ಈ ಬಾರಿ ನಾಲ್ಕು ದಿನ ಮುಂಚಿತವಾಗಿಯೇ ಮುಂಗಾರು ಕೇರಳಂ ಪ್ರವೇಶಿಸಲಿದೆ, ಮೇ 26ಕ್ಕೆ ನೈರುತ್ಯ ಮುಂಗಾರಿನ ಆಗಮನವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು. ಆದರೆ ಹವಾಮಾನ ಪರಿಸ್ಥಿತಿ ಬದಲಾದ ಕಾರಣ ಇಲಾಖೆ ನೀಡಿದ ಮುನ್ಸೂಚನೆಯ ಪ್ರಕಾರ ಕೇರಳಂಗೆ ಮೇ 26ಕ್ಕೆ ಮುಂಗಾರು ಪ್ರವೇಶ ಪಡೆದಿಲ್ಲ. ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ 1 ರಂದು ಕೇರಳಂಗೆ ಮುಂಗಾರು ಪ್ರವೇಶಿಸುತ್ತದೆ.
.ಮೇ 26ಕ್ಕೆ ಕೇರಳಂಗೆ ಮುಂಗಾರು: ಭಾರತೀಯ ಹವಾಮಾನ ಇಲಾಖೆ.
ಮುಂಗಾರು ಪ್ರವೇಶವಾಗಿದೆ ಎಂದು ತಿಳಿಯಲು ಹವಾಮಾನ ಇಲಾಖೆ ಪ್ರಮುಖ ಮಾನದಂಡಗಳನ್ನು ಅನುಸರಿಸುತ್ತದೆ. ಅವುಗಳೆಂದರೆ, ಕೇರಳಂನಾದ್ಯಂತ ಇರುವ 14 ಹವಾಮಾನ ಕೇಂದ್ರಗಳ ಪೈಕಿ ಶೇ 60 ರಷ್ಟು ಕೇಂದ್ರಗಳಲ್ಲಿ ಎರಡು ದಿನಗಳ ಅವಧಿಯಲ್ಲಿ 2.5 ಮಿ.ಮೀ ಅಥವಾ ಅದಕ್ಕಿಂತ ಹೆಚ್ಚು ಮಳೆಯಾಗಿರಬೇಕು, ಮುಂಗಾರು ಆರಂಭವಾಗಲು ಪಶ್ಚಿಮ ದಿಕ್ಕಿನಿಂದ ಬಲವಾದ ಮಾರುತಗಳು ಬೀಸಬೇಕಾಗುತ್ತದೆ. ಕನಿಷ್ಠ 925 ಮಿಲಿಬಾರ್ ವೇಗದಲ್ಲಿ ಗಾಳಿ ಬೀಸುತ್ತಿರಬೇಕು. ಜತೆಗೆ, ಬಲವಾದ ಮೋಡಗಳ ರಚನೆಯಾಗಿರಬೇಕು. ಆದರೆ ಈಗ ಹವಾಮಾನದಲ್ಲಾದ ಬದಲಾವಣೆಗಳು ಮಾನದಂಡಗಳಿಗೆ ಹೊಂದಾಣಿಕೆಯಾಗಿಲ್ಲ ಎನ್ನಲಾಗಿದೆ.

ಕೇರಳಂನಲ್ಲಿ ಮಳೆಯಾಗುತ್ತಲೇ ಇದೆ

ಮುಂಗಾರು ಪ್ರವೇಶವಾಗದಿದ್ದರೂ ಕೇರಳಂನಲ್ಲಿ ಮಳೆಯಾಗುತ್ತಲೇ ಇದೆ. ತಿರುವನಂತಪುರ, ಕೊಲ್ಲಂ, ಅಳಪ್ಪುಳ, ಎರ್ನಾಕುಲಂನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆದರೆ ವಾತಾವರಣದಲ್ಲಾಗುವ ನಿರ್ದಿಷ್ಟ ಬದಲಾವಣೆಗಳ ಮೇಲೆ ಮುಂಗಾರು ಪ್ರವೇಶದ ಬಗ್ಗೆ ಅಧಿಕೃತವಾಗಿ ಹೇಳಬಹುದು ಎನ್ನುತ್ತದೆ ಹವಾಮಾನ ವಿಜ್ಞಾನ.

ಉತ್ತರ ಭಾರತದ್ದು ಬೇರೆಯದ್ದೇ ಕಥೆ

ಒಂದೆಡೆ ಕೇರಳಂ ಮುಂಗಾರಿನ ಆಗಮನಕ್ಕೆ ಸಜ್ಜಾಗಿದೆ. ಇನ್ನೊಂದೆಡೆ ಉತ್ತರ ಭಾರತದಲ್ಲಿ ತಾಪಮಾನ ಗರಿಷ್ಠ ಮಟ್ಟಕ್ಕೆ ತಲುಪಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ವಿದರ್ಭದಲ್ಲಿ 47.6 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗುತ್ತಿದೆ. ಹವಾಮಾನ ಇಲಾಖೆ ಬಿಸಿಗಾಳಿಯ ಎಚ್ಚರಿಕೆ ನೀಡಿದೆ.

ಎಲ್ ನಿನೊ ಆತಂಕ

ಈ ಬಾರಿ ಕೇವಲ ಎಲ್ ನಿನೊ ಅಲ್ಲ ಸೂಪರ್ ಎಲ್ ನಿನೊ ಇರಲಿದೆ ಎಂದು ಹವಾಮಾನ ಇಲಾಖೆ ಏಪ್ರಿಲ್ನಲ್ಲಿ ಹೇಳಿತ್ತು. ಜೂನ್ನಿಂದ ಸೆಪ್ಟೆಂಬರ್ವರೆಗೆ ಸುರಿಯುವ ಮಳೆ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದೂ ಎಚ್ಚರಿಕೆ ನೀಡಿದೆ.

ಇದರಿಂದಾಗಿ ಮುಂಗಾರು ಅವಧಿಯ ದ್ವಿತೀಯಾರ್ಧದಲ್ಲಿ ಮಳೆ ಕಡಿಮೆಯಾಗಬಹುದು. ಕೇಂದ್ರ ಮತ್ತು ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ ಮುಂಗಾರು ಮಳೆಯನ್ನೇ ನಂಬಿಕೊಂಡ ಬೆಳೆಗಳಿಗೆ ತೀವ್ರ ಪರಿಣಾಮ ಉಂಟು ಮಾಡಬಹುದು ಎಂದು ಐಎಂಡಿ ಮಾತ್ರವಲ್ಲ, ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆಯಾದ ಸ್ಕೈಮೆಟ್ ಕೂಡ ಎಚ್ಚರಿಕೆ ನೀಡಿದೆ.

ಹಾಗಾದರೆ ಮುಂಗಾರಿನ ಪ್ರವೇಶ ಯಾವಾಗ?

ಸದ್ಯ ಕರ್ನಾಟಕದಲ್ಲಂತೂ ಇಡೀ ದಿನ ಮೋಡ ಕವಿದ ವಾತಾವರಣ ಮುಂದುವರಿದಿದೆ. ರಾಜಧಾನಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಸಂಜೆಯ ವೇಳೆಗೆ ಧಾರಾಕಾರ ಮಳೆಯಾಗುತ್ತಿದೆ. ಮುಂದಿನ 7 ದಿನ ಬಿರುಗಾಳಿ ಸಮೇತ ಭಾರಿ ಮಳೆಯಾಗುವ ಸಾಧ್ಯೆತೆಯಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತವು ಮುಂಗಾರು ಮಾರುತಗಳಿಗೆ ಅಡ್ಡಿಪಡಿಸುತ್ತಿದೆ ಎಂದು ಹೇಳಿರುವ ಇಲಾಖೆ, ಜೂನ್ 2–4 ರ ನಡುವೆ ಕೇರಳಂಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದಿದೆ.

ಮಾಹಿತಿ: ಐಎಂಡಿ, ಮನಿ ಕಂಟ್ರೋಲ್, ಇಂಡಿಯಾ ಟುಡೇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.