ಬಾಗೇಪಲ್ಲಿ: ಕೃಷಿ ಮತ್ತು ತರಕಾರಿ ಬೆಳೆಗಳಿಗೆ ನೀರು ಹರಿಸಲು ಅಗತ್ಯವಿರುವಷ್ಟು ವೋಲ್ಟೇಜ್ ಸಹಿತ ವಿದ್ಯುತ್ ಸರಬರಾಜು ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರೈತ ಸಂಘಟನೆ (ಎಕೆಆರ್ಎಸ್) ಮಂಗಳವಾರ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಸೂಕ್ತ ವಿದ್ಯುತ್ ನಿರ್ವಹಣೆ ಮಾಡದ ಬೆಸ್ಕಾಂ ವಿರುದ್ಧ ಪ್ರತಿಭಟನಕಾರರು ಧಿಕ್ಕಾರ ಕೂಗಿದರು.

ಎಕೆಆರ್ಎಸ್ ಜಿಲ್ಲಾ ಸಂಚಾಲಕ ಮಂಜುನಾಥರೆಡ್ಡಿ ಮಾತನಾಡಿ, ಬೇಸಿಗೆ ಆರಂಭ ಆಗಿದೆ. ಶೇ 95ರಷ್ಟು ರೈತರು ಬೆಳೆಗಳನ್ನೇ ನಂಬಿದ್ದು, ಮಧ್ಯಾಹ್ನದ ನಂತರ ನೀರು ಹರಿಸಲು ಸಾಧ್ಯವಿಲ್ಲ. ಹನಿ ನೀರಾವರಿ ಪೈಪ್ಗಳಲ್ಲಿನ ನೀರಿನ ತಾಪ ಶೇ 60 ಡಿಗ್ರಿ ಸೆಲ್ಸಿಯಸ್ ಮುಟ್ಟಿರುತ್ತದೆ. ಇಂಥ ನೀರು ಬಿಡುವುದರಿಂದ ಬೆಳೆಗಳ ಬೇರು ಸಾಯುತ್ತಿವೆ ಎಂದು ಹೇಳಿದರು.

ನೀರಾವರಿಗೆ ವಿದ್ಯುತ್ ಅನ್ನು ಬೆಳಗ್ಗೆ 5 ಗಂಟೆಯಿಂದ 12 ಗಂಟೆವರೆಗೆ ನಿರಂತರವಾಗಿ ಸರಬರಾಜು ಮಾಡಬೇಕು. ವಿದ್ಯುತ್ ವೋಲ್ಟೇಜ್ ಅನ್ನು ಸಮರ್ಪಕ ರೀತಿಯಲ್ಲಿಡಬೇಕು. ಟ್ರಾನ್ಸ್ಫಾರ್ಮರ್ ಅಳವಡಿಕೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ಇತರ ತೊಂದರೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ವೇಣುಗೋಪಾಲ್ ಪ್ರತಿಭಟನಕಾರರ ಮನವಿ ಸ್ವೀಕರಿಸಿದರು. ಹಂತಹಂತದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ, ಪ್ರತಿಭಟನಕಾರರು ಪ್ರತಿಭಟನೆ ವಾಪಸ್ ಪಡೆದರು.

ಪ್ರತಿಭಟನೆಯಲ್ಲಿ ಎಕೆಆರ್ಎಸ್ನ ಹೇಮಚಂದ್ರ, ಎ.ಎನ್.ಶ್ರೀರಾಮರೆಡ್ಡಿ, ಜಯಪ್ರಕಾಶರೆಡ್ಡಿ, ಮಹಮದ್ ಎಸ್.ನೂರುಲ್ಲಾ, ನಿಜಾಮುದ್ದೀನ್, ಆಂಜನೇಯರೆಡ್ಡಿ, ರಾಮಾಂಜಿ, ಶ್ರೀನಿವಾಸ್, ವಿಶ್ವನಾಥರೆಡ್ಡಿ, ಶ್ರೀನಿವಾಸನಾಯಕ್, ಬಿ.ನರಸಿಂಹಪ್ಪ, ಜೀವಿಕಾ ನಾರಾಯಣಸ್ವಾಮಿ, ಮದ್ದಿರೆಡ್ಡಿ, ವೆಂಕಟರಾಮರೆಡ್ಡಿ, ವೆಂಕಟಶಿವಪ್ಪ, ಜಿ.ವಿ.ಸುರೇಶ್, ಮದ್ದೇಲೇಟಿರೆಡ್ಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-16-212953661

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.