ಬಾಗಲಕೋಟೆ: ಜಿಲ್ಲೆಯಲ್ಲಿ ದ್ವಿದಳ ಧಾನ್ಯಗಳ ಆತ್ಮನಿರ್ಭರತಾ ಅಭಿಯಾನ ಕಾರ್ಯಕ್ರಮ ಅನುಷ್ಠಾನ ಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ಕೊಯ್ಲೋತ್ತರ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ತಿಳಿಸಿದ್ದಾರೆ.

ಯೋಜನೆಯಡಿ ದ್ವಿದಳ ಧಾನ್ಯಗಳ ಸಂಸ್ಕರಣೆ ಹಾಗೂ ಪ್ಯಾಕೇಜಿಂಗ್ ಘಟಕಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾ ಗಿದ್ದು, ರೈತರ ಆದಾಯ ಹೆಚ್ಚಿಸುವುದು ಹಾಗೂ ದ್ವಿದಳ ಧಾನ್ಯಗಳಲ್ಲಿ ಮೌಲ್ಯವರ್ಧನೆಗೆ ಉತ್ತೇಜಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 60:40 ಅನುಪಾತದ ಸಹಾಯಧನದಡಿ ಯೋಜನಾ ವೆಚ್ಚದ ಶೇ33 ರಷ್ಟು ಸಹಾಯಧನವನ್ನು (ಗರಿಷ್ಟ ₹25 ಲಕ್ಷ ಮಿತಿಯೊಂದಿಗೆ) ನೀಡಲಾಗುವುದು. ಘಟಕ ನಿರ್ಮಾಣದ ಭಾಗವಾಗಿ ಕಟ್ಟಡ, ಗೋದಾಮು ಹಾಗೂ ಸಂಗ್ರಹಣಾ ವ್ಯವಸ್ಥೆಗಳ ನಿರ್ಮಾಣಕ್ಕೆ ಅರ್ಹ ಸಹಾಯಧನದ ಮೊತ್ತದ ಗರಿಷ್ಠ ಶೇ30 ರಷ್ಟು ಹಣ ಬಳಸಿಕೊಳ್ಳಲು ಅವಕಾಶವಿದೆ. ಸ್ಥಾಪಿಸಲ್ಪಡುವ ದ್ವಿದಳ ಧಾನ್ಯ ಸಂಸ್ಕರಣಾ ಘಟಕಗಳು ಪ್ರತಿ ಗಂಟೆಗೆ ಕನಿಷ್ಠ 300 ಕೆಜಿ ಸಂಸ್ಕರಣಾ ಸಾಮರ್ಥ್ಯ ಹೊಂದಿರಬೇಕು. ಬಳಕೆಯಾಗುವ ಎಲ್ಲ ಯಂತ್ರೋಪಕರಣಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಥವಾ ಸಮಾನ ಗುಣಮಟ್ಟದ ಮಾನದಂಡಗಳಿಗೆ ಅನುಗುಣ ವಾಗಿರಬೇಕು. ಫಲಾನುಭವಿಗಳು ಘಟಕ ಸ್ಥಾಪಿಸಿದ ದಿನಾಂಕದಿಂದ ಕನಿಷ್ಠ ಮೂರು ವರ್ಗಗಳವರೆಗೆ ನಿರ್ವಹಣೆ ಮಾಡುವುದು ಕಡ್ಡಾಯ. ಯೋಜನಾ ಅನುದಾನದ ದುರುಪಯೋಗ ಕಂಡುಬಂದಲ್ಲಿ ಸರ್ಕಾರದ ಚಾಲ್ತಿಯ ಲ್ಲಿರುವ ನಿಯಮಗಳ ಪ್ರಕಾರ ದಂಡ ಹಾಗೂ ವಸೂಲಿ ಕ್ರಮ ಕೈಗೊಳ್ಳ ಲಾಗುವುದು. ಆಸಕ್ತರು ತಮ್ಮ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಜೂನ್ 6ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-19-954134598

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.