ಚನ್ನೇಶಪುರ (ಚನ್ನಗಿರಿ): ಕೃಷಿ ಇಲಾಖೆಯ ಮಾರ್ಗದರ್ಶನದಂತೆ ತಾಲ್ಲೂಕಿನ ಕಸಬಾ ಹೋಬಳಿಯ ಹಿರೇಮಳಲಿ, ಚನ್ನೇಶಪುರ, ಅಜ್ಜಿಹಳ್ಳಿ, ಇಟ್ಟಿಗೆ ಹಾಗೂ ಆಗರಬನ್ನಿಹಟ್ಟಿ ಗ್ರಾಮ ಪಂಚಾಯಿತಿಗಳಲ್ಲಿ ಶುಕ್ರವಾರ ನ್ಯಾನೋ ಗೊಬ್ಬರ ಹಾಗೂ ನೃಸರ್ಗಿಕ ಕೃಷಿ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು.

‘ರಾಸಾಯನಿಕ ರಸಗೊಬ್ಬರಗಳ ಬಳಕೆಯನ್ನು ನಿಯಂತ್ರಿಸಿ ಮಣ್ಣಿನ ಆರೋಗ್ಯ ಕಾಪಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ರೈತರು ಸಮತೋಲಿತ ಪೋಷಕಾಂಶ ನಿರ್ವಹಣೆ ಮತ್ತು ನೃಸರ್ಗಿಕ ಕೃಷಿ ಪದ್ಧತಿಯ ಜತೆಗೆ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಬಾರಿಯ ಮುಂಗಾರು ದುರ್ಬಲವಾಗುವ ಸಂಭವ ಇರುವುದರಿಂದ ರೈತರು ಹೆಚ್ಚಾಗಿ ಸೋಯಾಬಿನ್, ಅವರೆ ಹಾಗೂ ಇತರೆ ದ್ವಿದಳ ಧಾನ್ಯಗಳನ್ನು ಬೆಳೆಯಬೇಕು’ ಎಂದು ಕೃಷಿ ಅಧಿಕಾರಿ ಮೆಹತಾಬ್ ಆಲಿ ತಿಳಿಸಿದರು.

ತಾಂತ್ರಿಕ ವ್ಯವಸ್ಥಾಪಕಿ ಬಿ.ಎಂ. ಯಶೋಧ್, ಕೃಷಿ ಸಖಿಯರಾದ ರೇಖಾ, ಲಕ್ಷ್ಮೀದೇವಿ, ರೈತರಾದ ಧನಂಜಯ್, ನಾಗರಾಜ್, ಸುರೇಶ್, ಯೋಗೇಂದ್ರಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-43-826689569

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.