ಶಿವಮೊಗ್ಗ: ‘ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರ ಬೆನ್ನಲ್ಲೇ ಮಾನವ– ವನ್ಯಜೀವಿ ಸಂಘರ್ಷವೂ ಹೆಚ್ಚಿದೆ. ಮಾನವ ಮತ್ತು ಪ್ರಾಣಿಗಳ ನಡುವಿನ ಸಹಬಾಳ್ವೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಕಾಲ ಈಗ ಕೂಡಿ ಬಂದಿದೆ’ ಎಂದು ರಾಜ್ಯ ಸರ್ಕಾರದ ಮುಖ್ಯ ವನ್ಯಜೀವಿ ಪಾಲಕ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಹೇಳಿದರು.

ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ವನ್ಯಜೀವಿ ಮತ್ತು ನಿರ್ವಹಣಾ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಆಯೋಜಿಸಿದ್ದ ‘ಮಾನವ– ವನ್ಯಜೀವಿ ಸಂಘರ್ಷ, ಸಹಬಾಳ್ವೆ ಮತ್ತು ಜೀವವೈವಿಧ್ಯ ಸಂರಕ್ಷಣೆ’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾನವನು ಇತರ ಲಕ್ಷಾಂತರ ಜೀವಿಗಳೊಂದಿಗೆ ಈ ಭೂಮಿ ಹಂಚಿಕೊಂಡಿದ್ದಾನೆ. ಆದರೆ ಸಂಘರ್ಷಕ್ಕಿಳಿಯುತ್ತಿರುವ ಏಕೈಕ ಜೀವಿ ಮಾನವ ಮಾತ್ರ. ಜನರ ಸಹನೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಸಂಶೋಧಕರು ಮತ್ತು ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಸಹಬಾಳ್ವೆಯ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.

‘ರಾಜ್ಯದ ಅಂದಾಜು 40,000 ಚದರ ಕಿ.ಮೀ ಅರಣ್ಯ ಪ್ರದೇಶದಲ್ಲಿ 11,000 ಚದರ ಕಿ.ಮೀ ವ್ಯಾಪ್ತಿಯನ್ನು ಸಂರಕ್ಷಿತ ವಲಯವಾಗಿ ಗುರುತಿಸಲಾಗಿದೆ. ಕರ್ನಾಟಕವು ಪ್ರಸ್ತುತ 6,395 ಆನೆಗಳು ಹಾಗೂ 563ಕ್ಕೂ ಹೆಚ್ಚು ಹುಲಿಗಳನ್ನು ಹೊಂದುವ ಮೂಲಕ ದೇಶದಲ್ಲೇ ಮುಂಚೂಣಿಯಲ್ಲಿದೆ. ಸಂರಕ್ಷಣಾ ಕಾಯ್ದೆಗಳು ಮತ್ತು ವೈಜ್ಞಾನಿಕ ಕ್ರಮಗಳಿಂದಾಗಿ ಪ್ರಾಣಿಗಳ ಸಂಖ್ಯೆ ಹೆಚ್ಚಿರುವುದು ಹೆಮ್ಮೆಯ ವಿಷಯವಾಗಿದ್ದರೂ, ಇದು ಸಂಘರ್ಷಕ್ಕೂ ದಾರಿಯಾಗಿದೆ’ ಎಂದರು.

‘ಕೇವಲ ಅರಣ್ಯ ಸಂರಕ್ಷಣೆಯೇ ಸಂಘರ್ಷಕ್ಕೆ ಕಾರಣವಲ್ಲ. ಬದಲಾಗಿ ಜನಸಂಖ್ಯೆಯ ಸ್ಫೋಟ, ಕೃಷಿ ಭೂಮಿಯ ವಿಸ್ತರಣೆ, ಅರಣ್ಯದ ಅಂಚಿನವರೆಗಿನ ವಾಣಿಜ್ಯ ಬೇಸಾಯ ಮತ್ತು ಹೆಚ್ಚುತ್ತಿರುವ ವಾಹನ ಸಂಚಾರವು ಪ್ರಾಣಿಗಳ ಮುಕ್ತ ಚಲನೆಗೆ ಅಡ್ಡಿಯುಂಟುಮಾಡುತ್ತಿವೆ’ ಎಂದು ಅಭಿಪ್ರಾಯಪಟ್ಟರು.

‘ಈ ಹಿಂದೆ 27 ಸಾವಿರದಷ್ಟಿದ್ದ ಮಾನವ–ಪ್ರಾಣಿ ಸಂಘರ್ಷದ ಪ್ರಕರಣಗಳು ಕಳೆದ ವರ್ಷ 50 ಸಾವಿರಕ್ಕೆ ಏರಿಕೆಯಾಗಿದೆ. ಸರ್ಕಾರ ನೀಡುವ ಪರಿಹಾರದ ಮೊತ್ತವೂ ₹ 18 ಕೋಟಿಯಿಂದ ₹ 70 ಕೋಟಿಗೆ ಏರಿಕೆಯಾಗಿದೆ. ಇದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ’ ಎಂದು ಹೇಳಿದರು.

‘ಸಂಘರ್ಷ ತಡೆಗೆ ರೈಲ್ವೆ ಬ್ಯಾರಿಕೇಡ್, ಸೌರ ಬೇಲಿ ಹಾಗೂ ಆನೆ ನಿರೋಧಕ ಕಂದಕಗಳಂತಹ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ದೀರ್ಘಕಾಲೀನ ಪರಿಹಾರಕ್ಕಾಗಿ ವನ್ಯಜೀವಿಗಳೊಂದಿಗೆ ಸಹಬಾಳ್ವೆ ಅತ್ಯಗತ್ಯ’ ಎಂದರು.

ಸಾಕಾನ್ ಸಂಸ್ಥೆಯ ಮುಖ್ಯ ವಿಜ್ಞಾನಿ ಎಚ್.ಎನ್. ಕುಮಾರ್ ಮಾತನಾಡಿ, ‘ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೊಸ ಸಮಸ್ಯೆಯಲ್ಲ. ಅದು ಮಾನವ ನಾಗರಿಕತೆಯ ಇತಿಹಾಸದಷ್ಟೇ ಹಳೆಯದು. ಪ್ರಾಚೀನ ಕಾಲದ ನೇಪಾಳದ ಪಶುಪತಿ ಶಿಲ್ಪಕಲೆಯು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧಕ್ಕೆ ಸಾಕ್ಷಿಯಾಗಿದೆ. ‘ಪಶು’ ಎಂದರೆ ಪ್ರಾಣಿ, ‘ಪತಿ’ ಎಂದರೆ ರಕ್ಷಕ ಎಂಬ ಅರ್ಥವಿದ್ದು, ಅಂದಿನ ಕಾಲದಲ್ಲೇ ಪ್ರಾಣಿಗಳಿಗೆ ರಕ್ಷಣೆ ಅಗತ್ಯ ಎಂಬ ಚಿಂತನೆ ಇತ್ತು’ ಎಂದು ತಿಳಿಸಿದರು.

ಐಎಫ್ಎಸ್ ಅಧಿಕಾರಿ ಪುಲ್ಕಿತ್ ಮೀನಾ ಮಾತನಾಡಿ, ತಂತ್ರಜ್ಞಾನ ಮಾತ್ರದಿಂದ ವನ್ಯಜೀವಿ ಸಂರಕ್ಷಣೆ ಸಾಧ್ಯವಿಲ್ಲ. ಜನರಲ್ಲಿ ವನ್ಯಜೀವಿಗಳ ಬಗ್ಗೆ ಸಹಿಷ್ಣುತೆ ಬೆಳೆಸುವುದು ಅಗತ್ಯ ಎಂದರು.

ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಟಿ.ಎನ್. ಪ್ರಕಾಶ್ ಕಮ್ಮರಡಿ, ಐಎಫ್ಎಸ್ ಅಧಿಕಾರಿ ಯಶ್ಪಾಲ್ ಕ್ಷೀರಸಾಗರ್ ಹಾಗೂ ವನ್ಯಜೀವಿ ನಿರ್ವಹಣಾ ವಿಭಾಗದ ಮುಖ್ಯಸ್ಥ ಪ್ರೊ. ವಿಜಯಕುಮಾರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-42-348331659

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.