ಅಫಜಲಪುರ: ‘ಕೇಂದ್ರ ಸರ್ಕಾರ ಕಬ್ಬಿಗೆ ಎಫ್ಆರ್ಪಿ ನಿಗದಿಪಡಿಸಿರುವ ವಿಧಾನ ಅವೈಜ್ಞಾನಿಕವಾಗಿದ್ದು, ರೈತರ ಹಿತಾಸಕ್ತಿಗಳಿಗೆ ವಿರುದ್ಧ ವಾಗಿದೆ’ ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ.ಎಸ್. ಹೂಗಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಸರ್ಕಾರ ಪ್ರಸ್ತುತ ಸಕ್ಕರೆ ರಿಕವರಿ ದರದಲ್ಲಿ ಕ್ವಿಂಟಲ್ಗೆ ಕೇವಲ ₹10 ಹೆಚ್ಚಳ ಮಾಡಿದೆ. 2025–26ರಲ್ಲಿ ₹355 ಇತ್ತು. ಈ ವರ್ಷ 2026–27ರಲ್ಲಿ ₹365 ನಿಗದಿಪಡಿಸಿ, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದಿದ್ದಾರೆ.

‘ಉತ್ಪಾದನಾ ವೆಚ್ಚ, ಕಾರ್ಮಿಕ ವೆಚ್ಚ, ರಾಸಾಯನಿಕ ಗೊಬ್ಬರ, ಬೀಜ, ಇಂಧನ ವೆಚ್ಚಗಳನ್ನು ಪರಿಗಣಿಸದೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ರೈತರಿಗೆ ಮಾಡಿದ ಘೋರ ಅನ್ಯಾಯ ಇದು. ವಾಸ್ತವಿಕವಾಗಿ ರೈತರ ಎಲ್ಲಾ ಖರ್ಚು ವೆಚ್ಚಗಳನ್ನು ಲೆಕ್ಕ ಹಾಕಿದರೆ, ಕನಿಷ್ಠ ಕಬ್ಬಿನ ಎಫ್ಆರ್ಪಿ ಬೆಲೆ ₹4,500 ಆಗಿರಬೇಕು ಆಗ ಮಾತ್ರ ರೈತರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವ ಪರಿಸ್ಥಿತಿ ಉಂಟಾಗುತ್ತದೆ’ ಎಂದು ತಿಳಿಸಿದ್ದಾರೆ.

ರಾಜ್ಯದ ಎಲ್ಲ ಸಂಸದರು ಕೇಂದ್ರ ಸರ್ಕಾರದ ಮೇಲೆ ತಕ್ಷಣ ಒತ್ತಡ ಹೇರಬೇಕು. ಎಫ್ಆರ್ಪಿ ದರವನ್ನು ಮರುಪರಿಶೀಲನೆ ಮಾಡಿಸಲು ಕ್ರಮ ಕೈಗೊಳ್ಳಬೇಕು. ಈಗ ಘೋಷಿಸಿರುವ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಖಂಡನೀಯ. ರೈತರ ಹಿತಾಸಕ್ತಿಯನ್ನು ಕಾಪಾಡಲು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-31-1828689643

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.