ಹೈಸ್ಕೂಲಿನ ಆವರಣದ ಮೆಟ್ಟಿಲುಗಳ ಮೇಲೆ ಮಕ್ಕಳ ಹೆಜ್ಜೆಗಳ ಸದ್ದು ಕೇಳಿಬರುತ್ತಿತ್ತು. ಇನ್ನೂ ಬೆಳಗಿನ ಪ್ರಾರ್ಥನೆ ಆರಂಭವಾಗಿರಲಿಲ್ಲ. ಆ ವೇಳೆಗೆ ಶಿಕ್ಷಕರ ಕೊಠಡಿಗೆ ನುಗ್ಗಿದ ಲೋಕೇಶ್ ಸಿದ್ದಿ ಎಂಬ ಹುಡುಗ ಉಸಿರಾಟವನ್ನೇ ಮರೆತು–‘ಸಾರ್!.. ಸಾರ್… ಇಲ್ಲಿ ಸ್ವಲ್ಪ ಬಂದು ನೋಡಿ… ವಿಚಿತ್ರ ಹುಳ!’ ಎಂದು ಕರೆದಾಗ, ಅವನ ಕಣ್ಣುಗಳಲ್ಲಿ ಹೊಳೆಯುತ್ತಿದ್ದ ಕುತೂಹಲವೇ ಸಾಕಾಗಿತ್ತು.

ಲೋಕೇಶ್ ಎಂದಿಗೂ ಬೆಟ್ಟದ ಅಚ್ಚರಿಗಳನ್ನು ಮೊದಲು ಶಾಲೆಗೆ ಪರಿಚಯಿಸುವವನು. ಈ ಸಲವೂ ಶಿಕ್ಷಕರನ್ನು ಶಾಲೆಯ ಹಿಂಭಾಗದ ಬೆಟ್ಟದ ಅಂಚಿಗೆ ಕರೆದುಕೊಂಡು ಹೋದ. ಅಲ್ಲಿ ಕಾಣಿಸಿಕೊಂಡ ದೃಶ್ಯವೇ ಒಂದು ವಿಚಿತ್ರ ಮೌನೋತ್ಸವ. ಹಸಿರು ಬಳ್ಳಿಯ ಗಿಡಗಳ ಟೊಂಗೆಗಳಿಗೆ ಬಿಳಿ ಮತ್ತು ನಸು ನೀಲಿ ಬಣ್ಣದ ಪುಟ್ಟ ಕೀಟಗಳು ಜೋತುಬಿದ್ದಿದ್ದವು. ದೂರದಿಂದ ನೋಡಿದರೆ ಅವು ಹೂಗಳೇನೋ ಅನ್ನಿಸುವಷ್ಟು ಆಕರ್ಷಕ. ಗಾಳಿ ಬೀಸಿದಾಗ ತುಸು ಅಲುಗಾಡುತ್ತ, ಮತ್ತೆ ತಪಸ್ಸಿಗೆ ಕುಳಿತ ಋಷಿಗಳಂತೆ ಮೌನವಾಗುತ್ತಿದ್ದವು.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಸರ್ವೋದಯ ಪ್ರೌಢಶಾಲೆಯ ಹಿಂದಿನ ಬೆಟ್ಟಗಳಲ್ಲಿ ಇಂತಹ ಅಪರೂಪದ ಕೀಟಗಳು ಕಂಡುಬರುತ್ತಿವೆ. ಸಮೀಪದ ಕೈಗಾ ಅಣುಸ್ಥಾವರ ಮತ್ತು ಕೊಡಸಳ್ಳಿ ಜಲಾಶಯದ ಸುತ್ತಮುತ್ತಲಿನ ದಟ್ಟ ಕಾಡುಗಳಲ್ಲಿ ಇವು ಹೆಚ್ಚಾಗಿ ಇರುತ್ತವೆ. ವರ್ಷದ ಕೆಲವೇ ತಿಂಗಳು ಕಾಡಿನೊಳಗೆ ಇವುಗಳ ಗುಂಪುಗಳು ಪುಟ್ಟ ಜಾತ್ರೆಯಂತೆಯೇ ಕಾಣಿಸುತ್ತವೆ. ಆದರೆ ಮಳೆಗಾಲದ ಮೊದಲ ಜೋರಿನ ಮಳೆಗೆ ಇವುಗಳು ಕಾಣೆಯಾಗಿಬಿಡುತ್ತವೆ. ಬೇಸಿಗೆಯ ಕೊನೆಯ ಭಾಗದಲ್ಲಿ ಮಾತ್ರ ಕಾಡನ್ನು ಅಲಂಕರಿಸುವ ಈ ಕೀಟಗಳ ಬದುಕು ತುಂಬ ವಿಶಿಷ್ಟ.

‘ಪ್ಲಾಂಟ್ ಹಾಪರ್’ ಎಂದು ಕರೆಯುವ ಈ ಕೀಟಗಳ ವೈಜ್ಞಾನಿಕ ಹೆಸರು Siphanta acuta ಎಂದು ಗುರುತಿಸಲಾಗಿದೆ. ಪಶ್ಚಿಮ ಘಟ್ಟಗಳ ಜೀವ ವೈವಿಧ್ಯದಲ್ಲಿ ಇವು ವಿಶೇಷ ಸ್ಥಾನ ಹೊಂದಿವೆ. ಇವುಗಳ ಆಯುಷ್ಯ ಸುಮಾರು ಒಂದು ತಿಂಗಳು ಮಾತ್ರ. ಬಿಳಿ ರೆಕ್ಕೆಗಳ ಮೇಲೆ ಸಣ್ಣ ಕಪ್ಪು ಗೆರೆಗಳು ಮತ್ತು ಮಧ್ಯದಲ್ಲಿ ಕಣ್ಣಿನಂತೆ ಕಾಣುವ ಬಿಂದು ಇವುಗಳ ವಿಶಿಷ್ಟ ಲಕ್ಷಣ. ಮೈಮೇಲೆ ಇರುವ ಮೇಣದಂತಿರುವ ಬಿಳಿ ಪದರವು ಮುಟ್ಟಿದಾಗ ಬೆರಳಿಗೆ ಅಂಟಿಕೊಳ್ಳುತ್ತದೆ.

ಚೂಪಾದ ಬಾಯಿಯಿಂದ ಸಸ್ಯಗಳ ರಸವನ್ನು ಹೀರಿಕೊಳ್ಳುವ ಇವುಗಳು, ಮೃದು ಕಾಂಡ ಹೊಂದಿರುವ ಬಳ್ಳಿಗಳನ್ನು ಆಶ್ರಯವಾಗಿಸಿಕೊಳ್ಳುತ್ತವೆ. ಹಾರುವುದಕ್ಕಿಂತ ಹೆಚ್ಚಾಗಿ ಜಿಗಿಯುವ ಗುಣದಿಂದಲೇ ಇವುಗಳಿಗೆ ‘ಪ್ಲಾಂಟ್ ಹಾಪರ್’ ಎಂಬ ಹೆಸರು ಬಂದಿದೆ.

ಕಾಡಿನ ಮಧ್ಯೆ, ನಿಶ್ಶಬ್ದದಲ್ಲಿ ಮೌನಾಚರಣೆಯಂತೆ ನಿಂತಿರುವ ಈ ಪುಟ್ಟ ಜೀವಿಗಳು, ಪ್ರಕೃತಿಯ ಸೂಕ್ಷ್ಮ ಸೌಂದರ್ಯವನ್ನು ನೆನಪಿಸುತ್ತವೆ. ನಾವು ಗಮನಿಸದೆ ಹಾದುಹೋಗುವ ಅರಣ್ಯದಲ್ಲೇ ಎಷ್ಟೋ ಅಚ್ಚರಿಗಳು ಅಡಗಿವೆ ಎಂಬುದಕ್ಕೆ ಇವು ಜೀವಂತ ಸಾಕ್ಷಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.