ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಏನೆಲ್ಲಾ ಇರಲಿದೆ?

Last Updated 3 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಹೆಸರುಘಟ್ಟದ ಭಾರತೀಯ ಸಂಶೋಧನಾ ಸಂಸ್ಥೆಯ ಅಂಗಳದಲ್ಲಿ ಒಂದು ಬದಿ ಹೂವಿನ ಲೋಕ, ಇನ್ನೊಂದು ಬದಿಯಲ್ಲಿ ಮೈದುಂಬಿದ ತರಕಾರಿ ಗಿಡಗಳು ಲೋಕ. ಹಿಂಬದಿಯಲ್ಲಿ ಪಾಲಿಹೌಸ್‌ನಲ್ಲಿ ವಿಧ ವಿಧ ಹಣ್ಣುಗಳು ಮೈದಳೆದಿವೆ. ಅಕ್ಕಪಕ್ಕದ ತಾಕುಗಳಲ್ಲಿರುವ ಹಣ್ಣಿನ ಮರಗಳಿಗೆ ಸೊಂಟದವರೆಗೂ ಸುಣ್ಣ ಬಳಿದಿದ್ದಾರೆ. ಅಂಗಳದ ತುಂಬಾ ‘ಹಣ್ಣು, ಹೂವು, ತರಕಾರಿಗಳು ರಂಗೋಲಿ’ ಹಾಕಿದಂತೆ ಕಾಣುತ್ತಿದೆ.

ಇವು ಸಂಸ್ಥೆಯ ಆವರಣದಲ್ಲಿ ನಾಳೆಯಿಂದ ಆರಂಭವಾಗುವ ನಾಲ್ಕು ದಿನಗಳ ’ರಾಷ್ಟ್ರೀಯ ತೋಟಗಾರಿಕಾ ಮೇಳ’ಕ್ಕೆ ನಡೆದಿರುವ ಸಿದ್ಧತೆಯ ದೃಶ್ಯಗಳು. ನಾಲ್ಕು ದಿನಗಳ ಕಾಲ ನಡೆಯುವ ಮೇಳಕ್ಕೆ ಸಾವಿರಾರು ಮಂದಿ ರೈತರು ಬರುವ ನಿರೀಕ್ಷೆ ಇದೆ. ಆ ಅತಿಥಿಗಳಿಗೆ ಭರಪೂರ ಮಾಹಿತಿ ನೀಡಲು ವಿಜ್ಞಾನಿಗಳು ಸಜ್ಜಾಗಿದ್ದಾರೆ.

ಮೇಳಕ್ಕೆ ಬರುವವರಿಗಾಗಿ ಪ್ರದರ್ಶನ ತಾಕುಗಳನ್ನೂ ಸಿದ್ಧಗೊಳಿಸಲಾಗಿದೆ. ಪ್ರದರ್ಶನ ತಾಕುಗಳಲ್ಲಿ ರೋಗನಿರೋಧಕ ತಳಿಗಳ ತರಕಾರಿ ಬೆಳೆಗಳಿವೆ. ಪರಿಮಳ ಬೀರುವ ‘ಅರ್ಕ ಪರಿಮಳ’ ಗುಲಾಬಿ ತಳಿ, ಸುಗಂಧರಾಜ, ಜರ್ಬೆರಾದಂತಹ ಹೂವಿನ ಬೆಳೆಯ ತಾಕುಗಳಿವೆ. ಪಾಲಿಹೌಸ್‌ ಕೃಷಿ ಮತ್ತು ಪಾಲಿಹೌಸ್‌ಮೇಲೆ ಬೀಳುವ ಮಳೆ ನೀರು ಸಂಗ್ರಹಿಸುವ ವಿಧಾನವ್ನು ನೋಡಬಹುದು.

ಬೆಳೆಗಳ ಜತೆಗ, ಮೌಲ್ಯವರ್ಧನೆ, ಉತ್ಪನ್ನಗಳ ಮಾರುಕಟ್ಟೆ, ಜತೆಗೆ ಕೃಷಿಯನ್ನು ಉದ್ದಿಮೆಯಾಗಿಸಲು ತೋಟಗಾರಿಕೆ ಹೇಗೆ ಸಹಕಾರಿ ಎಂಬುದನ್ನು ಪ್ರಸ್ತುತಪಡಿಸುವುದಕ್ಕೂ ಸಿದ್ಧತೆಗಳು ನಡೆದಿವೆ.

263 ತಂತ್ರಜ್ಞಾನಗಳ ಪ್ರದರ್ಶನ

ಈ ಬಾರಿಯ ಮೇಳದಲ್ಲಿ 263 ತಂತ್ರಜ್ಞಾನಗಳನ್ನು ಪ್ರದರ್ಶನಕ್ಕಿಡುತ್ತಿದ್ದಾರೆ. ’ಕಳೆದ ವರ್ಷಕ್ಕೆ ಹೋಲಿಸಿದರೆ 98 ಹೊಸ ತಂತ್ರಜ್ಞಾನಗಳನ್ನು ಇದೇ ಪ್ರಥಮಬಾರಿಗೆ ಪ್ರದರ್ಶನಕ್ಕೆ ಇಡಲಾಗಿದೆ’ ಎನ್ನುತ್ತಾರೆ ಮೇಳದ ಆಯೋಜನಾ ಕಾರ್ಯದರ್ಶಿ, ಪ್ರಧಾನ ವಿಜ್ಞಾನಿ ವಿ.ಧನಂಜಯ. ಸಂಸ್ಥೆ ಇಲ್ಲಿವರೆಗೆ 13 ಹಣ್ಣಿನ ಬೆಳೆ, 26 ತರಕಾರಿ ಬೆಳೆಗಳು, 10 ಅಲಂಕಾರಿಕ ಮತ್ತು 5 ಔಷಧೀಯ ಬೆಳೆಗಳಲ್ಲಿ ಸಂಸ್ಥೆ ಸಂಶೋಧನೆ ನಡೆಸಿದೆ. ಇಲ್ಲಿಯವರೆವಿಗೂ ಹೆಚ್ಚು ಇಳುವರಿ ಮತ್ತು ರೋಗ ನಿರೋಧಕ ಶಕ್ತಿಯುಳ್ಳ 34 ಹಣ್ಣಿನ ಬೆಳೆಗಳು, 131 ತರಕಾರಿ ತಳಿಗಳು, 111 ಅಲಂಕಾರಿಕ ಮತ್ತು 13 ಔಷಧೀಯ ಬೆಳೆಗಳ ತಳಿಗಳನ್ನು ಬಿಡುಗಡೆ ಮಾಡಿದೆ. ಬೆಳೆ ಉತ್ಪಾದನೆ, ಸಸ್ಯ ಸಂರಕ್ಷಣೆಗೆ ಸಂಬಂಧಿಸಿದ 145 ತಂತ್ರಜ್ಞಾನಗಳನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಸಂಸ್ಥೆಯಿಂದ ತಂತ್ರಜ್ಞಾನದ ಪರವಾನಗಿ ಪಡೆದಿರುವ ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿವೆ. ’ಬಿಹಾರ, ಮಧ್ಯಪ್ರದೇಶ ಮತ್ತು ತಮಿಳುನಾಡಿನ ತೋಟಗಾರಿಕೆ ಇಲಾಖೆಗಳು ಪ್ರದರ್ಶನ ಮಳಿಗೆಗಳ ಜತೆಗೆ, ಮೇಳಕ್ಕೆ ಆರ್ಥಿಕ ನೆರವು ನೀಡಿವೆ. 25ಕ್ಕೂ ಅಧಿಕ ರಾಜ್ಯಗಳಿಂದ ರೈತರು ಭಾಗವಹಿಸುತ್ತಿದ್ದಾರೆ. ಇದೇ ಮೇಳದಲ್ಲಿ ಎಂಟು ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮವಿದೆ’ ಎನ್ನುತ್ತಾರೆ ಧನಂಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT