ಶುಕ್ರವಾರ, ಮೇ 27, 2022
23 °C

70 ಕೆ.ಜಿ ತೂಕದ ಬಾಳೆಗೊನೆ ಬೆಳೆದ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯಲಹಂಕ ಹೋಬಳಿ ಜೆ.ಬಿ. ಕಾವಲ್‌ನ ರೈತ ಅಶೋಕ, ಒಂದು ಬಾಳೆ ಗಿಡದಲ್ಲಿ 70 ಕೆ.ಜಿ ತೂಕದ ಬಾಳೆಗೊನೆ ಬೆಳೆದಿದ್ದಾರೆ. ರೈತನ ಸಾಧನೆ ಗುರುತಿಸಿರುವ ತೋಟಗಾರಿಕೆ ಇಲಾಖೆ, ಗಿಡದ ಸಮೇತ ಬಾಳೆಗೊನೆಯನ್ನು ಮೇಳದಲ್ಲಿ ಪ್ರದರ್ಶನಕ್ಕೆ
ಇರಿಸಿದೆ.

ಮೇಳದಲ್ಲಿರುವ ತೋಟಗಾರಿಕೆ ಇಲಾಖೆ ಮಳಿಗೆಯಲ್ಲಿ ಬಾಳೆಗೊನೆ ಎಲ್ಲರ ಗಮನ ಸೆಳೆಯುತ್ತಿದೆ.

‘ಅಶೋಕ ಅವರು ಒಂದು ಎಕರೆ ಜಮೀನಿನಲ್ಲಿ ‘ಜಿ– 9’ ತಳಿಯ ಬಾಳೆ ಬೆಳೆದಿದ್ದಾರೆ. ಮಣ್ಣು ಹದದಿಂದ ಹಿಡಿದು, ಗಿಡಗಳು ದೊಡ್ಡದಾಗುವವರೆಗೂ ಹೆಚ್ಚಿನ ಕಾಳಜಿ ಮಾಡಿದ್ದಾರೆ. ಹಂತ ಹಂತವಾಗಿ ಗಿಡಗಳಿಗೆ ಪೋಷಕಾಂಶ ಹಾಗೂ ಔಷಧೋಪಚಾರ ನೀಡಿದ್ದಾರೆ. ಇದರ ಫಲವಾಗಿ, ಇಂದು ಬಾಳೆ ಉತ್ತಮವಾಗಿ ಬೆಳೆದಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

'ಬಹುತೇಕ ಕಡೆ ‘ಜಿ–9’ ತಳಿಯ ಬಾಳೆ, ಒಂದು ಗಿಡಕ್ಕೆ 10 ಕೆ.ಜಿ.ಯಿಂದ 40 ಕೆ.ಜಿ ಬರುತ್ತದೆ. ಇದೀಗ ಗರಿಷ್ಠ 70 ಕೆ.ಜಿ ತೂಕದ ಬಾಳೆ ಬೆಳೆಯುವ ಮೂಲಕ ಅಶೋಕ ಯಶಸ್ವಿ ರೈತರಾಗಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು