ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಬೆಳೆಯಲ್ಲಿ ಕಂದು ಜಿಗಿಹುಳು ಹತೋಟಿಗೆ ಡಿಸ್ಟ್ರಪ್ಟರ್‌

Last Updated 25 ಫೆಬ್ರುವರಿ 2022, 13:47 IST
ಅಕ್ಷರ ಗಾತ್ರ

ಬೆಂಗಳೂರು: ಭತ್ತದ ಬೆಳೆಯಲ್ಲಿ ಕಂದು ಜಿಗಿಹುಳುವಿನ ಹತೋಟಿಗಾಗಿ ಡಿಸ್ಟ್ರಪ್ಟರ್‌ ಎನ್ನುವ ಹೊಸ ಕೀಟನಾಶಕವನ್ನು ಪಿ.ಐ. ಇಂಡಸ್ಟ್ರೀಸ್‌ ಲಿಮಿಟೆಡ್‌ ಬಿಡುಗಡೆ ಮಾಡಿದೆ.

ಬೆಂಗಳೂರಿನಲ್ಲಿ ನಡೆದ ರಾಜ್ಯ ಕ್ರಿಮಿನಾಶಕ ಮಾರಾಟಗಾರರು ಮತ್ತು ವಿತರಕರ ಸಮಾರಂಭದಲ್ಲಿ ಈ ಉತ್ಪನ್ನ ಬಿಡುಗಡೆ ಮಾಡಲಾಗಿದೆ.

ಈ ಕೀಟನಾಶಕವು ಭತ್ತದ ಬೆಳೆಯಲ್ಲಿ ಕಾಣಿಸಿಕೊಳ್ಳುವ ಕಂದು ಜಿಗಿಹುಳುವನ್ನು ಪರಿಣಾಮಕಾರಿ ಆಗಿ ನಿಯಂತ್ರಿಸುತ್ತದೆ ಎಂದು ಕಂಪನಿಯ ಮಾರುಕಟ್ಟೆ ಮುಖ್ಯಸ್ಥ ದುಷ್ಯಂತ್‌ ಸೂದ್ ಹೇಳಿದರು.

ಕೀಟನಾಶಕಗಳ ಸುರಕ್ಷಿತ ಬಳಕೆ ಕುರಿತು ಮಾರಾಟ ವ್ಯವಸ್ಥಾಪಕ ರಮೇಶ್‌ ವಿವರ ನೀಡಿದರು. ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಪ್ರಶಾಂತ ಹೆಗಡೆ, ಪ್ರಧಾನ ವಾಣಿಜ್ಯ ಅಧಿಕಾರಿ ಗೌರವ್‌ ಕಾಟಿಯಾಲ್‌ ಮತ್ತಿತರರು ಸಮಾರಂಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT