆ ಎಸೆಯುವ ಪ್ಲಾಸ್ಟಿಕ್ಗಳು ನೀರಿನಲ್ಲಿ ತೇಲುವಾಗ ಅವುಗಳಿಗೆ ಜೆಲ್ಲಿ ಮೀನುಗಳಂತೆ ಕಾಣುತ್ತವೆ. ಅದನ್ನು ತಿಂದಮೇಲೆ ಆಮೆಗಳ ಅನ್ನನಾಳದಲ್ಲಿ ಸಿಲುಕಿ ಬ್ಲಾಕ್ ಆಗುತ್ತದೆ. ಇದರಿಂದಾಗಿ ಬೇರೆ ಯಾವ ಆಹಾರವನ್ನೂ ತಿನ್ನಲಾಗದೆ ಹಸಿವಿನಿಂದ ಮೃತಪಡುತ್ತವೆ.

ಹೀಗಾಗಿ ಸಮುದ್ರಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಕಡಲಾಮೆ ಸಂತತಿ ಸೇರಿ ಇತರ ಸಮುದ್ರ ಜೀವಿಗಳನ್ನು ಕಾಪಾಡಬಹುದು.

ಗ್ರೀನ್ ಸೀ ಆಮೆಗಳು ಅಳಿವಿನಂಚಿನ ಪ್ರಭೇದ ಎನ್ನಲಾಗಿತ್ತು. ಹೀಗಾಗಿ ಅವುಗಳು ಎಲ್ಲಿ ಮೊಟ್ಟೆ ಇಡುತ್ತವೆ ಎನ್ನುವುದನ್ನು ಪತ್ತೆ ಮಾಡಿದ ತಜ್ಞರು, ಸಂರಕ್ಷಿಸುವ ಕೆಲಸವನ್ನು ಮಾಡಿದ್ದರು. ಪರಿಣಾಮ ಈಗ ಗ್ರೀನ್ ಸೀ ಆಮೆ ಪ್ರಭೇದದ ಸಂಖ್ಯೆ ತುಸು ಸುಧಾರಿಸಿದೆ.

ಮೀನುಗಾರನ ಮಿತ್ರ ಕಡಲಾಮೆ

ವರ್ಷದ ಕೆಲವು ತಿಂಗಳುಗಳಲ್ಲಿ ಜೆಲ್ಲಿ ಮೀನುಗಳ ಸಂಖ್ಯೆ ಸಮುದ್ರದಲ್ಲಿ ಅತಿಯಾಗುತ್ತವೆ. ಜೆಲ್ಲಿ ಮೀನುಗಳಿಗೆ ಸಾವಿಲ್ಲ, ಆಮೆ ಅಥವಾ ಇತರ ಪ್ರಾಣಿಗಳ ಆಹಾರವಾಗಿಯೇ ಸಾಯಬೇಕು. ಹೀಗಿದ್ದಾಗ ಮೀನುಗಾರರಿಗೆ ಜೆಲ್ಲಿ ಮೀನುಗಳೇ ಹೆಚ್ಚು ಸಿಗುತ್ತವೆ. ಹೀಗಿರುವುದರಿಂದ, ಆಮೆಗಳ ಸಂಖ್ಯೆ ಕುಸಿದರೆ, ಮೀನುಗಾರರ ಬಲೆಗೆ ಜೆಲ್ಲಿ ಮೀನುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸಿಲುಕುತ್ತವೆ.

ಅಲ್ಲದೆ ಜೆಲ್ಲಿ ಮೀನುಗಳು ತಮಗೆ ಆಹಾರವಾಗುವ ಇತರ ಮೀನುಗಳನ್ನು ಪೂರ್ತಿ ತಿನ್ನುವುದಿಲ್ಲ. ಇದರಿಂದಾಗಿ, ಅವು ಅರ್ಧ ತಿಂದು ಬಿಟ್ಟ ಮೀನುಗಳೂ ಬಲೆಗೆ ಬೀಳುತ್ತವೆ. ಆಮೆಗಳಿದ್ದರೆ ಅವು ಜೆಲ್ಲಿ ಮೀನುಗಳನ್ನು ತಿಂದು ಸಾಮಾನ್ಯ ಮೀನುಗಳ ಸಂತತಿ ಉತ್ತಮವಾಗಿರಲು ಸಹಾಯ ಮಾಡುತ್ತವೆ, ಆಗ ಮೀನುಗಾರರಿಗೂ ಒಳ್ಳೆಯ ಮೀನು ಸಿಗುತ್ತವೆ. ಹೀಗಾಗಿಯೇ ಕಡಲಾಮೆಗಳನ್ನು ಮೀನುಗಾರರ ಮಿತ್ರ ಎನ್ನುತ್ತಾರೆ.

ಡಿಸೆಂಬರ್ನಿಂದ ಏಪ್ರಿಲ್ವರೆಗೆ ಮಾತ್ರ ಮೊಟ್ಟೆ ಇಡುವುದು ಯಾಕೆ?

ಡಿಸೆಂಬರ್ನಲ್ಲಿ ಆಮೆಗಳು ಮೊಟ್ಟೆ ಇಡುವುದಕ್ಕೆ ಆರಂಭಿಸುತ್ತವೆ. ಏಕೆಂದರೆ ಆ ಸಮಯದಲ್ಲಿ ಸಮುದ್ರದ ಅಲೆಗಳು ಬಿರುಸಾಗಿರುತ್ತವೆ. ಈ ಅಲೆಗಳು ಆಮೆಗಳನ್ನು ಸುಲಭವಾಗಿ ದಡಕ್ಕೆ ಬರಲು ಸಹಾಯ ಮಾಡುತ್ತದೆ. ಒಂದು ಕಡೆ ಮೊಟ್ಟೆ ಇಟ್ಟು, ಅದರ ಮೇಲೆ ಮರಳು ಮುಚ್ಚುತ್ತದೆ. ಜನರು ಅಥವಾ ಪ್ರಾಣಿಗಳಿಗೆ ಗೊಂದಲ ಉಂಟುಮಾಡಲು ಇನ್ನೂ ನಾಲ್ಕೈದು ಜಾಗದಲ್ಲಿ ಗುಂಡಿ ತೆಗೆದು ಖಾಲಿಯಾಗಿಯೇ ಮುಚ್ಚಿಹೋಗುವ ಮೂಲಕ ತನ್ನ ಸಂತತಿ ಕಾಪಾಡಿಕೊಳ್ಳುವ ಚತುರತೆಯನ್ನು ತೋರುತ್ತದೆ.

ಡಿಸೆಂಬರ್, ಜನವರಿ, ಫೆಬ್ರುವರಿ, ಮಾರ್ಚ್ ಮಧ್ಯದವರೆಗೂ ಮೊಟ್ಟೆ ಇಡುತ್ತವೆ. ಅಲ್ಲಿಂದ 60 ದಿನ ಇನ್ಕ್ಯೂಬೇಶನ್ (ಕಾವು ಕೊಡುವು ಕಾಲ) ಅವಧಿ ಇರುತ್ತದೆ. ಹೀಗಾಗಿ 60 ದಿನ ಕಳೆದು ಆಮೆ ಮೊಟ್ಟೆ ಹೊರಬರುವಷ್ಟರಲ್ಲಿ ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರ ಆಗಿರುತ್ತದೆ.

ಮರಳಿನ ಬೀಚ್ಗಳಲ್ಲಿ ಮಾತ್ರ ಆಮೆಗಳು ಮೊಟ್ಟೆ ಇಡುತ್ತವೆ. ಮಳೆಗಾಲದ ಸಮಯದಲ್ಲಿ ಮರಳು ಒದ್ದೆಯಾಗಿ ಬಿಗಿಯಾಗಿರುತ್ತದೆ. ಹೀಗಾಗಿ ಮೊಟ್ಟೆಯಿಂದ ಹೊರ ಬಂದ ಮರಿ ಮರಳಿನ ಮೇಲೆ ಬರಲು ಸಾಧ್ಯವಾಗುವುದಿಲ್ಲ. ಇದರಿಂದ ಗೂಡಿನೊಳಗೇ ಉಸಿರುಗಟ್ಟಿ ಸಾಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಳೆಗಾಲದಲ್ಲಿ ಆಮೆಗಳು ಮೊಟ್ಟೆ ಇಡುವುದಿಲ್ಲ.

ಇನ್ನು ಚಳಿಗಾಲದಲ್ಲಿ ಎಂದರೆ ತಾಪಮಾನ ಹೊಂದಿಕೆಯಾಗುವುದಿಲ್ಲ. ತೀರಾ ತಂಪಿನ ವಾತಾವರಣವಿದ್ದರೆ ಗಂಡು ಆಮೆಗಳೇ ಹುಟ್ಟುವುದು ಹೆಚ್ಚು. ಇದೇ ಕಾರಣಕ್ಕೆ ಚಳಿಯೂ ಅಲ್ಲದ ಬೇಸಿಗೆಯೂ ಅಲ್ಲದ ಡಿಸೆಂಬರ್ನಿಂದ ಮಾರ್ಚ್ವರೆಗೆ ಆಮೆಗಳು ಮೊಟ್ಟೆಗಳನ್ನು ಇಡುತ್ತವೆ.

ಆಮೆಗಳು ಯಾವೆಲ್ಲ ಕಾರಣಕ್ಕೆ ಮೃತಪಡಬಹುದು?

ಆಮೆಗಳು ಸಾಮಾನ್ಯವಾಗಿ 150 ವರ್ಷಗಳು ಬದುಕಿರುವ ದಾಖಲೆಯಿದೆ. ಅಮೆಗಳ ಸಾವಿಗೆ ಹಲವು ಕಾರಣಗಳಿವೆ.

ವಯಸ್ಸಾಗಿ ನೈಸರ್ಗಿಕವಾಗಿ ಮೃತಪಡಬಹುದು

ಪ್ಲಾಸ್ಟಿಕ್, ಬಲೆಯಂತಹ ಹೊರಗಿನ ವಸ್ತುಗಳನ್ನು ತಿಂದು ಗಂಟಲಲ್ಲಿ ಸಿಲುಕಿ ಹಸಿವಿನಿಂದ ಮೃತಪಡುತ್ತವೆ

ಸಾಮಾನ್ಯವಾಗಿ ಉಸಿರಾಡಲು ಆಮೆಗಳು ಸಮುದ್ರದ ನೀರಿನ ಮೇಲ್ಮೈಗೆ ಬರುತ್ತವೆ. ಈ ವೇಳೆ ಯಾವುದಾದರೂ ದೋಣಿಗಳು ಸಾಗುವಾಗ ತಾಗಿದರೆ, ಗಾಯಗಳಾಗಿ ರಕ್ತಹೆಪ್ಪುಗಟ್ಟಿ ಕಾಲಕ್ರಮೇಣ ಮೃತಪಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.