ಬಸವಕಲ್ಯಾಣ: ಪುನರ್ ವೈಭವಂ ಫೌಂಡೇಶನ್ ಮತ್ತು ನಂದಿಕೂಗು ಅಭಿಯಾನ ವತಿಯಿಂದ ಬಸವಕಲ್ಯಾಣದಿಂದ ಕೂಡಲಸಂಗಮದವರೆಗೆ ನಡೆಯಲಿರುವ ಪಾದಯಾತ್ರೆಗೆ ನಗರದ ಬಸವಣ್ಣನವರ ಪರುಷಕಟ್ಟೆಯಲ್ಲಿ ಈಚೆಗೆ ಬಸವಲಿಂಗ ಪಟ್ಟದ್ದೇವರು ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿ, ‘ರೈತರ ಒಳಿತಿನ ಉದ್ದೇಶದ ಯಾತ್ರೆ ಇದಾಗಿದೆ. ಕೃಷಿಕರ ಪ್ರತಿ ಕಾರ್ಯಕ್ಕೂ ಕೈಜೋಡಿಸಬೇಕಾಗಿದೆ’ ಎಂದರು.

ಅಭಿಯಾನದ ಮಾರ್ಗದರ್ಶಕ ಸೋಮಲಿಂಗ ಪಾಟೀಲ ಮಾತನಾಡಿ, ‘ಮೂರು ವರ್ಷಗಳಿಂದ ಬೇರೆ ಬೇರೆ ಸ್ಥಳಗಳಲ್ಲಿ ಈ ಅಭಿಯಾನ ನಡೆದಿದೆ. ಕೃಷಿಕರು ಮತ್ತು ಜೋಡೆತ್ತಿನ ಮಹತ್ವ ತಿಳಿಸುವುದು ಇದರ ಉದ್ದೇಶವಾಗಿದೆ’ ಎಂದರು.

ಪುನರ್ ವೈಭವಂ ಫೌಂಡೇಶನ್ ಸಂಯೋಜಕ ಆಕಾಶ ಮೋಳ್ಕೆರಿ ಮಾತನಾಡಿ, ‘ತಾಲ್ಲೂಕಿನಲ್ಲಿ ಬಸವಜಯಂತಿ ದಿನದಿಂದ 11 ದಿನಗಳವರೆಗೆ ಈ ಅಭಿಯಾನ ನಡೆಸಿ ಅನೇಕ ಊರುಗಳಲ್ಲಿ ಜೋಡೆತ್ತಿನ ಪೂಜೆ ಕೈಗೊಳ್ಳಲಾಗಿದೆ’ ಎಂದರು.

ನಂದಿಸೇನೆ ಸಂಘಟನೆಯ ಬಸವರಾಜ ಬಿರಾದಾರ ಮಾತನಾಡಿ, ‘ಜೋಡೆತ್ತಿನ ಕೃಷಿ ಕೈಬಿಟ್ಟು ಯಾಂತ್ರಿಕವಾದ ಹಾಗೂ ರಾಸಾಯನಿಕಗಳ ಮೇಲೆ ಅವಲಂಬಿತವಾದ ವ್ಯವಸಾಯ ಕೈಗೊಳ್ಳುತ್ತಿರುವುದರಿಂದ ಪರಂಪರೆ ನಷ್ಟದಲ್ಲಿದೆ’ ಎಂದರು.

ಡಾ.ರುಚಿತಾ ಆಕಾಶ ಮೋಳ್ಕೆರಿ, ಶಿವಪುತ್ರ ಅವುಸೆ, ಆನಂದ ನಂದಿ, ಮಹೇಶ ಪಾಟೀಲ, ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-33-1379385982

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.